ಲಾಸ್ ಏಂಜಲೀಸ್‌ನಲ್ಲಿ 2028 ರ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಕ್ರಿಕೆಟ್ ಅನ್ನು ಸೇರಿಸಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಕಾರ್ಯನಿರ್ವಾಹಕರು ಅನುಮೋದಿಸಿದ್ದಾರೆ, ಅಕ್ಟೋಬರ್ 13 ರಂದು ಸಮಿತಿಯ ನಿರ್ಧಾರವನ್ನು ಘೋಷಣೆ ಮಾಡಲಾಗಿದೆ.
ಮುಂಬೈನಲ್ಲಿ ನಡೆದ ಕಾರ್ಯಕಾರಿ ಮಂಡಳಿಯ ಸಭೆಯ ಎರಡನೇ ದಿನದ ನಂತರ ಮಾತನಾಡಿದ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್, ಟ್ವೆಂಟಿ 20 ಕ್ರಿಕೆಟ್‌ಗೆ ಲಾಸ್ ಏಂಜಲಿಸ್ ಒಲಿಂಪಿಕ್ ಸಂಘಟಕರು ಮಾಡಿದ ಪ್ರಸ್ತಾಪವನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಕ್ರಿಕೆಟ್ ಮಾತ್ರವಲ್ಲದೆ, ಬೇಸ್‌ಬಾಲ್-ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್ಬಾಲ್, ಸ್ಕ್ವ್ಯಾಷ್ ಮತ್ತು ಲ್ಯಾಕ್ರೋಸ್ ಕ್ರೀಡೆಗಳನ್ನು ಒಲಿಂಪಿಕ್‌ಗೆ ಸೇರ್ಪಡೆ ಮಾಡಲಾಗಿದೆ. ಆದರೆ ಎಲ್ಲಾ ಹೊಸ ಕ್ರೀಡೆಗಳು 2028 ರ ಕ್ರೀಡಾಕೂಟದಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಮೊದಲು ಅಕ್ಟೋಬರ್ 16 ರಂದು ನಡೆಯಲಿರುವ ಮತದಾನದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯರಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ.
ಕೆಲವು ವರ್ಷಗಳ ಹಿಂದೆ ಅನುಮೋದಿಸಲಾದ ಐಒಸಿ ನಿಯಮಗಳ ಅಡಿಯಲ್ಲಿ ಪ್ರತಿಯೊಂದು ಆತಿಥೇಯ ನಗರವು ತಮ್ಮ ಕ್ರೀಡಾಕೂಟದ ಆವೃತ್ತಿಗೆ ಹಲವಾರು ಕ್ರೀಡೆಗಳನ್ನು ಸೇರಿಸಲು ವಿನಂತಿಸಬಹುದು.
ಭಾನುವಾರ ಅಧಿಕೃತ ಒಪ್ಪಿಗೆ
"ಈ ಪ್ರಸ್ತಾಪಗಳನ್ನು ಐಒಸಿ ಕಾರ್ಯಕಾರಿ ಮಂಡಳಿಯು ಪ್ಯಾಕೇಜ್‌ನಂತೆ ಸ್ವೀಕರಿಸಿದೆ" ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಕಾರ್ಯಕಾರಿ ಮಂಡಳಿಯ ಸಭೆಯ ಕೊನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಾನುವಾರದಿಂದ ಪ್ರಾರಂಭವಾಗುವ ಐಒಸಿ ಅಧಿವೇಶನವು ಈಗ ಮಂಡಳಿಯ ಶಿಫಾರಸಿಗೆ ಒಪ್ಪಿಗೆ ನೀಡಬೇಕಾಗುತ್ತದೆ.
ಗುರುವಾರ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಐಒಸಿಯ ಕಾರ್ಯಕಾರಿ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ವಹಿಸಿದ್ದರು.
ಅಕ್ಟೋಬರ್ 14 ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ 141 ನೇ ಐಒಸಿ ಅಧಿವೇಶನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಐಒಸಿ ಅಧಿವೇಶನವು ಐಒಸಿ ಸದಸ್ಯರ ಪ್ರಮುಖ ಸಭೆಯಾಗಿ ಕಾರ್ಯನಿರ್ವಹಿಸುತ್ತದೆ.
ಒಲಿಂಪಿಕ್ ಕ್ರೀಡಾಕೂಟಗಳ ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಭಾರತವು ಎರಡನೇ ಬಾರಿಗೆ ಮತ್ತು ಸುಮಾರು 40 ವರ್ಷಗಳ ನಂತರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನವನ್ನು ಆಯೋಜಿಸುತ್ತಿದೆ. ಐಒಸಿಯ 86 ನೇ ಅಧಿವೇಶನವು 1983 ರಲ್ಲಿ ನವದೆಹಲಿಯಲ್ಲಿ ನಡೆದಿತ್ತು.
ಭಾರತದಲ್ಲಿ ಭಾರೀ ಆಕರ್ಷಣೆಯನ್ನು ಹೊಂದಿರುವ ಮತ್ತು ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಪ್ರೇಕ್ಷಕರನ್ನು ಆನಂದಿಸುವ ಕ್ರಿಕೆಟ್, 1900 ರಲ್ಲಿ ನಡೆದಿದ್ದ ಒಲಿಂಪಿಕ್‌ನ ಭಾಗವಾಗಿತ್ತು, ಈಗ ಮತ್ತೆ ಒಲಿಂಪಿಕ್‌ನಲ್ಲಿ ಕ್ರಿಕೆಟ್ ಕಲರವ ಮೂಡಲಿದೆ.