ಸಿಪಿಎಲ್ 2020: ಆಟಗಾರರ ಅಂತಿಮ ಸ್ಕ್ವಾಡ್ ಪಟ್ಟಿ ಬಿಡುಗಡೆಗೊಳಿಸಿದ ಫ್ರಾಂಚೈಸಿಗಳು

ಕೆರಿಬಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಂತೆ ಸಿಪಿಎಲ್‌ನ ಈ ಬಾರಿಯ ಆವೃತ್ತಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಆಟಗಾರರ ಅಂತಿಮ ಸ್ಕ್ವಾಡ್ ಪಟ್ಟಿಯಲ್ಲಿ ಸಿಪಿಎಲ್ ಫ್ರಾಂಚೈಸಿಗಳು ಬಿಡುಗಡೆ ಮಾಡಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಆಟಗಾರರು ಹಾಗೂ ಸಿಬ್ಬಂಧಿಗಳು ಈಗಾಗಲೇ ಟ್ರೆನಿಡಾಡ್&ಟೊಬ್ಯಾಗೋ ಸೇರಿಕೊಂಡಿದ್ದಾರೆ.
ಮುಂದಿನ 14 ದಿನಗಳ ಕಾಲ ಎಲ್ಲಾ ಆಟಗಾರರು ಹಾಗೂ ಸಿಬ್ಬಂಧಿಗಳು ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಟ್ರೆನಿಡಾಡ್&ಟೊಬ್ಯಾಗೋಗೆ ಪ್ರವಾಸ ಕೈಗೊಳ್ಳುವ 72 ಗಂಟೆಗಳಿಗೂ ಮುನ್ನ ಎಲ್ಲಾ ಆಟಗಾರರ ಕೋವಿಡ್19 ಪರೀಕ್ಷೆ ನಡೆಸಲಾಗಿದ್ದು ಎಲ್ಲಾ ಕೊರೊನಾ ವೈರಸ್ ಮುಕ್ತರಾಗಿದ್ದಾರೆ ಎಂದು ಖಚಿತಪಡಿಸಿದ ನಂತರವೇ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ.
ಮೂವರು ಆಟಗಾರರು ಹಾಗೂ ಓರ್ವ ಕೋಚ್ ಪ್ರೋಟೋಕಾಲ್ ಹಿನ್ನೆಲೆಯಲ್ಲಿ ಪ್ರವಾಸದಿಂದ ಅಂತಿಮ ಹಂತದಲ್ಲಿ ತಪ್ಪಿಸಿಕೊಂಡಿದ್ದಾರೆ. ಓರ್ವ ಆಟಗಾರನ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದ್ದು ಆತ ಹಾಗೂ ಆತನ ಜೊತೆ ಅಭ್ಯಾಸ ನಡೆಸಿದ್ದ ಇಬ್ಬರು ಆಟಗಾರರನ್ನು ಪ್ರವಾಸದಿಂದ ಹಿಂದೆಗೆದುಕೊಳ್ಳಲಾಗಿದೆ. ಮತ್ತೊಂದೆಡೆ ಕೋಚ್ ಒಬ್ಬರ ವರದಿ ಕೂಡ ಪಾಸಿಟಿವ್ ಬಂದಿದ್ದು ಅವರಿಗೂ ಪ್ರವಾಸಕ್ಕೆ ನಿರಾಕರಿಸಲಾಗಿದೆ.
ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳ ಅಂತಿಮ ಸ್ಕ್ವಾಡ್ ಪಟ್ಟಿ ಈ ಕೆಳಗಿನಂತಿದೆ.

ಜಮೈಕಾ ತಲ್ಲಾವಾಸ್:
ಆಂಡ್ರೆ ರಸ್ಸೆಲ್, ಸಂದೀಪ್ ಲಮಿಚಾನೆ, ಕಾರ್ಲೋಸ್ ಬ್ರಾಥ್‌ವೈಟ್, ರೋವ್ಮನ್ ಪೊವೆಲ್, ಮುಜೀಬ್ ಉರ್ ರಹಮಾನ್, ಗ್ಲೆನ್ ಫಿಲಿಪ್ಸ್, ಚಾಡ್ವಿಕ್ ವಾಲ್ಟನ್, ಓಶೇನ್ ಥಾಮಸ್, ಆಸಿಫ್ ಅಲಿ, ಫಿಡೆಲ್ ಎಡ್ವರ್ಡ್ಸ್, ಪ್ರೆಸ್ಟನ್ ಮೆಕ್‌ಸ್ವೀನ್, ಜೆರ್ಮೈನ್ ಬ್ಲ್ಯಾಕ್‌ವುಡ್, ನಿಕೋಲಸ್ ಕಿರ್ಟನ್, ರಾಮಲ್ ಲೂಯಿಸ್ ಪರ್ಮಾಲ್, ರಿಯಾನ್ ಪರ್ಸೌಡ್.

ಸೇಂಟ್ ಲೂಸಿಯಾ ಜೌಕ್ಸ್:
ರೋಸ್ಟನ್ ಚೇಸ್, ಮೊಹಮ್ಮದ್ ನಬಿ, ಡೇರೆನ್ ಸ್ಯಾಮಿ, ನಜೀಬುಲ್ಲಾ ಖಾದ್ರಾನ್, ಆಂಡ್ರೆ ಫ್ಲೆಚರ್, ಕೆಸ್ರಿಕ್ ವಿಲಿಯಮ್ಸ್, ಸ್ಕಾಟ್ ಕುಗ್ಗಲೀಜ್ನ್, ಚೆಮರ್ ಹೋಲ್ಡರ್, ಒಬೆಡ್ ಮೆಕಾಯ್, ರಾಹಕೀಮ್ ಕಾರ್ನ್‌ವಾಲ್, ಮಾರ್ಕ್ ಡಯಾಲ್, ಜಹೀರ್ ಖಾನ್, ಕಿಮಾನಿ ಮೆಲಿಯಸ್, ಲೆವೆಲಿಕೊ ಬೌಚರ್ ಗ್ಲೆನ್, ಸಾದ್ ಬಿನ್ ಜಾಫರ್.

ಟ್ರಿನ್‌ಬಾಗೊ ನೈಟ್ ರೈಡರ್ಸ್:
ಡ್ವೇನ್ ಬ್ರಾವೋ, ಕೀರನ್ ಪೊಲಾರ್ಡ್, ಸುನಿಲ್ ನರೈನ್, ಕಾಲಿನ್ ಮುನ್ರೊ, ಫವಾದ್ ಅಹ್ಮದ್, ಡ್ಯಾರೆನ್ ಬ್ರಾವೋ, ಲೆಂಡ್ಲ್ ಸಿಮ್ಮನ್ಸ್, ಖಾರಿ ಪಿಯರೆ, ಟಿಮ್ ಸೀಫರ್ಟ್, ಸಿಕಂದರ್ ರಾಜಾ, ಆಂಡರ್ಸನ್ ಫಿಲಿಪ್, ಪ್ರವೀಣ್ ಟ್ಯಾಂಬೆ, ಜೇಡೆನ್ ಸೀಲ್ಸ್, ಅಮೀರ್ ಜಂಗೂ, ಟಿಯಾನ್ ವೆಬ್‌ಸ್ಟರ್ ಹೊಸೈನ್, ಮುಹಮ್ಮದ್ ಅಲಿ ಖಾನ್.

ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯೋಟ್ಸ್:
ಕ್ರಿಸ್ ಲಿನ್, ಬೆನ್ ಡಂಕ್, ಎವಿನ್ ಲೂಯಿಸ್, ನಿಕ್ ಕೆಲ್ಲಿ, ಸೊಹೈಲ್ ತನ್ವೀರ್, ಇಶ್ ಸೋಧಿ, ಶೆಲ್ಡನ್ ಕಾಟ್ರೆಲ್, ಡೆನೇಶ್ ರಾಮ್ಡಿನ್, ರಾಯದ್ ಎಮ್ರಿತ್, ಇಮ್ರಾನ್ ಖಾನ್, ಅಲ್ಜಾರಿ ಜೋಸೆಫ್, ಜೋಶುವಾ ಡಿ ಸಿಲ್ವಾ, ಡೊಮಿನಿಕ್ ಡ್ರೇಕ್ಸ್, ಕಾಲಿನ್ ಆರ್ಚಿಬಾಲ್ಡ್, ಜಾನ್ ರಸ್ ಜಗ್ಗರ್, ಜಹ್ಮರ್ ಹ್ಯಾಮಿಲ್ಟನ್.

ಬಾರ್ಬಡೋಸ್ ಟ್ರೈಡೆಂಟ್ಸ್:
ರಶೀದ್ ಖಾನ್, ಜೇಸನ್ ಹೋಲ್ಡರ್, ಕೋರೆ ಆಂಡರ್ಸನ್, ಶಮರ್ ಬ್ರೂಕ್ಸ್, ಮಿಚೆಲ್ ಸ್ಯಾಂಟ್ನರ್, ಜಾನ್ಸನ್ ಚಾರ್ಲ್ಸ್, ಶೈ ಹೋಪ್, ಹೇಡನ್ ವಾಲ್ಷ್ ಜೂನಿಯರ್, ಆಶ್ಲೇ ನರ್ಸ್, ಜೊನಾಥನ್ ಕಾರ್ಟರ್, ರೇಮನ್ ರೀಫರ್, ಕೈಲ್ ಮೇಯರ್ಸ್, ಜೋಶುವಾ ಬಿಷಪ್, ನಯೀಮ್ ಯಂಗ್, ಜಸ್ಟಿನ್ ಗ್ರೀವ್ಸ್, ಕಿಯೋನ್ ಹಾರ್ಡಿಂಗ್, ಶಯಾನ್ ಜಹಾಂಗೀರ್.

ಗಯಾನಾ ಅಮೆಜಾನ್ ವಾರಿಯರ್ಸ್:
ಇಮ್ರಾನ್ ತಾಹಿರ್, ನಿಕೋಲಸ್ ಪೂರನ್, ಬ್ರಾಂಡನ್ ಕಿಂಗ್, ರಾಸ್ ಟೇಲರ್, ಶಿಮ್ರಾನ್ ಹೆಟ್ಮಿಯರ್, ಕ್ರಿಸ್ ಗ್ರೀನ್, ಕೀಮೋ ಪಾಲ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ನವೀನ್-ಉಲ್-ಹಕ್, ಚಂದ್ರಪುಲ್ ಹೆಮರಾಜ್, ಕೆವಿನ್ ಸಿಂಕ್ಲೇರ್, ಅಶ್ಮೀದ್ ನೆಡ್, ಓಡಿಯನ್ ಸ್ಮಿತ್ ಬ್ರಾಂಬಲ್, ಜಸ್ದೀಯೋ ಸಿಂಗ್, ಕಿಸ್ಸೂಂದಾತ್ ಮ್ಯಾಗ್ರಾಮ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications