CPL 2021: ಸಿಪಿಎಲ್ ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಆಟಗಾರರ ಅಂತಿಮ ಪಟ್ಟಿ

ಬೆಂಗಳೂರು, ಆಗಸ್ಟ್ 18: ಚುಟುಕು ಕ್ರಿಕೆಟ್ ಪ್ರಿಯರು ಐಪಿಎಲ್ ಟೂರ್ನಿಯ ಎರಡನೇ ಚರಣದ ಪಂದ್ಯಗಳು ಹಾಗೂ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಅದಕ್ಕೂ ಮುನ್ನವೇ ಮತ್ತೊಂದು ಪ್ರಮುಖ ಟಿ20 ಲೀಗ್ ಕ್ರಿಕೆಟ್ ಆರಂಭವಾಗಲು ಸಜ್ಜಾಗುತ್ತಿದೆ. ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಕುತೂಹಲ ಹಾಗೂ ರೋಮಾಂಚನಕಾರಿ ಅನುಭವ ನೀಡುವ ಮೂಲಕ ಖ್ಯಾತಿ ಪಡೆದಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ಈಗ ಮತ್ತೊಂದು ಆವೃತ್ತಿಗೆ ಸಜ್ಜಾಗುತ್ತಿದೆ. ಐಪಿಎಲ್‌ನ ಉಳಿದ ಪಂದ್ಯಗಳು ಹಾಗೂ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಕೆರಿಬಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ.
ಈ ಖ್ಯಾತ ಕ್ರಿಕೆಟ್ ಲೀಗ್‌ನಲ್ಲಿ ವಿಶ್ವದ ಪ್ರಖ್ಯಾತ ಕ್ರಿಕೆಟ್ ಆಟಗಾರರು ಪಾಲ್ಗೊಳ್ಳುತ್ತಿರುವುದು ಟೂರ್ನಿಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಕ್ರಿಸ್ ಗೇಲ್, ಡ್ವೇನ್ ಬ್ರಾವೊ, ಕಾರ್ಲೋಸ್ ಬ್ರಾಥ್‌ವೈಟ್, ಶೋಯೆಬ್ ಮಲಿಕ್, ಸುನಿಲ್ ನರೇನ್, ಫಾಫ್ ಡು ಪ್ಲೆಸಿಸ್, ರವಿ ಬೋಪಾರ, ಗ್ಲೆನ್ ಫಿಲಿಪ್ಸ್ ಮತ್ತು ಕಿರಾನ್ ಪೊಲಾರ್ಡ್ ಅವರಂತಾ ಖ್ಯಾತನಾಮ ಆಟಗಾರರು ಸಿಪಿಎಲ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಈ ಬಾರಿಯ ಸಿಪಿಎಲ್ ಟೂರ್ನಿ ಆಗಸ್ಟ್ 26ರಿಂದ ಆರಂಭವಾಗಲಿದ್ದು ಮೊದಲ ಪಂದ್ಯ ಹಾಲಿ ಚಾಂಪಿಯನ್ ಟ್ರಿನ್‌ಬ್ಯಾಗೋ ನೈಟ್‌ರೈಡರ್ಸ್ ಹಾಗೂ ಗಾಯಾನಾ ಅಮೇಜಾನ್ ವಾರಿಯರ್ಸ್ ಮಧ್ಯೆ ನಡೆಯಲಿದೆ. ಇನ್ನು ಈ ಬಾರಿಯ ಸಿಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಸಂಪೂರ್ಣ ಆಟಗಾರರ ಅಂತಿಮ ಪಟ್ಟಿ ಇಲ್ಲಿದೆ.

'ಜಮೈಕಾ ತಲ್ಲವಾಸ್' ತಂಡದ ಸಂಪೂರ್ಣ ಆಟಗಾರರ ಪಟ್ಟಿ
ಆಂಡ್ರೆ ರಸೆಲ್, ಕ್ರಿಸ್ ಗ್ರೀನ್, ಕಾರ್ಲೋಸ್ ಬ್ರಾಥ್‌ವೈಟ್, ರೋವ್‌ಮನ್ ಪೊವೆಲ್, ಹೈದರ್ ಅಲಿ, ಚಾಡ್ವಿಕ್ ವಾಲ್ಟನ್, ಫಿಡೆಲ್ ಎಡ್ವರ್ಡ್ಸ್, ಕೈಸ್ ಅಹ್ಮದ್, ಜೇಸನ್ ಮೊಹಮ್ಮದ್, ಮೈಗೇಲ್ ಪ್ರಿಟೋರಿಯಸ್, ಕೆನ್ನಾರ್ ಲೂಯಿಸ್, ಶಮರಹ್ ಬ್ರೂಕ್ಸ್, ವೀರಾಸಮ್ಮಿ ಪೆರ್ಮಾಲ್, ಅಬಿಜೈ ಮಾನ್ಸಿಂಗ್, ಜೋಶುವಾ ಜೇಮ್ಸ್, ಕಿರ್ಕ್ ಮೆಕೆಂಜಿ, ರಿಯಾನ್ ಪರ್ಸೌದ್.

'ಸೇಂಟ್ ಲೂಸಿಯಾ ಕಿಂಗ್ಸ್' ತಂಡದ ಸಂಪೂರ್ಣ ಆಟಗಾರರ ಪಟ್ಟಿ
ಫಾಫ್ ಡು ಪ್ಲೆಸಿಸ್, ಕೀಮೊ ಪಾಲ್, ವಹಾಬ್ ರಿಯಾಜ್, ಟಿಮೊಟಿ ಡೇವಿಡ್, ಆಂಡ್ರೆ ಫ್ಲೆಚರ್, ಕೆಸ್ರಿಕ್ ವಿಲಿಯಮ್ಸ್, ಉಸ್ಮಾನ್ ಖಾದಿರ್, ಸಮಿತ್ ಪಟೇಲ್, ಓಬೇದ್ ಮೆಕ್ಕಾಯ್, ರಖೀಮ್ ಕಾರ್ನ್ವಾಲ್, ಮಾರ್ಕ್ ಡಯಾಲ್, ರೋಸ್ಟನ್ ಚೇಸ್, ಜಾವೆಲ್ಲೆ ಗ್ಲೆನ್, ಕೆರೋನ್ ಕೊಟೊಯ್, ಜ್ಯಾವರ್ ರಾಯಲ್, ಕದೀಮ್ ಆಲೀನ್, ಅಲ್ಜಾರಿ ಜೋಸೆಫ್.

ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಸಂಪೂರ್ಣ ಆಟಗಾರರ ಪಟ್ಟಿ
ಕೀರನ್ ಪೊಲಾರ್ಡ್, ರವಿ ರಾಂಪಾಲ್, ಸುನಿಲ್ ನರೈನ್, ಕಾಲಿನ್ ಮನ್ರೋ, ಯಾಸಿರ್ ಶಾ, ಡ್ಯಾರೆನ್ ಬ್ರಾವೊ, ಲೆಂಡ್ಲ್ ಸಿಮನ್ಸ್, ಖಾರಿ ಪಿಯರೆ, ಇಸುರು ಉದಾನ, ಟಿಮ್ ಸೀಫರ್ಟ್, ಆಂಡರ್ಸನ್ ಫಿಲಿಪ್, ದಿನೇಶ್ ರಾಮ್ದಿನ್, ಟಿಯಾನ್ ವೆಬ್ಸ್ಟರ್, ಅಕೆಲ್ ಹೊಸಿನ್, ಜಯ್ಡೆನ್ ಸೀಲ್ಸ್, ಲಿಯೊನಾರ್ಡೊ ಜೂಲಿಯನ್, ಅಲಿ ಖಾನ್

Array
ಡ್ವೇನ್ ಬ್ರಾವೊ, ಕ್ರಿಸ್ ಗೇಲ್, ಎವಿನ್ ಲೂಯಿಸ್, ಫ್ಯಾಬಿಯನ್ ಅಲೆನ್, ರವಿ ಬೋಪಾರ, ಪಾಲ್ ವ್ಯಾನ್ ಮೀಕೆರೆನ್, ಶೆರ್ಫೇನ್ ರುದರ್‌ಫೋರ್ಡ್, ಶೆಲ್ಡನ್ ಕಾಟೆರೆಲ್, ಫವಾದ್ ಅಹ್ಮದ್, ಡೆವೊನ್ ಥಾಮಸ್, ರಾಯದ್ ಎಮಿಟ್, ಆಸಿಫ್ ಅಲಿ, ಕಾಲಿನ್ ಆರ್ಕಿಬಾಲ್ಡ್, ಜಾನ್ ರಸ್ ಜಗ್ಗೇಸರ್, ಡೊಮಿನಿಕ್ ಡ್ರೇಕ್ಸ್, ಜೋಶುವಾ ಡಾ ಸಿಲ್ವಾ, ಮೈಕಿಲೆ ಲೂಯಿಸ್.

ಬಾರ್ಬಡೋಸ್ ರಾಯಲ್ಸ್ ತಂಡದ ಸಂಪೂರ್ಣ ಆಟಗಾರರ ಪಟ್ಟಿ
ಗ್ಲೆನ್ ಫಿಲಿಪ್ಸ್, ಜೇಸನ್ ಹೋಲ್ಡರ್, ತಿಸಾರ ಪೆರೆರಾ, ಮೊಹಮ್ಮದ್ ಅಮೀರ್, ಜಾನ್ಸನ್ ಚಾರ್ಲ್ಸ್, ಶಾಯ್ ಹೋಪ್, ಓಶಾನೆ ಥಾಮಸ್, ಕೈಲ್ ಮೇಯರ್ಸ್, ಹೇಡನ್ ವಾಲ್ಶ್ ಜೂನಿಯರ್, ಅಜಮ್ ಖಾನ್, ರೇಮನ್ ರೀಫರ್, ಜಸ್ಟಿನ್ ಗ್ರೀವ್ಸ್, ಆಶ್ಲೇ ನರ್ಸ್, ಜೇಕ್ ಲಿಂಟೋಟ್, ನ್ಯೀಮ್ ಯಂಗ್, ಜೋಶುವಾ ಬಿಷಪ್, ಸ್ಮಿತ್ ಪಟೇಲ್

ಗಯಾನ ಅಮೆಜಾನ್ ವಾರಿಯರ್ಸ್ ತಂಡದ ಸಂಪೂರ್ಣ ಆಟಗಾರರ ಪಟ್ಟಿ
ನಿಕೋಲಸ್ ಪೂರನ್, ಶೋಯೆಬ್ ಮಲಿಕ್, ಇಮ್ರಾನ್ ತಾಹಿರ್, ಶಿಮ್ರಾನ್ ಹೆಟ್ಮೇರ್, ಮೊಹಮ್ಮದ್ ಹಫೀಜ್, ಬ್ರಾಂಡನ್ ಕಿಂಗ್, ನವೀನ್ ಉಲ್ ಹಕ್, ರೊಮಾರಿಯೊ ಶೆಫರ್ಡ್, ವಕಾರ್ ಸಲಾಮ್ಖೀಲ್, ಚಂದ್ರಪಾಲ್ ಹೇಮರಾಜ್, ಒಡಿಯನ್ ಸ್ಮಿತ್, ನಿಯಲ್ ಸ್ಮಿತ್, ಗುಡಕೇಶ್ ಮೋತಿ, ಆಂಟನಿ ಬ್ರಾಂಬಲ್, ಕೆವಿನ್ ಸಿಂಕ್ಲೇರ್, ಆಶ್ಮೀಡ್ ನೆಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications