ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬದ್ಧವೈರಿಗಳ ಕಾದಾಟ, ಎಲ್ಲಾ ದಾಖಲೆಗಳ ಧೂಳಿಪಟ

By Mahesh

ಮೆಲ್ಬೋರ್ನ್, ಜ.13: ಕ್ರಿಕೆಟ್ ಪ್ರೇಮಿಗಳ ಮೈಯಲ್ಲಿ ಮಿಂಚಿನ ಸಂಚಾರ ಹುಟ್ಟಿಸುವ ಬಹು ನಿರೀಕ್ಷಿತ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ. ಫೆ.15ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಅಡಿಲೇಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯ ವೀಕ್ಷಿಸುವವರ ಸಂಖ್ಯೆ ಹೊಸ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಿದೆ.

ಸರಿ ಸುಮಾರು 1 ಬಿಲಿಯನ್ ನಷ್ಟು ಜನ ನೆರೆ ಹೊರೆ ರಾಷ್ಟ್ರಗಳ ಕ್ರಿಕೆಟ್ ಸಮರವನ್ನು ವೀಕ್ಷಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮಾ.30ರಂದು ನಡೆದ ಭಾರತ-ಪಾಕಿಸ್ತಾನ ನಡುವಿನ 2011 ವಿಶ್ವಕಪ್ ನ ಪಂದ್ಯವನ್ನು ಸುಮಾರು 988 ಮಿಲಿಯನ್ ಮಂದಿ ವೀಕ್ಷಿಸಿದ್ದರು. ಪಂದ್ಯದ ಟಿಕೆಟ್ ಗಳು ಮಾರಾಟವಾಗಿದ್ದು, ಈಗಲೂ ಬೇಡಿಕೆ ಇದ್ದೇ ಇದೆ. [ಕದನಕ್ಕಿಳಿಯುವ 14 ತಂಡಗಳ ವಿವರ]

India-Pakistan World Cup match set to break all records

ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಈ ಪಂದ್ಯಕ್ಕಾಗಿ ಹೆಚ್ಚಿನ ಭದ್ರತೆ ಒದಗಿಸಿದ್ದು, ಆಸೀಸ್ ನೆಲದಲ್ಲಿ ಹಿಂದೆಂದೂ ನಡೆಯದಂಥ ಕಾಳಗದ ವೀಕ್ಷಣೆಗೆ ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡಲಾಗಿದೆ. ಈ ಪಂದ್ಯದ ಯಶಸ್ಸಿಗಾಗಿ ಎದುರು ನೋಡುತ್ತಿದ್ದೇವೆ ಎಂದು ವಿಶ್ವಕಪ್ ಆಯೋಜಕರೊಬ್ಬರು ಆಸ್ಟ್ರೇಲಿಯಾದ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. [ವಿಶ್ವಕಪ್ ಖಂಡಿತ ಗೆಲ್ಲುತ್ತೆ ಅಂತಾರೆ ಕೊಹ್ಲಿ]

ಬುಕ್ಕಿಗಳಿಗೆ ಹಬ್ಬ: ಈ ಬಾರಿಯಾದರೂ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಲು ಪಾಕಿಸ್ತಾನ ಪಣ ತೊಟ್ಟಿದೆ.1992ರಿಂದ ಇಲ್ಲಿ ತನಕದ ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಿಲ್ಲ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಪಂಟರ್ ಗಳಿಗೆ ಹಬ್ಬವಾಗಿದೆ. ಆಸ್ಟ್ರೇಲಿಯಾಗೆ ಯುಎಸ್ ಡಾಲರ್ 3.50, ದಕ್ಷಿಣ ಆಫ್ರಿಕಾಕ್ಕೆ ಯುಎಸ್ ಡಿ 5, ಭಾರತ, ನ್ಯೂಜಿಲೆಂಡ್ ಗೆ ಯುಎಸ್ ಡಿ 7 ಹಾಗೂ ಇಂಗ್ಲೆಂಡ್ ಗೆ ಯುಎಸ್ ಡಿ 12ರಂತೆ ಬೆಟ್ಟಿಂಗ್ ಮೌಲ್ಯ ಜಾರಿಯಲ್ಲಿದೆ. (ಪಿಟಿಐ)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X