ಕೋವಿಡ್-19 ಸೋಂಕಿತರಿಗೆ ನೆರವಿನ ಹಸ್ತ ಚಾಚಿದ 'ಕ್ರಿಕೆಟ್ ದೇವರು'

ನವದೆಹಲಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತೆಂಡೂಲ್ಕರ್ ಕೋವಿಡ್-19 ಸೋಂಕಿತರ ನೆರವಿಗೆ ನಿಂತಿದ್ದಾರೆ. ಕೊರೊನಾ ವೈರಸ್ ಸೋಂಕಿತರಿಗಾಗಿ ಆಮ್ಲಜನಕ ಸಾಂದ್ರಕಗಳ ಸಂಗ್ರಹಣೆಗೆ ತೆಂಡೂಲ್ಕರ್ 1 ಕೋಟಿ ರೂ. ದೇಣಿಗೆ ನೀಡುವ ಮೂಲಕ ಮಾನವೀಯತೆಗಾಗಿ ತುಡಿದಿದ್ದಾರೆ.
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಒಂದೇ ದಿನಕ್ಕೆ ಹತ್ತಿರ 4 ಲಕ್ಷದಷ್ಟು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಆಸ್ಪತ್ರೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರಿಗೆ ನೀಡುವ ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಎದುರಾಗುತ್ತಿದೆ.
ಹೀಗಾಗಿಯೇ ಕ್ರೀಡಾ ಕ್ಷೇತ್ರಗಳ ಅನೇಕರು ಕೋವಿಡ್-ಪರಿಹಾರಕ್ಕೆ ಕೈ ಜೋಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಬೌಲಿಂಗ್ ಆಲ್ ರೌಂಡರ್ ಪ್ಯಾಟ್ ಕಮಿನ್ಸ್ ಕೂಡ 50,000 ಡಾಲರ್ ಹಣವನ್ನು ಪಿಎಂ ಕೇರ್ಸ್‌ಗೆ ದೇಣಿಗೆ ನೀಡಿದ್ದರು.
'ಅಗತ್ಯವಿರುವ ಈ ಸಮಯದಲ್ಲಿ ರಾಷ್ಟ್ರದಾದ್ಯಂತದ ಆಸ್ಪತ್ರೆಗಳಿಗೆ ಜೀವ ಉಳಿಸುವ ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸುವ ಮತ್ತು ಒದಗಿಸುವ ಪ್ರಯತ್ನದಲ್ಲಿ ಸಚಿನ್ ಅವರು 'ಮಿಷನ್ ಆಕ್ಸಿಜನ್'ಗೆ 1 ಕೋಟಿ ರೂ. ದೇಣಿಗೆ ನೀಡಿದ್ದು, ಅವರ ನಡೆ ಹೃದಯ ಸ್ಪರ್ಶಿಸಿದೆ,' ಎಂದು ಮಿಷನ್ ಆಕ್ಸಿಜನ್ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications