Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತಕ್ಕೆ ಕಾಲಿಡಲಿದೆ ಬಿಗ್‌ ಬ್ಯಾಷ್‌ ಲೀಗ್‌: ಎಲ್ಲಿ ನಡೆಯುತ್ತೇ ಪಂದ್ಯ?

ಭಾರತದಲ್ಲಿ ಕ್ರಿಕೆಟ್‌ ಜನಪ್ರೀಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ವರ್ಷ ಪೂರ್ತಿ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಲೇ ಇರುತ್ತವೆ. ಈಗ ಹೊರ ದೇಶದ ಸುಪ್ರಸಿದ್ಧ ಲೀಗ್‌ ಪಂದ್ಯವೂ ಸಹ ಭಾರತದಲ್ಲಿ ನಡೆಸಲು ಚಿಂತನೆ ನಡೆದಿದೆ. ಹಾಗಿದ್ದರೆ ಭಾರತೀಯ ಅಭಿಮಾನಿಗಳನ್ನು ಟಾರ್ಗೆಟ್‌ ಮಾಡಲಿರುವ ಆ ಜನಪ್ರೀಯ ಲೀಗ್ ಯಾವುದು? ಎಲ್ಲಿ ಪಂದ್ಯವನ್ನು ಆಯೋಜಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ವರದಿ ಇಲ್ಲಿದೆ.

ಭಾರತದಲ್ಲಿನ ಕ್ರಿಕೆಟ್‌ ಅಭಿಮಾನಿಗಳು ಶೀಘ್ರದಲ್ಲಿ ಬಿಗ್ ಬ್ಯಾಷ್ ಲೀಗ್ ಮಜಾ ಪಡೆಯಬಹುದಾಗಿದೆ. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಖ್ಯಾತಿ ಪಡೆದಿರುವ ಲೀಗ್‌ ಇನ್ನು ಭಾರತಕ್ಕೆ ಕಾಲಿಡಲು ಸಿದ್ಧತೆ ನಡೆಸಿದೆ. ಬಿಗ್ ಬ್ಯಾಷ್‌ ಮುಂದಿನ ಋತುವಿನ ಪಂದ್ಯಗಳಿಗೆ ಈಗ ತಯಾರಿಗಳು ನಡೆದಿವೆ. ಈ ವೇಳೆ ಭಾರತದಲ್ಲಿಯೂ ಒಂದು ಪಂದ್ಯವನ್ನು ನಡೆಸಲು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಭಾರತದಲ್ಲಿ ಬಿಬಿಎಲ್ ಪಂದ್ಯವನ್ನು ಆಯೋಜಿಸುವ ಬಗ್ಗೆ ಸಿಎ ಚಿಂತನೆ ನಡೆಸಿದೆ.

Cricket Australia

ಎಲ್ಲವೂ ಈಗ ಅಂದುಕೊಂಡಂತೆ ನಡೆದರೆ ಮುಂದಿನ ಆವೃತ್ತಿಯ ಬಿಗ್ ಬ್ಯಾಷ್ ಲೀಗ್‌ನ ಒಂದು ಪಂದ್ಯಕ್ಕೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಆತಿಥ್ಯ ನೀಡಬಹುದು. ಈ ಬಗ್ಗೆ ಈಗಾಗಲೇ ಆರಂಭಿಕ ಚರ್ಚೆಗಳು ನಡೆದಿವೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ಪ್ರಸ್ತಾವನೆ ಇನ್ನು ಪ್ರಾಥಮಿಕ ಹಂತದಲ್ಲಿರುವುದಾಗಿ ಸ್ಪಷ್ಟ ಪಡಿಸಿದ್ದಾರೆ.

ಇತ್ತಿಚಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಸಿಎ ಅಧಿಕಾರಿಗಳು ಚೆನ್ನೈನ ಮೈದಾನಕ್ಕೂ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಬಿಗ್‌ ಬ್ಯಾಷ್‌ ಲೀಗ್‌ನ ಒಂದು ಪಂದ್ಯ ಈ ಮೈದಾನದಲ್ಲಿ ನಡೆಸುವ ಬಗ್ಗೆ ಚರ್ಚೆಗಳು ಆರಂಭವಾಗಿವೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಬಿಗ್ ಬ್ಯಾಷ್ ನಡೆಸಲು ಕಾರಣ ಏನು?

ಬಿಗ್ ಬ್ಯಾಷ್‌ ಲೀಗ್‌ನ ಎರಡು ಫ್ರಾಂಚೈಸಿಗಳು ಮಾರಕಟ್ಟಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇನ್ನು ಕ್ರಿಕೆಟ್‌ ವ್ಯವಹಾರಗಳು ಭಾರತದಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಒಂದು ಪಂದ್ಯವನ್ನು ಆಯೋಜಿಸಿ ಬಂಡವಾಳ ಹೂಡಿಕೆದಾರರನ್ನು ಹುಡುಕುವ ಕಾರ್ಯಕ್ಕೆ ಸಿಎ ಮುಂದಾದಂತೆ ಕಂಡು ಬಂದಿದೆ. ಅಲ್ಲದೆ ಉಭಯ ದೇಶಗಳ ನಡುವಣ ಸಂಬಂಧವನ್ನು ಬಲ ಪಡಿಸುವ ನಿಟ್ಟಿನಲ್ಲಿ ಇದು ಸಹ ದೊಡ್ಡ ಹೆಜ್ಜೆಯಾಗಲಿದೆ.

ಯಾವ ತಂಡ ಭಾರತದಲ್ಲಿ ಪಂದ್ಯ ಆಡಬಹುದು

ಭಾರತದ ಚೆನ್ನೈನಲ್ಲಿ ನಡೆಸಲು ಯೋಚಿಸಲಾಗುತ್ತಿರುವ ಪಂದ್ಯಗಳಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡದ ಪಂದ್ಯ ಸೇರಿರಲಿದೆ ಎಂದು ವರದಿಗಳು ಬರುತ್ತಿವೆ. ಪರ್ತ್ ಸ್ಕಾರ್ಚರ್ಸ್ ಬಿಗ್‌ ಬ್ಯಾಷ್ ಲೀಗ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಈ ಆವೃತ್ತಿಯಲ್ಲಿ ಪರ್ತ್ ತಂಡ ಸಿಡ್ನಿ ಸಿಕ್ಸರ್ಸ್‌ ತಂಡವನ್ನು ಫೈನಲ್‌ನಲ್ಲಿ ಸೋಲಿಸಿ ದಾಖಲೆಯ ಆರನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ.

ಭಾರತದಲ್ಲಿ ಪಂದ್ಯ ನಡೆಸುವುದು ಏಕೆ?

ಬಿಗ್ ಬ್ಯಾಷ್ ಲೀಗ್‌ ಪಂದ್ಯಗಳನ್ನು ಭಾರತದಲ್ಲಿ ನಡೆಸುವ ಬಗ್ಗೆ ಇನ್ನು ಯಾವುದೇ ಅಧಿಕೃತ ಹೇಳಿಕೆ ಬಾರದೇ ಇದ್ದರೂ ಸಹ, ಭಾರತೀಯ ಮಾರುಕಟ್ಟೆಗೆ ಕಾಲಿಡುವ ಬಿಗ್ ಪ್ಲ್ಯಾನ್ ಕ್ರಿಕೆಟ್ ಆಸ್ಟ್ರೇಲಿಯಾದ್ದಾಗಿದೆ. ಈ ಬಗ್ಗೆ ಸಿಎ ಸಹ ಆಸಕ್ತಿ ತೋರಿದ್ದು ಚರ್ಚೆಗಳನ್ನು ಹುಟ್ಟಿಹಾಕಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಡಬಲ್‌ ಸಂಭ್ರಮ. ಅದರಲ್ಲೂ ಚೆನ್ನೈ ಅಭಿಮಾನಿಗಳಿಗೆ ಅಂತೂ ವಿದೇಶಿ ಲೀಗ್‌ಗಳ ಪಂದ್ಯವನ್ನು ಕಣ್ಣು ತುಂಬಿಕೊಳ್ಳುವ ಅವಕಾಶವೂ ಸಿಗಲಿದೆ.

Story first published: Wednesday, February 18, 2026, 17:19 [IST]
Other articles published on Feb 18, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+