Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CPL 2022 retentions: ಕೆರಿಬಿಯನ್ ಪ್ರೀಮಿಯರ್ ಲೀಗ್ 2022: 6 ತಂಡಗಳು, ರೀಟೈನ್ ಆದ ಆಟಗಾರರ ಪಟ್ಟಿ ಇಲ್ಲಿದೆ

CPL 2022

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾದರಿಯಲ್ಲಿ ಹುಟ್ಟಿಕೊಂಡು ಸಾಕಷ್ಟು ಖ್ಯಾತಿಗಳಿಸಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ 2022ರ ಆವೃತ್ತಿಗೆ ವೇದಿಕೆ ಸಜ್ಜುಕೊಳ್ಳುತ್ತಿದ್ದು, ಎಲ್ಲವೂ ಅಂದುಕೊಡಂತೆ ಆದಲ್ಲಿ ಇದೇ ವರ್ಷ ಆಗಸ್ಟ್‌ನಲ್ಲಿ ಟೂರ್ನಿ ನಡೆಯಲಿದೆ.

ಆರು ಫ್ರಾಂಚೈಸಿಗಳು ಈಗಾಗಲೇ ಡ್ರಾಫ್ಟ್ ಪಟ್ಟಿಯನ್ನ ಬಿಡುಗಡೆಗೊಳಿಸಿದ್ದು, ಆಗಸ್ಟ್ 30ರಂದು ಸಿಪಿಎಲ್ 2022ರ ಆವೃತ್ತಿಗೆ ಚಾಲನೆ ಸಿಗಲಿದೆ.

ಹೊಸ ಡ್ರಾಫ್ಟ್ ಪ್ರಕ್ರಿಯೆ ಪ್ರಕಾರ ಪ್ರತಿ ಫ್ರಾಂಚೈಸಿಯು ಐವರು ಕೆರಿಬಿಯನ್ ಆಟಗಾರರನ್ನ ಮಾತ್ರ ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಎರಡನೇ ಹಂತದಲ್ಲಿ ಇಬ್ಬರು ಸ್ಥಳೀಯ ಆಟಗಾರರನ್ನ ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.

ಗಯಾನ ಅಮೇಜಾನ್ ವಾರಿಯರ್ಸ್ ಮತ್ತು ಜಮೈಕಾ ತಲೈವಾಸ್ ಆರು ಮತ್ತು ಐದು ಆಟಗಾರರನ್ನ ರೀಟೈನ್ ಮಾಡಿಕೊಂಡಿದೆ. ಉಳಿದಂತೆ ಎಲ್ಲಾ ಫ್ರಾಂಚೈಸಿಗಳು ಪೂರ್ಣ ಪ್ರಮಾಣದಲ್ಲಿ ಆಟಗಾರರನ್ನ ರೀಟೈನ್ ಮಾಡಿಕೊಂಡಿದೆ.

ಟ್ರಿಬಾಗೊ ನೈಟ್ ರೈಡರ್ಸ್ (TKR) ಕುರಿತು ಮಾತನಾಡುವುದಾದ್ರೆ ಆಂಡ್ರೆ ರಸ್ಸೆಲ್, ನಿಕೊಲಸ್ ಪೂರನ್, ಕಿರಾನ್ ಪೊಲಾರ್ಡ್‌ರಂತಹ ಘಟಾನುಘಟಿ ಆಟಗಾರರ ಜೊತೆಗೆ ಸುನಿಲ್ ನರೈನ್ ಒಂದೇ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಹೀಗೆ ಟಿಕೆಆರ್ ರೀತಿಯಲ್ಲಿ ಯಾವ ಫ್ರಾಂಚೈಸಿ ಎಷ್ಟು ಆಟಗಾರರನ್ನ ಡ್ರಾಫ್ಟ್ ಮಾದರಿಯಲ್ಲಿ ರೀಟೈನ್ ಮಾಡಿಕೊಂಡಿದೆ ಎಂಬುದನ್ನ ಈ ಕೆಳಗೆ ನೋಡಬಹುದು.

ಡ್ರಾಫ್ಟ್ ಆಗಿರುವ ಆಟಗಾರರು:
ಟ್ರಿನ್‌ಬಾಗೊ ನೈಟ್ ರೈಡರ್ಸ್: ಕೀರನ್ ಪೊಲಾರ್ಡ್, ಆಂಡ್ರೆ ರಸೆಲ್, ಸುನಿಲ್ ನರೈನ್, ನಿಕೋಲಸ್ ಪೂರನ್, ಅಕಿಲ್ ಹೋಸೇನ್, ಜೇಡನ್ ಸೀಲ್ಸ್, ಟಿಯಾನ್ ವೆಬ್‌ಸ್ಟರ್

ಸೇಂಟ್ ಲೂಸಿಯಾ ಕಿಂಗ್ಸ್: ರೋಸ್ಟನ್ ಚೇಸ್, ಜಾನ್ಸನ್ ಚಾರ್ಲ್ಸ್, ಕೆಸ್ರಿಕ್ ವಿಲಿಯಮ್ಸ್, ಅಲ್ಜಾರಿ ಜೋಸೆಫ್, ಮಾರ್ಕ್ ಡೆಯಲ್, ಜೆವರ್ ರಾಯಲ್

ಜಮೈಕಾ ತಲ್ಲವಾಸ್: ರೋವ್ಮನ್ ಪೊವೆಲ್, ಫ್ಯಾಬಿಯನ್ ಅಲೆನ್, ಬ್ರಾಂಡನ್ ಕಿಂಗ್, ಕೆನ್ನಾರ್ ಲೆವಿಸ್, ಶಮರ್ ಬ್ರೂಕ್ಸ್

ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್: ಡಿಜೆ ಬ್ರಾವೋ, ಡ್ಯಾರೆನ್ ಬ್ರಾವೋ, ಎವಿನ್ ಲೆವಿಸ್, ಆಂಡ್ರೆ ಫ್ಲೆಚರ್, ಶೆರ್ಫಾನ್ ರುದರ್ಫೋರ್ಡ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್

ಬಾರ್ಬಡೋಸ್ ರಾಯಲ್ಸ್: ಜೇಸನ್ ಹೋಲ್ಡರ್, ಒಬೆಡ್ ಮೆಕಾಯ್, ಕೈಲ್ ಮೇಯರ್ಸ್, ಹೇಡನ್ ವಾಲ್ಷ್ ಜೂನಿಯರ್, ಡೆವೊನ್ ಥಾಮಸ್, ಒಶಾನೆ ಥಾಮಸ್, ನಯೀಮ್ ಯಂಗ್

ಗಯಾನಾ ಅಮೆಜಾನ್ ವಾರಿಯರ್ಸ್: ಶಿಮ್ರಾನ್ ಹೆಟ್ಮೆಯರ್, ಓಡಿಯನ್ ಸ್ಮಿತ್, ರೊಮಾರಿಯೋ ಶೆಫರ್ಡ್, ಚಂದ್ರಪಾಲ್ ಹೇಮರಾಜ್, ಕೀಮೋ ಪಾಲ್, ಗುಡಾಕೇಶ್ ಮೋಟಿ

Story first published: Thursday, April 7, 2022, 12:35 [IST]
Other articles published on Apr 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+