ಭಾರತದ ನಂತರ ಪಾಕಿಸ್ತಾನ ಪ್ರವಾಸದಿಂದ ಮತ್ತೊಂದು ತಂಡ ಹಿಂದಕ್ಕೆ: ಕಾರಣ?
ಮುಂಬರುವ (2020) ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಪಾಕಿಸ್ತಾನ ಆಯೋಜಿಸುತ್ತಿದೆ. ಭಾರತ, ಪಾಕ್ ನೆಲದಲ್ಲಿ ಆಡುವುದಿಲ್ಲ ಎಂದು ಈಗಾಗಲೇ ಹೇಳಿದೆ. ಇದಕ್ಕೆ ಪಾಕಿಸ್ತಾನ ಕೂಡಾ ಸವಾಲು ಎಸೆದಿದ್ದು, ತಮ್ಮ ತಂಡ ಕೂಡ ಭಾರತದಲ್ಲಿ ಆಡುವುದಿಲ್ಲ ಎಂದು ಹೇಳಿದೆ.
ಪಾಕ್ ಹೊರತಾದ ತಟಸ್ಥ ನೆಲದಲ್ಲಿ ಏಷ್ಯಾ ಕಪ್ ಆಯೋಜಿಸಿದರೆ ಆಡಲು ಸಿದ್ದವಿದ್ದೇವೆ ಎಂದು ಬಿಸಿಸಿಐ ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡಿಗೆ ತಿಳಿಸಿದೆ. ಈ ನಡುವೆ, ಇನ್ನೊಂದು ತಂಡವೂ ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಹೇಳಿದೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ, ಮುಂದಿನ ತಿಂಗಳು ನಡೆಯಬೇಕಾಗಿದ್ದ ಪಾಕಿಸ್ತಾನ ಪ್ರವಾಸದಿಂದ ಹಿಂದಕ್ಕೆ ಸರಿದಿದೆ. ಈ ಬಗ್ಗೆ, ಕ್ರಿಕೆಟ್ ಸೌತ್ ಆಫ್ರಿಕಾ ಸ್ಪಷ್ಟನೆಯನ್ನು ನೀಡಿದೆ. ಇದಕ್ಕೆ, ಪಾಕಿಸ್ತಾನ ಮಂಡಳಿಯೂ ಸಮ್ಮತಿಸಿದೆ.
ಕಳೆದ ವರ್ಷ ಅಷ್ಟೇನೂ ಬ್ಯೂಸಿಯಾಗಿರದ ದಕ್ಷಿಣ ಆಫ್ರಿಕಾ ತಂಡ, ಕಳೆದ ಎರಡು ತಿಂಗಳಲ್ಲಿ ಸಾಲುಸಾಲು ಅಂತರಾಷ್ಟ್ರೀಯ ಪಂದ್ಯವನ್ನು ಆಡುತ್ತಿದೆ. ಪ್ರಸಕ್ತ, ಇಂಗ್ಲೆಂಡ್ ತಂಡ, ಅಲ್ಲಿ ಪ್ರವಾಸದಲ್ಲಿದೆ. ಪಾಕ್ ಪ್ರವಾಸದಿಂದ ದಕ್ಷಿಣ ಆಫ್ರಿಕಾ ಹಿಂದಕ್ಕೆ ಸರಿಯಲು ಕಾರಣ?

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸರಣಿ
ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡದ ನಡುವೆ ಸದ್ಯ ಟಿ20 ಸರಣಿ ನಡೆಯುತ್ತಿದೆ. ಇದಾದ ನಂತರ, ನಾಲ್ಕು ಟೆಸ್ಟ್ ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯ ನಡೆಯಲಿದೆ. ಈ ಸರಣಿ ಮುಗಿದ ಐದೇ ದಿನದ ಅಂತರದಲ್ಲಿ ಆಸ್ಟ್ರೇಲಿಯಾ ಜೊತೆಗೆ ಸರಣಿ ಆರಂಭವಾಗಲಿದೆ. ಆಸೀಸ್ ಜೊತೆ ದಕ್ಷಿಣ ಆಫ್ರಿಕಾ ಮೂರು ಚುಟುಕು ಮತ್ತು ಮೂರು ಏಕದಿನ ಪಂದ್ಯ ಆಡಬೇಕಿದೆ.

ಆಸ್ಟ್ರೇಲಿಯಾ ಜೊತೆಗಿನ ದಕ್ಷಿಣ ಆಫ್ರಿಕಾ ಸರಣಿ
ಆಸ್ಟ್ರೇಲಿಯಾ ಜೊತೆಗಿನ ಸರಣಿ ಮಾರ್ಚ್ ಏಳಕ್ಕೆ ಮುಕ್ತಾಯಗೊಳ್ಳಲಿದೆ. ಮಾರ್ಚ್ ಹನ್ನೆರಡರಂದು ಭಾರತದ ಜೊತೆಗಿನ ಮೊದಲ ಏಕದಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಮೂರು ಏಕದಿನ ಪಂದ್ಯಗಳ ಸರಣಿ ಮಾರ್ಚ್ ಹದಿನೆಂಟರಂದು ಮುಕ್ತಾಯಗೊಳ್ಳಲಿದೆ. ಇದಾದ ನಂತರ, ದಕ್ಷಿಣ ಆಫ್ರಿಕಾ ತಂಡ, ಪಾಕಿಸ್ತಾನ ಪ್ರವಾಸಕ್ಕೆ ತೆರಳಬೇಕಾಗಿತ್ತು.
ಭಾರತ vs ಕಿವೀಸ್, 0, 0, 1: ಟೆಸ್ಟ್‌ಗೂ ಮುನ್ನ ಸಮಸ್ಯೆಯ ಸುಳಿಯಲ್ಲಿ ಭಾರತ!

ಪಾಕ್ ಪ್ರವಾಸ ರದ್ದು - ಸೌತ್ ಆಫ್ರಿಕಾ ಬೋರ್ಡ್
ಮಾರ್ಚ್ 19-28ರ ಅವಧಿಯಲ್ಲಿ ಪಾಕಿಸ್ತಾನದ ರಾವಲ್ಪಿಂಡಿಯಲ್ಲು ಮೂರು ಟಿ20 ಪಂದ್ಯ ಆಡಲು ವೇಳಾಪಟ್ಟಿ ನಿಗದಿಯಾಗಿತ್ತು. ಮಾರ್ಚ್ 28ರಿಂದ ಐಪಿಎಲ್ ಕ್ರಿಕೆಟ್ ಆರಂಭಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ, ಆಟಗಾರರ ಒತ್ತಡ ಹೆಚ್ಚಾಗುವ ಕಾರಣಕ್ಕಾಗಿ, ಪಾಕ್ ಪ್ರವಾಸ ರದ್ದುಗೊಳಿಸಿರುವುದಾಗಿ ಸೌತ್ ಆಫ್ರಿಕಾ ಬೋರ್ಡ್ ಹೇಳಿದೆ.

ಆಟಗಾರರ ಹಿತದೃಷ್ಟಿಯಿಂದ ಪಾಕಿಸ್ತಾನಕ್ಕೆ ಹೋಗದೇ ಇರುವ ತೀರ್ಮಾನ
"ಭದ್ರತಾ ಕಾರಣಕ್ಕಾಗಿ ನಾವು ಪಾಕಿಸ್ತಾನ ಪ್ರವಾಸದಿಂದ ಹಿಂದಕ್ಕೆ ಸರಿಯುತ್ತಿಲ್ಲ ಆಟಗಾರರ ಹಿತದೃಷ್ಟಿಯಿಂದ ಪಾಕಿಸ್ತಾನಕ್ಕೆ ಹೋಗದೇ ಇರುವ ತೀರ್ಮಾನಕ್ಕೆ ನಾವು ಬಂದಿದ್ದೇವೆ" ಎಂದು ಕ್ರಿಕೆಟ್ ಸೌತ್ ಆಫ್ರಿಕಾದ ಅಧಿಕಾರಿಗಳು ಹೇಳಿದ್ದಾರೆ. ಹಾಗಾಗಿ, ಇನ್ನೊಂದು ಮಹತ್ವದ ಸರಣಿ, ಪಾಕಿಸ್ತಾನದಲ್ಲಿ ರದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications