ಶುಬ್ಮನ್ ಗಿಲ್ ಮುಂದಿನ ಪ್ರಯತ್ನಕ್ಕೆ ಶುಭಹಾರೈಸಿದ ಗುಜರಾತ್ ಟೈಟನ್ಸ್: ಕ್ರಿಕೆಟ್ ಅಭಿಮಾನಿಗಳಲ್ಲಿ ಗೊಂದಲ!

15ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಟ್ವಿಟ್ಟರ್‌ನಲ್ಲಿ ಭಾರತೀಯ ಕ್ರಿಕೆಟಿಗ ಶುಬ್ಮನ್ ಗಿಲ್ ಬಗ್ಗೆ ಮಾಡಿರುವ ಒಂದು ಸಾಲಿನ ಟ್ವೀಟ್ ಈಗ ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ಟ್ವೀಟ್‌ನಲ್ಲಿ ಯಾವುದನ್ನೂ ಗುಜರಾತ್ ಟೈಟನ್ಸ್ ಫ್ರಾಂಚೈಸಿ ಸ್ಪಷ್ಟವಾಗಿ ಹಂಚಿಕೊಳ್ಳದಿದ್ದರೂ ಟ್ವೀಟ್‌ನ ಅರ್ಥ ಶುಬ್ಮನ್ ಗಿಲ್ ಗುಜರಾತ್ ಟೈಟನ್ಸ್‌ಗೆ ಗುಡ್‌ಬೈ ಹೇಳುವಂತಿದೆ. ಈ ಕಾರಣದಿಂದಾಗಿ ಅಭಿಮಾನಿಗಳಿಗೆ ಗೊಂದಲವುಂಟಾಗಿದೆ.
ಗುಜರಾತ್ ಟೈಟನ್ಸ್ ಫ್ರಾಂಚೈಸಿ ಮಾಡಿರುವ ಈ ನಿಗೂಢಾರ್ಥದ ಟ್ವೀಟ್‌ನ ಒಳಾರ್ಥವೇನು ಎಂಬುದು ಸ್ಪಷ್ಟವಾಗಿಲ್ಲ. ಗುಜರಾತ್ ಟೈಟನ್ಸ್ ತಂಡವಾಗಲಿ ಅಥವಾ ಶುಬ್ಮನ್ ಗಿಲ್ ಈ ವಿಚಾರವಾಗಿ ಯಾವುದೇ ಗುಟ್ಟುಬಿಟ್ಟುಕೊಟ್ಟಿಲ್ಲ. ಹೀಗಾಗಿ ಯಾವ ವಿಚಾರವಾಗಿ ಈ ಟ್ವೀಟ್ ಮಾಡಿರಬಹುದು ಎಂದು ಅಭಿಮಾನಿಗಳು ತಲೆಗೆ ಹುಳಬಿಟ್ಟುಕೊಂಡಿದ್ದಾರೆ. ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ.

ಜಿಟಿ ಪರವಾಗಿ ಭರ್ಜರಿ ಪ್ರದರ್ಶನ ನೀಡಿರುವ ಗಿಲ್
15ನೇ ಆವೃತ್ತಿಯ ಐಪಿಎಲ್ ಮೂಲಕ ಮೊದಲ ಬಾರಿಗೆ ಐಪಿಎಲ್ ಪ್ರಯಾಣವನ್ನು ಗುಜರಾತ್ ಟೈಟನ್ಸ್ ತಂಡ ಆರಂಭಿಸಿತ್ತು. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಕಣಕ್ಕಿಳಿದ ಜಿಟಿ ತಂಡದ ಪರವಾಗಿ ಆರಂಭಿಕ ಆಟಗಾರನಾಗಿ ಶುಬ್ಮನ್ ಗಿಲ್ ಕಣಕ್ಕಿಳಿದು ಅದ್ಭುತ ಪ್ರದರ್ಶನ ನೀಡಿದ್ದಾರೆ. ಪವರ್‌ಪ್ಲೇನಲ್ಲಿ ತಮ್ಮ ಬ್ಯಾಟಿಂಗ್‌ನ ಕೌಶಲ್ಯವನ್ನು ಅದ್ಭುತವಾಗಿ ಪ್ರದರ್ಶಿಸಿರುವ ಗಿಲ್ ತಂಡದ ಯಶಸ್ಸಿಬಲ್ಲಿ ಕೊಡುಗೆ ನೀಡಿದ್ದರು.
ಟ್ವೀಟ್‌ನಲ್ಲಿ ಏನಿದೆ?
ಗುಜರಾತ್ ಟೈಟನ್ಸ್ ಮಾಡಿರುವ ಈ ಟ್ವೀಟ್ ಒಂದು ವಾಕ್ಯದ್ದಾಗಿದೆ. ಹೀಗಾಗಿ ಯಾವುದೂ ಸ್ಪಷ್ಟವಾಗಿಲ್ಲ. "ಇದು ಸ್ಮರಣೀಯವಾದ ಪ್ರಯಾಣವಾಗಿದೆ. ನಿಮ್ಮ ಮುಂದಿನ ಪ್ರಯತ್ನಕ್ಕೆ ನಮ್ಮ ಶುಭಹಾರೈಕೆಗಳು ಶುಬ್ಮನ್ ಗಿಲ್" ಎಂದು ಟ್ವೀಟ್ ಮಾಡಿದೆ. ಹೀಗಾಗಿ ಅಭಿಮಾನಿಗಳು ಸಾಕಷ್ಟು ಕುತೂಹಲಗೊಂಡಿದ್ದಾರೆ.

ಚಾಂಪಿಯನ್ ಪಟ್ಟಕ್ಕೇರಿರುವ ಜಿಟಿ
ಇನ್ನು ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕಣಕ್ಕಿಳಿದ ಗುಜರಾತ್ ಟೈಟನ್ಸ್ ತಂಡ ಟೂರ್ನಿಯಲ್ಲಿ ತಂಡವಾಗಿ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿತ್ತು. ನಾಯಕ ಹಾರ್ದಿಕ್ ಪಾಂಡ್ಯ ಚೊಚ್ಚಲ ಬಾರಿಗೆ ನಾಯಕತ್ವದ ಹೊಣೆಗಾರಿಗೆ ವಹಿಸಿಕೊಂಡು ಚಾಂಪಿಯನ್ ಪಟ್ಟಕ್ಕೇರುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಸಾಕಷ್ಟು ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿರುವ ಗುಜರಾತ್ ಟೈಟನ್ಸ್ ತಂಡ ಮುಂದಿನ ಆವೃತ್ತಿಯ ಆರಂಭಕ್ಕೆ ಬಹಳ ಸಮಯ ಇರುವಂತೆಯೇ ಈ ರೀತಿಯ ಟ್ವೀಟ್ ಮಾಡಿರುವುದು ಗೊಂದಲ ಹಾಗೂ ಕುತೂಹಲ ಹೆಚ್ಚಿಸಿದೆ.

8 ಕೋಟಿಗೆ ತಂಡಕ್ಕೆ ಸೇರ್ಪಡೆಯಾಗಿರುವ ಗಿಲ್
ಶುಬ್ಮನ್ ಗಿಲ್ ಅವರನ್ನು ಗುಜರಾತ್ ಟೈಟನ್ಸ್ ತಂಡ 2022ರ ಐಪಿಎಲ್ ಆವೃತ್ತಿಗೂ ಮುನ್ನ 8 ಕೋಟಿ ಮೊತ್ತವನ್ನು ನೀಡಿ ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಇದಕ್ಕೂ ಮುನ್ನ ಗಿಲ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರನಾಗಿದ್ದರು. ಆದರೆ ಮೆಗಾ ಹರಾಜಿಗೂ ಮುನ್ನ ಕೆಕೆಆರ್ ಶುಬ್ಮನ್ ಗಿಲ್ ಅವರನ್ನು ರೀಟೈನ್ ಮಾಡಿಕೊಳ್ಳದ ಕಾರಣ ಶುಬ್ಮನ್ ಗಿಲ್ ತಂಡದಿಂದ ಹೊರಬಿದ್ದಿದ್ದರು. ನಂತರ ಗುಜರಾತ್ ಟೈಟನ್ಸ್ ತನ್ನ ಬಳಗಕ್ಕೆ ಸೇರ್ಪಡೆಗೊಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications