
ಟ್ರಿನಿಡಾಡ್: ಟ್ರಿನ್‌ಬಾಗೊ ನೈಟ್ ರೈಡರ್ಸ್ ನಾಯಕ ಕೀರನ್ ಪೊಲಾರ್ಡ್, ಕಾಲಿನ್ ಮುನ್ರೋ ಮತ್ತು ಡ್ಯಾರೆನ್ ಬ್ರಾವೋ ಅಬ್ಬರದಾಟಕೆ ಬಾರ್ಬಡೋಸ್ ಟ್ರೈಡೆಂಟ್ಸ್ ಶರಣಾಗಿದೆ. ಭಾನುವಾರ (ಆಗಸ್ಟ್ 23) ನಡೆದ ಕೆರಿಬಿಯನ್ ಲೀಗ್ 9ನೇ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ 19 ರನ್ ಗೆಲುವನ್ನಾಚರಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನಿಂದ ಲೆಂಡ್ಲ್ ಸಿಮ್ಮನ್ಸ್ 21, ಸುನಿಲ್ ನರೈನ್ 8, ಕಾಲಿನ್ ಮುನ್ರೋ 50 (30 ಎಸೆತ), ಡ್ಯಾರೆನ್ ಬ್ರಾವೋ ಅಜೇಯ 54 (36), ಕೀರನ್ ಪೊಲಾರ್ಡ್ 41 (17) ರನ್ ಸೇರಿಸಿದರು. ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 185 ರನ್ ಕಲೆ ಹಾಕಿತು.
ಗುರಿ ಬೆನ್ನಟ್ಟಿದ ಟ್ರೈಡೆಂಟ್ಸ್ ನಿಂದ ಜಾನ್ಸನ್ ಚಾರ್ಲ್ಸ್ 52 (33 ಎಸೆತ), ಶಾಯ್ ಹೋಪ್ 36, ಜೋನಾಥನ್ ಕಾರ್ಟರ್ 8, ನಾಯಕ ಜೇಸನ್ ಹೋಲ್ಡರ್ ಅಜೇಯ 34, ಆ್ಯಶ್ಲೆ ನರ್ಸ್ 21 ರನ್ ಕೊಡುಗೆಯೊಂದಿಗೆ 20 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದು 166 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಟ್ರಿನ್‌ಬಾಗೊ ನೈಟ್ ರೈಡರ್ಸ್ ಇನ್ನಿಂಗ್ಸ್‌ನಲ್ಲಿ ಟ್ರೈಡೆಂಟ್ಸ್‌ನ ಜೇಸನ್ ಹೋಲ್ಡರ್, ಆ್ಯಶ್ಲೆ ನರ್ಸ್ ಮತ್ತು ರೇಮನ್ ರೀಫರ್ ತಲಾ 1 ವಿಕೆಟ್ ಪಡೆದರೆ, ಬಾರ್ಬಡೋಸ್ ಟ್ರೈಡೆಂಟ್ಸ್ ಇನ್ನಿಂಗ್ಸ್‌ನಲ್ಲಿ ಅಲಿ ಖಾನ್, ಖೇರಿ ಪಿಯರೆ, ಜೇಡನ್ ಸೀಲ್ಸ್, ಸುನಿಲ್ ನರೈನ್ ಮತ್ತು ಫವಾದ್ ಅಹ್ಮದ್ ತಲಾ 1 ವಿಕೆಟ್ ಪಡೆದರು. ಕಾಲಿನ್ ಮುನ್ರೋ ಪಂದ್ಯಶ್ರೇಷ್ಠರೆನಿಸಿದರು.