ಐಸಿಸಿ ವಿಶ್ವಕಪ್ ಅಪ್ಲಿಕೇಷನ್ ಇಳಿಸಿಕೊಳ್ಳೋದು ಹೇಗೆ?
ದುಬೈ, ಜ.28: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಹಾಗೂ ರಿಲಯನ್ಸ್ ಕಮ್ಯೂನಿಕೇಷನ್ಸ್ ಜೊತೆಗೂಡಿ ರಂಗು ರಂಗಿನ ಐಸಿಸಿ ವಿಶ್ವಕಪ್ 2015ಗಾಗಿ ಅಧಿಕೃತ ಮೊಬೈಲ್ ಅಪ್ಲಿಕೇಷನ್ ಬುಧವಾರ ಮಾರುಕಟ್ಟೆಗೆ ಬಿಟ್ಟಿದ್ದಾರೆ.
ಐಸಿಸಿ ಹೊರ ತಂದಿರುವ ಈ ಅಪ್ಲಿಕೇಷನ್ ಉಚಿತವಾಗಿದ್ದು,ಕ್ರಿಕೆಟ್ ಅಭಿಮಾನಿಗಳು Apple App ಸ್ಟೋರ್ ಹಾಗೂ ಗೂಗಲ್ ಪ್ಲೇ ನಿಂದ ನೇರವಾಗಿ ತಮ್ಮ ಮೊಬೈಲಿಗೆ ಇಳಿಸಿಕೊಳ್ಳಬಹುದಾಗಿದೆ.
ಐಸಿಸಿ ವಿಶ್ವಕಪ್ ಕ್ರಿಕೆಟ್ 2015 ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ಫೆ.14ರಿಂದ ಮಾ.29ರ ತನಕ ನಡೆಯಲಿದೆ. ವಿಶ್ವದೆಲ್ಲೆಡೆಯಿಂದ ಅತ್ಯಧಿಕ ಪ್ರಮಾಣದಲ್ಲಿ ಈ ಟೂರ್ನಿಯನ್ನು ವೀಕ್ಷಿಸಲು ಅಭಿಮಾನಿಗಳು ಕಾತುರರಾಗಿದ್ದಾರೆ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]
ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಫೆ.15ರಂದು ಅಡಿಲೇಡ್ ನಲ್ಲಿ ನಡೆಯಲಿದ್ದು ಈ ಪಂದ್ಯ ವೀಕ್ಷಣೆ ವಿಷಯದಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವ ಲಕ್ಷಣ ಕಂಡು ಬಂದಿದೆ. [ಬದ್ಧವೈರಿಗಳ ಕಾದಾಟ, ಎಲ್ಲಾ ದಾಖಲೆಗಳ ಧೂಳಿಪಟ]
ಮಾ.30ರಂದು ನಡೆದ ಭಾರತ-ಪಾಕಿಸ್ತಾನ ನಡುವಿನ 2011 ವಿಶ್ವಕಪ್ ನ ಪಂದ್ಯವನ್ನು ಸುಮಾರು 988 ಮಿಲಿಯನ್ ಮಂದಿ ವೀಕ್ಷಿಸಿದ್ದರು. ಈ ಬಾರಿಯ ಪಂದ್ಯವನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ ಸಾಧ್ಯತೆಗಳಿವೆ. ಮೊಬೈಲ್ ನಲ್ಲಿ ಎಲ್ಲಾ ಅಂಕಿ ಅಂಶಗಳು ಲಭ್ಯವಾಗಲಿದೆ.
ಸದ್ಯಕ್ಕೆ ಐಸಿಸಿ ಹೊರ ತಂದಿರುವ ವಿಶ್ವಕಪ್ ಮೊಬೈಲ್ ಅಪ್ಲಿಕೇಷನ್ ನಿಮ್ಮ ಮೊಬೈಲ್ ಗೆ ಇಳಿಸಿಕೊಳ್ಳುವುದು ಹೇಗೆ? ಏನಿದರ ಸ್ಪೆಷಾಲಿಟಿ? ಮುಂದೆ ಓದಿ...

ಅಧಿಕೃತ ಮೊಬೈಲ್ ಅಪ್ಲಿಕೇಷನ್ ಬಳಸಿ
ಅಧಿಕೃತ ಮೊಬೈಲ್ ಅಪ್ಲಿಕೇಷನ್ ಬಳಸಿ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಅಪ್ಡೇಟ್ಸ್ ಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಸ್ಮಾಟ್ ಫೋನ್ ಅಥವಾ ಟ್ಯಾಬ್ಲೆಟ್ ಗಳಲ್ಲಿ ಉಚಿತವಾಗಿ ಇಳಿಸಿಕೊಳ್ಳಬಹುದಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಅಪ್ಲಿಕೇಷನ್ ಪ್ರಮುಖಾಂಶ
* ಐಸಿಸಿ ಲೈವ್ ಪಂದ್ಯ, ಬಾಲ್ ಬೈ ಬಾಲ್ ಸ್ಕೋರ್ ಹಾಗೂ ಕಾಮೆಂಟರಿ
* ಪಂದ್ಯದ ವಿಡಿಯೋ ಹಾಗೂ ಹೈಲೇಟ್ ಪ್ರತ್ಯೇಕವಾಗಿದೆ.
* ನಿಮ್ಮ ನೆಚ್ಚಿನ ತಂಡವನ್ನು ಆಯ್ದುಕೊಂಡು ಕಾಲಕಾಲಕ್ಕೆ ಅಪ್ಡೇಟ್ಸ್ ಪಡೆಯಿರಿ
* ಟೂರ್ನಿಯ ಅಂಕಿ ಅಂಶ, ಬ್ರೇಕಿಂಗ್ ನ್ಯೂಸ್, ವೇಳಾಪಟ್ಟಿ, ಸಂದರ್ಶನ
* ಕ್ರಿಕೆಟ್ ದಿಗ್ಗಜರಿಂದ ಅಂಕಣಗಳು
* #cw15 ಮೂಲಕ ಸಮೀಕ್ಷೆ, ಸಾಮಾಜಿಕ ಜಾಲ ಗಳ ಜೊತೆ ಟಚ್, ಗ್ರಾಹಕ ಸ್ನೇಹಿ ಅಪ್ಲಿಕೇಷನ್

ಅಪ್ಲಿಕೇಷನ್ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೇನಿದೆ
*ಅಪ್ಲಿಕೇಷನ್ ತೂಕ ಹೆಚ್ಚಾಯಿತು ಎನ್ನಬಹುದು 21ಎಂಬಿ ಇದೆ.
* ಆಂಡ್ರಾಯ್ಡ್ ಓಸ್ 4.0 ಗಿಂತ ಹೆಚ್ಚಿನ ಓಸ್ ಬಳಸುವ ಮೊಬೈಲ್ ನಲ್ಲಿ ಮಾತ್ರ ಇನ್ ಸ್ಟಾಲ್ ಸಾಧ್ಯ.
* ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ ಸೂಚನೆಗಳನ್ನು [email protected] ಗೆ ಕಳಿಸಬಹುದು.

ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಲು
* ಐಫೋನ್, ಐಪ್ಯಾಡ್, ಐಪಾಡ್ ಟಚ್ ನಲ್ಲಿ ಆಪ್ ಸ್ಟೋರ್ ಗೆ ಭೇಟಿ ಕೊಡಿ ಈ ಲಿಂಕ್ ಕ್ಲಿಕಿಸಿ
* ಆಂಡ್ರಾಯ್ಡ್ ಸಾಧನಗಳಲ್ಲಿ ಅಳವಡಿಸಿಕೊಳ್ಳಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಈ ಲಿಂಕ್ ಕ್ಲಿಕ್ಕಿಸಿ

ಅಪ್ಲಿಕೇಷನ್ ಆಕರ್ಷಣೀಯ ಆದರೆ, ವೈಫೈ ಇದ್ರೆ
ಅಪ್ಲಿಕೇಷನ್ ಆಕರ್ಷಣೀಯ ಆದರೆ, ವೈಫೈ ಇದ್ರೆ ತೊಂದರೆ ಇಲ್ಲ, ಇಲ್ಲದಿದ್ದರೆ ಇದರಲ್ಲಿ ಬಳಸಲಾಗಿರುವ ಗ್ರಾಫಿಕ್ ಕಣ್ಣು ಕುಕ್ಕುವುದರ ಜೊತೆಗೆ ಇಂಟರ್ನೆಟ್ ಚಾರ್ಜ್ ತಿನ್ನುತ್ತದೆ.
* ಫ್ಯಾಂಟಸಿ ಲೀಗ್ ಆಡುವವರಿಗೆ, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವವರಿಗೆ ಸಕತ್ ಅವಕಾಶವಿದೆ.
* ಪಂದ್ಯದ ಟಿಕೆಟ್ ಬುಕ್ಕಿಂಗ್ ಗೆ ಕೂಡಾ ಇಲ್ಲಿಂದ ದಾರಿಯುಂಟು.
* ವಿಶ್ವಕಪ್ ಟೂರ್ನಿಯ ಬಗ್ಗೆ ಸಮಗ್ರ ಮಾಹಿತಿ, ಚಿತ್ರ, ವಿಡಿಯೋ ನೀಡುವ ಅಪ್ಲಿಕೇಷನ್ ಅಭಿಮಾನಿಗಳಿಗೆ ಮೆಚ್ಚುಗೆಯಾಗುವುದರಲ್ಲಿ ಸಂಶಯವೇ ಇಲ್ಲ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications