ವೆಸ್ಟ್ ಇಂಡೀಸ್ ಮಹಿಳಾ ತಂಡಕ್ಕೆ ಮುಖ್ಯ ಕೋಚ್ ಆಗಿ ಕರ್ಟ್ನಿ ವಾಲ್ಷ್ ಆಯ್ಕೆ

ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಮಾಜಿ ವೇಗಿ ಕರ್ಟ್ನಿ ವಾಲ್ಷ್ ಆಯ್ಕೆಯಾಗಿದ್ದಾರೆ. ಅಲ್ಲಿನ ರಾಷ್ಟ್ರೀಯ ಕ್ರೀಡಾ ಆಡಳಿತ ಮಂಡಳಿ ಈ ವಿಚಾರ ತಿಳಿಸಿದೆ. 57ರ ಹರೆಯದ ವಾಲ್ಷ್ 2022ರ ವರ್ಷಾಂತ್ಯದ ವರೆಗೆ ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡದ ಜವಾಬ್ದಾರಿ ಹೊರಲಿದ್ದಾರೆ.
ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಮತ್ತು ಮಹಿಳಾ ಟಿ20 ವಿಶ್ವಕಪ್‌ಗೆ ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡವನ್ನು ಸಜ್ಜುಗೊಳಿಸುವ ಹೊಣೆಗಾಗಿಕೆಯೂ ಕರ್ಟ್ನಿ ವಾಲ್ಷ್ ಹೆಗಲ ಮೇಲಿದೆ. ವೆಸ್ಟ್ ಇಂಡೀಸ್ ಪರ ವಾಲ್ಷ್ 132 ಟೆಸ್ಟ್ ಪಂದ್ಯಗಳಲ್ಲಿ 519 ವಿಕೆಟ್‌ಗಳನ್ನು ಪಡೆದಿದ್ದಾರೆ.
ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್ ವೇಳೆ ಕರ್ಟ್ನಿ ವಾಲ್ಷ್ ಅವರು ವಿಂಡೀಸ್ ಮಹಿಳಾ ತಂಡಕ್ಕಾಗಿ ಅಲ್ಪಾವಧಿಯ ಒಪ್ಪಂದದಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಟೂರ್ನಿಯಲ್ಲಿ ಗ್ರೂಪ್ 'ಬಿ'ಯಲ್ಲಿದ್ದ ವೆಸ್ಟ್ ಇಂಡೀಸ್ ತಂಡ ನಾಲ್ಕು ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 2ರಲ್ಲಿ ಸೋತು, 1 ಪಂದ್ಯ ಟೈ ಮಾಡಿಕೊಂಡಿತ್ತು.
'ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಯಾವ ಮುಖಾಂತರವಾದರೂ ಸೇವೆ ಸಲ್ಲಿಸುವ ಆಲೋಚನೆ ನನ್ನಲ್ಲಿತ್ತು. ಇದು ನನಗೆ ರೋಮಾಂಚಕಾರಿ ಸವಾಲು. ವೆಸ್ಟ್ ಇಂಡೀಸ್ ಕ್ರಿಕೆಟ್ ಅಭಿವೃದ್ಧಿಗೆ ನಾನು ನೆರವು ನೀಡುತ್ತೇನೆ,' ಎಂದು ವಾಲ್ಷ್ ಹೇಳಿಕೆಯ ಮೂಲಕ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications