Cricket In Olympics: 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಅಧಿಕೃತ ಮುದ್ರೆ ಒತ್ತಿದ ಐಒಸಿ
2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಸೇರಿಸುವ ಪ್ರಸ್ತಾವನೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸೋಮವಾರ, ಅಕ್ಟೋಬರ್ 16ರಂದು ಅಧಿಕೃತವಾಗಿ ತನ್ನ ಅನುಮೋದನೆಯನ್ನು ಘೋಷಿಸಿತು.
ಮುಂಬೈನ ಅತ್ಯಾಧುನಿಕ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸಭೆಯಲ್ಲಿ ನಡೆಸಿದ ಮತದಾನದ ಅವಧಿಯಲ್ಲಿ ಈ ಪ್ರಸ್ತಾಪವನ್ನು ಸ್ವೀಕರಿಸಲಾಗಿದೆ. ಗಮನಾರ್ಹವಾಗಿ, ಇಬ್ಬರು ಐಒಸಿ ಸದಸ್ಯರು ಕ್ರಿಕೆಟ್ ಪ್ರಸ್ತಾಪವನ್ನು ವಿರೋಧಿಸಿದರು ಮತ್ತು ಒಬ್ಬರು ಮತದಾನದಿಂದ ದೂರವಿದ್ದರು.

2028ರ ಲಾಸ್ ಏಂಜಲೀಸ್ ಗೇಮ್ಸ್‌ನಲ್ಲಿ ಐದು ಹೊಸ ಕ್ರೀಡೆಗಳನ್ನು ಸೇರಿಸಲು ಪ್ರಸ್ತಾಪಿಸಲಾಗಿದೆ. ಹೀಗಾಗಿ ಕ್ರಿಕೆಟ್‌ನ ಹೊರತಾಗಿ ಬೇಸ್‌ಬಾಲ್-ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸರ್‌ಗಳು), ಮತ್ತು ಸ್ಕ್ವಾಷ್‌ಗಳನ್ನು ಲಾಸ್ ಏಂಜಲೀಸ್ 2028ರಲ್ಲಿ ಸೇರಿಸಲಾಗುತ್ತದೆ.
ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಮಾತನಾಡಿ, ಕ್ರಿಕೆಟ್ ವಿಶೇಷವಾಗಿ ಟಿ20 ಸ್ವರೂಪದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ ಎಂದು ಹೇಳಿದ್ದಾರೆ. ಐಸಿಸಿ ಕ್ರಿಕೆಟ್ ವಿಶ್ವಕಪ್ ಬಗ್ಗೆ ಪ್ರಸ್ತಾಪಿಸಿದ ಅವರು, ಪಂದ್ಯಾವಳಿ ಈಗಾಗಲೇ ಯಶಸ್ವಿಯಾಗಿದೆ ಎಂದಿದ್ದಾರೆ.
"ಕ್ರಿಕೆಟ್‌ನ ಜನಪ್ರಿಯತೆಯನ್ನು ನಾವು ನೋಡುತ್ತೇವೆ, ವಿಶೇಷವಾಗಿ ಟಿ20 ಸ್ವರೂಪ. 50-ಓವರ್‌ನ ವಿಶ್ವಕಪ್ ಈಗಾಗಲೇ ದೊಡ್ಡ ಯಶಸ್ಸನ್ನು ಹೊಂದಿದೆ," ಎಂದು ಕಾರ್ಯಕಾರಿ ಮಂಡಳಿ ಸಭೆಯ ನಂತರ ಥಾಮಸ್ ಬಾಚ್ ಹೇಳಿದರು.
ಕ್ರಿಕೆಟ್‌ನ ಸೇರ್ಪಡೆಯು ಒಲಿಂಪಿಕ್ಸ್‌ಗೆ ದೊಡ್ಡ ಜನಪ್ರಿಯತೆ ಹೆಚ್ಚಿಸುತ್ತದೆ: ನೀತಾ ಅಂಬಾನಿ
ಇದೇ ವೇಳೆ ಐಒಸಿ ಸದಸ್ಯರು ಕ್ರಿಕೆಟ್‌ನಂತಹ ಜಾಗತಿಕವಾಗಿ ಪ್ರೀತಿಸುವ ಕ್ರೀಡೆಯನ್ನು ಸೇರಿಸಲು ಮತ ಚಲಾಯಿಸಿದ ನಂತರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯೆ ನೀತಾ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್‌ನ ಸೇರ್ಪಡೆಯು ಹೊಸ ಭೌಗೋಳಿಕ ಪ್ರದೇಶಗಳಲ್ಲಿ ಒಲಿಂಪಿಕ್ ಆಂದೋಲನಕ್ಕೆ ಆಳವಾದ ಪಾಲ್ಗೊಳ್ಳುವಿಕೆ ರೂಪಿಸುತ್ತದೆ ಮತ್ತು ಕ್ರೀಡೆಯ ಅಂತಾರಾಷ್ಟ್ರೀಯ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ ಎಂದು ನೀತಾ ಅಂಬಾನಿ ಹೇಳಿದರು.
"2028ರ ಲಾಸ್ ಏಂಜಲೀಸ್ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಒಲಿಂಪಿಕ್ ಕ್ರೀಡೆಯಾಗಿ ಸೇರಿಸಲು ಐಒಸಿ ಸದಸ್ಯರು ಮತ ಹಾಕಿರುವುದು ನನಗೆ ಖುಷಿ ತಂದಿದೆ. ಕ್ರಿಕೆಟ್ ಜಾಗತಿಕವಾಗಿ ಹೆಚ್ಚು ಇಷ್ಟಪಡುವ ಕ್ರೀಡೆಗಳಲ್ಲಿ ಒಂದಾಗಿದೆ ಮತ್ತು ಎರಡನೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕ್ರೀಡೆಯಾಗಿದೆ".
"1.4 ಬಿಲಿಯನ್ ಭಾರತೀಯರಿಗೆ ಕ್ರಿಕೆಟ್ ಕೇವಲ ಕ್ರೀಡೆಯಲ್ಲ, ಅದೊಂದು ಧರ್ಮ. ಹಾಗಾಗಿ ನಮ್ಮ ದೇಶದ ಮುಂಬೈನಲ್ಲಿ ನಡೆಯುತ್ತಿರುವ 141ನೇ ಐಒಸಿ ಅಧಿವೇಶನದಲ್ಲಿ ಈ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ನಾನು ಸಂತೋಷಪಡುತ್ತೇನೆ," ಎಂದು ಐಒಸಿ ಸದಸ್ಯೆ ನೀತಾ ಅಂಬಾನಿ ಅಭಿಪ್ರಾಯಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications