For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ 2021 ಫೈನಲ್: ಸೈಂಟ್ ಕಿಟ್ಸ್ ತಂಡಕ್ಕೆ 160 ರನ್‌ಗಳ ಗುರಿ ನೀಡಿದ ಸೈಂಟ್ ಲೂಸಿಯಾ ಕಿಂಗ್ಸ್

ಕೆರೀಬಿಯನ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯ ಇಂದು ನಡೆಯುತ್ತಿದ್ದು ಈ ಅಂತಿಮ ಹಣಾಹಣಿಯಲ್ಲಿ ಸೈಂಟ್ ಕಿಟ್ಸ್ & ನೇವಿಸ್ ಪೇಟ್ರಿಯಾಟ್ಸ್ ತಂಡ ಹಾಗೂ ಸೈಂಟ್ ಲೂಸಿಯಾ ಕಿಂಗ್ಸ್ ತಮಡಗಳು ಮೂಕಾಮುಖಿಯಾಗಿದೆ. ಪ್ರಶಸ್ತಿಗಾಗಿ ಈ ಎರಡು ತಂಡಗಳು ಅಂತಿಮ ಸೆಣೆಸಾಟವನ್ನು ನಡೆಸುತ್ತಿದೆ. ಸೈಂಟ್ ಲೂಸಿಯಾ ಕಿಂಗ್ಸ್ ಟಾಸ್ ಗೆದ್ದು ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಮೊದಲು ಬ್ಯಾಟಿಂಗ್ ಮಾಡಿರುವ ಸೈಂಟ್ ಕಿಟ್ಸ್ & ನೇವಿಸ್ ಪೇಟ್ರಿಯಾಟ್ಸ್ ತಂಡ 160 ರನ್‌ಗಳ ಸವಾಲಿನ ಗುರಿಯನ್ನು ಮುಂದಿಟ್ಟಿದೆ.

ಸೈಂಟ್ ಲೂಸಿಯಾ ಕಿಂಗ್ಸ್ ತಂಡದ ಪರವಾಗಿ ರಖೀಮ್ ಕಾರ್ನಿವಲ್ ಹಾಗೂ ರೋಸ್ಟೋನ್ ಚೇಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮ ಹಂತದಲ್ಲಿ ಕಿಮೋ ಪೌಲ್ ಕೂಡ 39 ಎನ್‌ಗಳ ಕೊಡುಗೆ ನೀಡುವ ಮೂಲಕ ಉತ್ತಮ ಮೊತ್ತಗಳಿಸಲು ಕಾರಣರಾದರು. ಉಳಿದಂತೆ ಕಿಂಗ್ಸ್ ತಂಡದ ಆಟಗಾರರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬರಲಿಲ್ಲ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್‌ಗಳಿಸಲು ಸೈಂಟ್ ಲೂಸಿಯಾ ಕಿಂಗ್ಸ್ ತಂಡ ಯಶಸ್ವಿಯಾಯಿತು.

ಇನ್ನು ಸೈಂಟ್ ಕಿಟ್ಸ್ & ನೇವಿಸ್ ಪೇಟ್ರಿಯಾಟ್ಸ್ ತಮಡದ ಪರವಾಗಿ ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾದ ಫಾವದ್ ಅಹ್ಮದ್ ಹಾಗೂ ಪಾಕಿಸ್ತಾನದ ನಸೀಂ ಶಾ ಮಿಂಚಿದ್ದಾರೆ. ಈ ಇಬ್ಬರು ಕೂಡ ತಲಾ ಎರಡು ವಿಕೆಟ್ ಪಡೆದರೆ ಫಾಬಿಯನ್ ಅಲೆನ್, ಡಾಮಿನಿಕ್ ಡ್ರಾಕ್ಸ್ ಹಾಗೂ ಜಾನ್ ರುಸ್ ಜಗ್ಗೇಸರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ.

ಸೈಂಟ್ ಲೂಸಿಯಾ ಕಿಂಗ್ಸ್ ಸ್ಕ್ವಾಡ್
ಆಂಡ್ರೆ ಫ್ಲೆಚರ್ (ನಾಯಕ ಮತ್ತು ವಿಕೆಟ್ ಕೀಪರ್), ರಹಕೀಮ್ ಕಾರ್ನ್‌ವಾಲ್, ಮಾರ್ಕ್ ಡಿಯಲ್, ರೋಸ್ಟನ್ ಚೇಸ್, ಡೇವಿಡ್ ವೀಸ್, ಟಿಮ್ ಡೇವಿಡ್, ಕೀಮೋ ಪಾಲ್, ಜೀವರ್ ರಾಯಲ್, ಅಲ್ಜಾರಿ ಜೋಸೆಫ್, ವಹಾಬ್ ರಿಯಾಜ್, ಕೆಸ್ರಿಕ್ ವಿಲಿಯಮ್ಸ್

ಸೈಂಟ್ ಕಿಟ್ಸ್ & ನೇವಿಸ್ ಪೇಟ್ರಿಯಾಟ್ಸ್ ಸ್ಕ್ವಾಡ್
ಕ್ರಿಸ್ ಗೇಲ್, ಎವಿನ್ ಲೂಯಿಸ್, ಡ್ವೇನ್ ಬ್ರಾವೊ (ನಾಯಕ), ಫ್ಯಾಬಿಯನ್ ಅಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಡೊಮಿನಿಕ್ ಡ್ರೇಕ್ಸ್, ಶೆಲ್ಡನ್ ಕಾಟ್ರೆಲ್, ನಸೀಮ್ ಶಾ, ಜಾನ್-ರುಸ್ ಜಗ್ಗೇಸರ್, ಫವಾದ್ ಅಹ್ಮದ್

Story first published: Thursday, September 16, 2021, 0:13 [IST]
Other articles published on Sep 16, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+