Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆ್ಯಶಸ್ ಸರಣಿಯಲ್ಲಿ ಕೋವಿಡ್ ಡ್ರಾಮಾ: ಅಡಿಲೇಡ್ ಟೆಸ್ಟ್‌ನಿಂದ ಆಸ್ಟ್ರೇಲಿಯಾ ನಾಯಕ ಔಟ್!

Pat cummins

ಕೋವಿಡ್-19 ಪಾಸಿಟಿವ್ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಕ್ಕಾಗಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಎರಡನೇ ಟೆಸ್ಟ್ ಪಂದ್ಯ ಶುರುವಾಗುವ ಕೆಲ ಗಂಟೆ ಮೊದಲು ತಂಡದಿಂದ ಹೊರಬಿದ್ದಿದ್ದಾರೆ. ಈ ಮೂಲಕ ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಆ್ಯಷಸ್ ಟೆಸ್ಟ್ ಪಂದ್ಯಕ್ಕೆ ಆಸೀಸ್ ನಾಯಕನೇ ಅಲಭ್ಯರಾಗಿದ್ದಾರೆ.

ಪ್ಯಾಟ್ ಕಮಿನ್ಸ್ ಕುರಿತಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಅಡಿಲೇಡ್ ಟೆಸ್ಟ್‌ ಪಂದ್ಯಕ್ಕೂ ಮೊದಲೇ ಮಹತ್ವದ ಬದಲಾವಣೆ ಆಗಿದೆ. ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ತಂಡವನ್ನ ಮುನ್ನಡೆಸಿದ್ದಾರೆ. 2018ರಲ್ಲಿ ಚೆಂಡು ವಿರೂಪಗೊಳಿಸಿದ ಆರೋಪದ ಮೇಲೆ ನಾಯಕತ್ವ ಕಳೆದುಕೊಂಡಿದ್ದ ಸ್ಟೀವ್ ಸ್ಮಿತ್ 30ಕ್ಕೂ ಹೆಚ್ಚು ತಿಂಗಳುಗಳ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಪ್ಯಾಟ್ ಕಮಿನ್ಸ್ ಅಲಭ್ಯತೆಯಿಂದಾಗಿ ಸ್ಟೀವ್ ಸ್ಮಿತ್ ನಾಯಕನಾಗಿದ್ದು, ಟ್ರಾವಿಸ್ ಹೆಡ್ ಉಪನಾಯಕನಾಗಿ ಆಯ್ಕೆಗೊಂಡಿದ್ದಾರೆ. ಮೈಕಲ್ ನೆಸರ್ ಪ್ಯಾಟ್ ಕಮಿನ್ಸ್ ಜಾಗದಲ್ಲಿ ಸ್ಥಾನ ಪಡೆದು ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ.ಪ್ಯಾಟ್ ಕಮಿನ್ಸ್ ಬುಧವಾರ ಆಟದ ಮುನ್ನಾದಿನದಂದು ಅಡಿಲೇಡ್‌ನ ರೆಸ್ಟೋರೆಂಟ್‌ನಲ್ಲಿ ಇನ್ನೊಬ್ಬ ವೃತ್ತಿಪರ ಕ್ರಿಕೆಟಿಗನೊಂದಿಗೆ ಊಟ ಮಾಡುತ್ತಿದ್ದಾಗ ಪಕ್ಕದ ಟೇಬಲ್‌ನಲ್ಲಿ ಯಾರೋ ಪಾಸಿಟಿವ್ ಕೇಸ್ ಎಂದು ಗುರುತಿಸಲಾಯಿತು. ಕಮ್ಮಿನ್ಸ್ ತಕ್ಷಣವೇ ಹೊರಟು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವಿಷಯ ಗಮನಕ್ಕೆ ಬಂದ ತಕ್ಷಣ ಕಮಿನ್ಸ್ ಪ್ರತೇಕವಾಗಿದ್ದಾರೆ. ಪಿಸಿಆರ್ ಟೆಸ್ಟ್‌ ವರದಿ ಕೂಡ ನೆಗೆಟಿವ್ ಬಂದಿದೆ ಎಂದು ಸೌತ್ ಆಸ್ಟ್ರೇಲಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೋಟೋಕಾಲ್ ಪ್ರಕಾರ ಲಸಿಕೆ ಹಾಕಿಸಿಕೊಂಡವು ಸಹ ದಕ್ಷಿಣ ಆಸ್ಟ್ರೇಲಿಯಾದ ಆರೋಗ್ಯ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು. ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ ತಕ್ಷಣವೇ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಮತ್ತು 7 ದಿನಗಳವರೆಗೆ ಪ್ರತ್ಯೇಕಿಸಬೇಕಾಗುತ್ತದೆ.

ಅವರು ನಂತರ ದಿನ 6 ಮತ್ತು 13 ರಂದು ಕೋವಿಡ್ ಪರೀಕ್ಷೆಗಳನ್ನು ಹೊಂದಿರುತ್ತಾರೆ ಮತ್ತು ಸಾಮಾನ್ಯ ಚಟುವಟಿಕೆಯನ್ನು ಪುನರಾರಂಭಿಸಲು ನೆಗೆಟಿವ್ ರಿಸಲ್ಟ್‌ ಅಗತ್ಯವಿರುತ್ತದೆ.

ಟಿಮ್ ಪೈನ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿದ್ದ ಪ್ಯಾಟ್ ಕಮಿನ್ಸ್ ಆ್ಯಷಸ್ ಸರಣಿ ಮೊದಲ ಟೆಸ್ಟ್ ನಲ್ಲಿ ಐದು ವಿಕೆಟ್ ಕಬಳಿಸಿದ್ದಲ್ಲದೆ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಆದ್ರೆ ಎರಡನೇ ಟೆಸ್ಟ್‌ ಆಡುವ ಮುನ್ನವೇ ಈ ಅಚಾನಕ್ ಘಟನೆಯಿಂದಾಗಿ ಅಡಿಲೇಡ್ ಟೆಸ್ಟ್‌ನಿಂದ ಹೊರಗುಳಿಯಬೇಕಾಗಿ ಬಂದಿದೆ. ಸ್ಟೀವ್ ಸ್ಮಿತ್ ನಾಯಕನಾಗಿ ತಂಡವನ್ನ ಮುನ್ನಡೆಸಲಿದ್ದಾರೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ
ಅಡಿಲೇಡ್‌ನ ಓವಲ್ ಟೆಸ್ಟ್ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಸ್ಟ್ರೇಲಿಯಾ ಪರ ಕೇವಲ ಒಂದು ಬದಲಾವಣೆ ಆಗಿದ್ದು, ಇಂಗ್ಲೆಂಡ್ ತಂಡದ ಪರ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡರ್ಸನ್ ಕಂಬ್ಯಾಕ್ ಮಾಡಿದ್ದಾರೆ. ಉಭಯ ತಂಡಗಳ ಪ್ಲೇಯಿಂಗ್ 11 ಈ ಕೆಳಗಿದೆ

ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ 11
ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮೈಕೆಲ್ ನೆಸರ್, ಮಿಚೆಲ್ ಸ್ಟಾರ್ಕ್, ನಥಾನ್ ಲಿಯಾನ್, ಜೈ ರಿಚರ್ಡ್ಸನ್

ಇಂಗ್ಲೆಂಡ್ ತಂಡದ ಪ್ಲೇಯಿಂಗ್ 11
ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್(ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

Story first published: Thursday, December 16, 2021, 9:10 [IST]
Other articles published on Dec 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+