ಉತ್ತಪ್ಪ-ರಹಾನೆ ಜತೆಯಾಟ, ಬಾಂಗ್ಲಾಕ್ಕೆ ಕಹಿಯೂಟ
ಮೀರ್ಪುರ್, ಜೂನ್ 16 : ವಿಶ್ವಕಪ್ ಫುಟ್ಬಾಲ್ ಜ್ವರದ ನಡುವೆ ಟೀಂ ಇಂಡಿಯಾ ಭಾನುವಾರ ಬಾಂಗ್ಲಾದೇಶ ಪ್ರವಾಸವನ್ನು ಅರಂಭಿಸಿದೆ. ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದೆ.
ಮಳೆಯ ಕಾಟಕ್ಕೆ ಒಳಗಾದ ಪಂದ್ಯದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಹಾಗೂ ಅಜಿಂಕ್ಯ ರಹಾನೆ ಉತ್ತಮ ಆಟ ಪ್ರದರ್ಶಿಸಿದರು. ಭಾರತ ಸರಣಿಯ ಮೊದಲ ಪಂದ್ಯವನ್ನು ಏಳು ವಿಕೆಟ್ ಗಳಿಂದ ಗೆಲ್ಲುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0ಯಿಂದ ಮುನ್ನಡೆ ಸಾಧಿಸಿದೆ. [ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]
ಸ್ಕೋರ್ ಕಾರ್ಡ್ | ವೇಳಾಪಟ್ಟಿ
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 50 ಓವರ್ಗಳಲ್ಲಿ ಒಂಬತ್ತು ವಿಕೇಟ್ ನಷ್ಟಕ್ಕೆ 272 ದಾಖಲಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಮಳೆ ಎದುರಾಯಿತು. ಭಾರತ 16.4 ಓವರ್ ಗಳಲ್ಲಿ 100ರನ್ ಮಾಡಿದ್ದಾಗ ಪಂದ್ಯ ನಿಲ್ಲಿಸಬೇಕಾಯಿತು.. ಎರಡು ಗಂಟೆ ತಡವಾಗಿ ಪಂದ್ಯ ಪುನಃ ಆರಂಭಗೊಂಡಿತು.. ಮುಂದೇನಾಯ್ತು? ಭಾರತದ ಬೌಲಿಂಗ್ ಹೇಗಿತ್ತು? ಪಂದ್ಯದ ರೋಚಕ ಕ್ಷಣಗಳನ್ನು ಚಿತ್ರಗಳಲ್ಲಿ ನೋಡಿ ಆನಂದಿಸಿ...

ರಾಬಿನ್ ಉತ್ತಪ್ಪ ಆಟದ ಭಂಗಿ
ಢಾಕಾ: ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಅವರು 44 ಎಸೆತಗಳಲ್ಲಿ 50 ರನ್ ಗಳಿಸಿ ವಿವಾದಿತ ತೀರ್ಪಿಗೆ ಔಟಾಗಿ ಪೆವಿಲಿಯನ್ ಸೇರಿದರು. ಉತ್ತಪ್ಪ ಆಟದಲ್ಲಿ 3 ಸಿಕ್ಸರ್, 3 ಬೌಂದರಿ ಇತ್ತು, ಟೀಂ ಇಂಡಿಯಾ ಮರಳಿರುವ ಉತ್ತಪ್ಪ ತಮ್ಮ 6ನೇ ಅರ್ಧಶತಕ ದಾಖಲಿಸಿದರು.

ಉತ್ತಪ್ಪ ಹಾಗೂ ರಹಾನೆ ಬಿರುಸಿನ ಆಟ
ಉತ್ತಪ್ಪ ಹಾಗೂ ರಹಾನೆ ಬಿರುಸಿನ ಆಟಕ್ಕೆ ಬಾಂಗ್ಲಾ ಬೌಲರ್ ಗಳ ಬಳಿ ಉತ್ತರವಿರಲಿಲ್ಲ. ಅಜಿಂಕಯ ರಹಾನೆ 64 ರನ್ (70 ಎ, 5 ಬೌಂ,2 ಸಿಕ್ಸರ್) ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. 16.1 ಓವರ್ ಗಳಲ್ಲಿ ಈ ಜೋಡಿ 99 ರನ್ ಪೇರಿಸಿದ್ದು ಭಾರತದ ರನ್ ಚೇಸಿಂಗ್ ಸುಲಭ ಮಾಡಿತು.

ಅಂಬಟಿ ರಾಯುಡು ಆಟದ ಭಂಗಿ
26 ಓವರ್ ಗಳಲ್ಲಿ 150 ರನ್ ಗಳಿಸುವ ಪರಿಷ್ಕೃತ ಟಾರ್ಗೆಟ್ ಸಿಕ್ಕ ಮೇಲೆ ರಹಾನೆ ಜತೆ ಆಡುತ್ತಿದ್ದ ಪೂಅಜರ 9 ರನ್ ಗಳಿಸಿ ಔಟಾದರು. ಅಂಅಬ್ಟಿ ರಾಯುಡು ಜವಾಬ್ದಾರಿಯುತ ಆಟ ಪ್ರದರ್ಶಿಸಿ ಅಜೇಯ 16 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು.

ಅಂತಿಮವಾಗಿ ಗೆಲುವಿನ ನಗೆ
ಅಂತಿಮವಾಗಿ ಗೆಲುವಿನ ನಗೆ ಬೀರಿದ ನಾಯಕ ಸುರೇಶ್ ರೈನಾ ಹಾಗೂ ಅಂಬಟಿ ರಾಯುಡು ಅವರು ಪೆವಿಲಿಯನ್ ಕಡೆ ತೆರಳುತ್ತಿದ್ದಾರೆ. 24.5 ಓವರ್ ಗಳಲ್ಲಿ ಭಾರತ 3 ವಿಕೆಟ್ ಕಳೆದುಕೊಂಡು 153 ರನ್ ಚೆಚ್ಚಿ ಗೆಲುವು ಸಾಧಿಸಿತು.

ಜಮ್ಮು ಕ್ರಿಕೆಟಿಗ ರಸೂಲ್ ಪಾದಾರ್ಪಣೆ
ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟರ್ ಪ್ರಥಮ ಬಾರಿಗೆ ಟೀಂ ಇಂಡಿಯಾ ಪರ ಆಡಿದ್ದು ವಿಶೇಷವಾಗಿತ್ತು. ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಸ್ಪಿನ್ನರ್ ಪರ್ವೇಜ್ ರಸೂಲ್ ಅವರು 10 ಓವರ್ ಗಳಲ್ಲಿ 60 ರನ್ ಚೆಚ್ಚಿಸಿಕೊಂಡರೂ 2 ವಿಕೆಟ್ ಕಿತ್ತು ಶುಭಾರಂಭ ಮಾಡಿದರು.

ಬಾಂಗ್ಲಾದೇಶ ಉತ್ತಮ ಮೊತ್ತ ದಾಖಲು
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಉತ್ತಮ ಮೊತ್ತ ದಾಖಲಿಸಿತು. ಅನಾಮುಲ್ 44, ನಾಯಕ ಮುಶ್ಫೀಕರ್ 59, ಆಲ್ ರೌಂಡರ್ ಶಕೀಬ್ ಅಲ್ ಹಸನ್ 52, ಮೊಹಮ್ಮದುಲ್ಲ 41 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದರು.
ಭಾರತದ ಪರ ಮೊದಲ ಪಂದ್ಯವಾಡುತ್ತಿರುವ ಅಕ್ಷರ್ ಪಟೇಲ್ 59 ರನ್ನಿತ್ತು 1 ವಿಕೆಟ್, ರೈನಾ 1 ವಿಕೆಟ್, ಉಮೇಶ್ ಯಾದವ್ 48ಕ್ಕೆ 3 ವಿಕೆಟ್ ಕಿತ್ತರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications