Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

91 ವರ್ಷ ಹಳೆ ದಾಖಲೆ ಮುರಿದ ಆಸೀಸ್ ಕ್ರಿಕೆಟರ್ಸ್

ಸಿಡ್ನಿ, ಅ. 30: ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸದ ಹೊಸ ದಾಖಲೆ ನಿರ್ಮಾಣವಾಗಿದೆ. ಸುಮಾರು 91 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್ ನ ಜೊತೆಯಾಟದ ದಾಖಲೆ ಮುರಿಯಲಾಗಿದೆ.

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಅರೋನ್ ಫಿಂಚ್ ಹಾಗೂ ರಿಯಾನ್ ಕಾರ್ಟರ್ಸ್ ಜೋಡಿ ಕ್ರಿಕೆಟ್ ಆಸ್ಟ್ರೇಲಿಯಾ XI ಪರ ಆಡುತ್ತಾ ಅಜೇಯ 501 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದ ದಾಖಲೆಯಾಗಿದ್ದ 456 ರನ್ ಜೊತೆಯಾಟವನ್ನು ಮುರಿದಿದ್ದಾರೆ. 1923-24ರಲ್ಲಿ ವಿಕ್ಟೋರಿಯಾದ ಬಿಲ್ ಪೊನ್ಸ್ ಫರ್ಡ್ ಹಾಗೂ ಎಡ್ಗರ್ ಮೇಯ್ನ್ ಈ ಜೊತೆಯಾಟದಲ್ಲಿ ಭಾಗಿಯಾಗಿದ್ದರು. [ಕೌಂಟಿ ಕ್ರಿಕೆಟರ್ ನಿಂದ ವಿಶ್ವದಾಖಲೆ 350]

Cricket Australia XI openers share record stand against NZ

ಈಗ ಅರೋನ್ ಫಿಂಚ್ ಹಾಗೂ ಕಾಟರ್ಸ್ ಅವರು ಕ್ರಮವಾಗಿ ಅಜೇಯ 287 ಹಾಗೂ ಅಜೇಯ 208ರನ್ ಗಳಿಸಿ 501ರನ್ ಜೊತೆಯಾಟ ಪ್ರದರ್ಶಿಸಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ XI ಬ್ಲಾಕ್ ಟೌನ್ ಇಂಟರ್ ನ್ಯಾಷನಲ್ ಸ್ಫೋರ್ಟ್ಸ್ ಪಾರ್ಕ್ ನ ಎರಡನೇ ದಿನದ ಆಟವನ್ನು 501-0ಸ್ಕೋರ್ ಆಗಿದ್ದಾಗ ಡಿಕ್ಲೇರ್ ಮಾಡಿಕೊಂಡಿದೆ. ಮೂರು ದಿನಗಳ ಪಂದ್ಯದಲ್ಲಿ ಮೊದಲ ದಿನ 376/0 ಮೊತ್ತ ಗಳಿಸಿತ್ತು. [ಶತಕ ಕೈತಪ್ಪಿದ್ದರೂ ವಿಶ್ವದಾಖಲೆ ಬರೆದ ಕ್ರಿಸ್]

ಪ್ರಥಮ ದರ್ಜೆಯಲ್ಲಿ ವಿಶ್ವದಾಖಲೆ ಅರಂಭಿಕ ವಿಕೆಟ್ ಗೆ 561 ರನ್ ಆಗಿದೆ. ಪಾಕಿಸ್ತಾನದ ವಹೀದ್ ಮಿರ್ಜಾ ಹಾಗೂ ಮನ್ಸೂರ್ ಅಖ್ತರ್ ಅವರು 1976-77ರಲ್ಲಿ ಕರಾಚಿಯಲ್ಲಿ ದಾಖಲೆ ಬರೆದಿದ್ದು, ಇನ್ನೂ ಯಾರೂ ಅಳಿಸಲು ಸಾಧ್ಯವಾಗಿಲ್ಲ. (ಎಪಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+