Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block

ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಫೇಸ್ ಬುಕ್ಕಿಗೆ ಎಂಟ್ರಿ

ಬೆಂಗಳೂರು, ಜೂ.30: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಅಧಿಕೃತ ಫೇಸ್ ಬುಕ್ ಪುಟಕ್ಕೆ ಚಾಲನೆ ಸಿಕ್ಕಿದೆ. ರಾಹುಲ್ ದ್ರಾವಿಡ್ ಅವರು ವೆಬ್ ಸೈಟ್ ಬಿಟ್ಟರೆ ಮತ್ತೆ ಯಾವುದೇ ಸಾಮಾಜಿಕ ಜಾಲ ತಾಣಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಅಧಿಕೃತ ಪುಟದ ಮೂಲಕ ದ್ರಾವಿಡ್ ಅವರ ಚಟುವಟಿಕೆಗಳ ಅಪ್ದೇಟ್ ಗಳು ಅವರ ಅಭಿಮಾನಿಗಳಿಗೆ ಸಿಗಲಿದೆ.

ಜೂ.24ರಂದೇ ಚಾಲನೆ ಸಿಕ್ಕಿದ ಈ ಫೇಸ್ ಬುಕ್ ಪುಟಕ್ಕೆ ಈಗ ಫೇಸ್ ಬುಕ್ ನಿಂದ ಅಧಿಕೃತ ಮುದ್ರೆ ಬಿದ್ದಿದೆ. ಈ ವಿಷಯವನ್ನು ದೃಢಪಡಿಸಿರುವ ರಾಹುಲ್ ದ್ರಾವಿಡ್ ಅವರು ಅಭಿಮಾನಿಗಳಿಗಾಗಿ ವಿಡಿಯೋ ಸಂದೇಶವನ್ನು ಕಳಿಸಿದ್ದಾರೆ.ಈ ಪುಟವನ್ನು ನನ್ನ ತಂಡವೇ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.[ದ್ರಾವಿಡ್ ಸಾಧನೆ ಪಠ್ಯ ಪುಸ್ತಕ ರೂಪದಲ್ಲಿ ಲಭ್ಯ]

Cricket Legend Rahul Dravid facebook Official page

ರಾಹುಲ್ ದ್ರಾವಿಡ್ ಅವರ ಫೇಸ್ ಬುಕ್ ಪುಟಕ್ಕೆ ಈ ಸಮಯಕ್ಕೆ(ಜೂ.30, 11 ಗಂಟೆ) 6,31,415 ಲೈಕ್ಸ್ ಸಿಕ್ಕಿದೆ. ರಾಹುಲ್ ದ್ರಾವಿಡ್ ಅವರ ವಿಡಿಯೋ ಸಂದೇಶಕ್ಕೆ ಸುಮಾರು 831 ಬಾರಿ ಹಂಚಿಕೆಯಾಗಿದ್ದು, 22,875 ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 580 ಕ್ಕೂ ಅಧಿಕ ಮಂದಿ ದ್ರಾವಿಡ್ ಅವರನ್ನು ಸ್ವಾಗತಿಸಿ ಶುಭ ಕೋರಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ ಗೆ ಕಾಲಿಟ್ಟು ಕಿಚ್ಚು ಹಬ್ಬಿಸಿದ್ದರು. ಇಟಲಿ ಪ್ರವಾಸದಲ್ಲಿರುವ ಸಚಿನ್ ಅವರು ಅಲ್ಲಿನ ಪ್ರವಾಸಿ ತಾಣಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ದ್ರಾವಿಡ್ ಅವರ ಪುಟದಿಂದ ಏನೇನು ನಿರೀಕ್ಷಿಸಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ರಾಹುಲ್ ದ್ರಾವಿಡ್ ಅವರ ಅಧಿಕೃತ ಫೇಸ್ ಬುಕ್ ಪುಟಕ್ಕೆ ಲಿಂಕ್ ಇಲ್ಲಿದೆ

ಅಭಿಮಾನಿಗಳಿಗೆ ದ್ರಾವಿಡ್ ನೀಡಿದ ವಿಡಿಯೋ ಸಂದೇಶ ಇಲ್ಲಿದೆ:

Off the mark...
Posted by Rahul Dravid on 29 June 2015

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+