ಆಸ್ಟ್ರೇಲಿಯಾದ ಕ್ರಿಕೆಟರ್ ಫಿಲ್ ಹ್ಯೂಸ್ ದುರಂತ ಸಾವು
ಸಿಡ್ನಿ,ನ.27: ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಆಟಗಾರ ಫಿಲ್ ಹ್ಯೂಸ್ ಅವರು ದುರಂತ ಸಾವನ್ನಪ್ಪಿದ್ದಾರೆ. ಪಂದ್ಯದ ವೇಳೆಮಾರಣಾಂತಿಕ ದಾಳಿ ತುತ್ತಾಗಿ ಆಸ್ಪತ್ರೆ ಸೇರಿದ್ದ ಹ್ಯೂಸ್ ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.
'25 ವರ್ಷ ವಯಸ್ಸಿನ ಎಡಗೈ ಆಟಗಾರ ಫಿಲ್ ಹ್ಯೂಸ್ ಅವರು ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ(CA) ಅಧಿಕೃತವಾಗಿ ಟ್ವೀಟ್ ಮಾಡಿದೆ. [ಕಂಬಿನಿ ಮಿಡಿದ ಟ್ವೀಟ್ ಲೋಕ]

ಷೆಫೀಲ್ಡ್ ಶೀಲ್ಡ್ ಪಂದ್ಯವೊಂದರಲ್ಲಿ ಮಂಗಳವಾರ ಬೆಳಗ್ಗೆ ನಡೆದ ಘಟನೆ ಕ್ರಿಕೆಟ್ ಲೋಕವನ್ನು ತಲ್ಲಣಗೊಳಿಸಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನ್ಯೂ ಸೌಥ್ ವೇಲ್ಸ್ ಹಾಗೂ ದಕ್ಷಿಣ ಆಸ್ಟ್ರೇಲಿಯಾ ನಡುವಿನ ನಾಲ್ಕು ದಿನಗಳ ಪಂದ್ಯದಲ್ಲಿ ಈ ದುರ್ಘಟನೆ ನಡೆದಿದೆ.ಫಿಲ್ ಹ್ಯೂಸ್ ದೇಹಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸಿದ್ದರು. [ಕ್ರಿಕೆಟರ್ ಗೆ ಮಾರಕವಾದ ಬೌನ್ಸರ್ ]
ಸಿಡ್ನಿಯ ಸೆಂಟ್ ವಿನ್ಸೆಂಟ್ ಆಸ್ಪತ್ರೆಯಲ್ಲಿ ಬುಧವಾರ ಫಿಲ್ ಹ್ಯೂಸ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಹ್ಯೂಸ್ ಅವರ ಚೇತರಿಕೆಗಾಗಿ ವಿವಿಧ ಕ್ರಿಕೆಟ್ ಸಂಸ್ಥೆಗಳು, ಹಾಲಿ, ಮಾಜಿ ಆಟಗಾರರು, ಅಭಿಮಾನಿಗಳು ಪ್ರಾರ್ಥಿಸಿದ್ದರು. ಅದರೆ, ತಾಯಿ ಹಾಗೂ ಸೋದರಿ ಮತ್ತು ಕ್ರಿಕೆಟ್ ಅಭಿಮಾನಿಗಳನ್ನು ಹ್ಯೂಸ್ ಅಗಲಿದ್ದಾರೆ. [ಫಿಲ್ ಹ್ಯೂಸ್ ಚೇತರಿಕೆಗೆ ಕೊಹ್ಲಿ ಶುಭ ಹಾರೈಕೆ]
ನ್ಯೂ ಸೌಥ್ ವೇಲ್ಸ್ ಪರ ಆಡುತ್ತಿದ್ದ ಹ್ಯೂಸ್ ಅವರು 63 ರನ್ ಗಳಿಸಿ ಆಡುತ್ತಿದ್ದಾಗ ಸೀನ್ ಅಬಾಟ್ ಅವರು ಬೌನ್ಸರ್ ಎಸೆದಿದ್ದರು. ಬೌನ್ಸರ್ ಹುಕ್ ಮಾಡಲು ಯತ್ನಿಸಿದಾಗ ತಲೆಗೆ ಚೆಂಡು ಬಡಿದಿದೆ. ಈ ದುರಂತವನ್ನು ಹ್ಯೂಸ್ ಅವರ ತಾಯಿ ಹಾಗೂ ಸೋದರಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದು ನೋಡಿದ್ದು ದುರಂತವೇ ಸರಿ.
ಮೃತ ಹ್ಯೂಸ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತನ್ನ ಸಂತಾಪ ಸಂದೇಶದಲ್ಲಿ ಹೇಳಿದೆ. ದುರಂತದ ನಡೆದಿದ್ದು ಹೇಗೆ? ವಿಡಿಯೋ ಕ್ಲಿಪ್ಪಿಂಗ್ ನೋಡಿ
ಹ್ಯೂಸ್ ಅವರು ಆಸ್ಟ್ರೇಲಿಯಾ ಪರ 26 ಟೆಸ್ಟ್, 25 ಏಕದಿನ ಕ್ರಿಕೆಟ್, 1 ಟಿ 20 ಪಂದ್ಯವಾಡಿದ್ದಾರೆ. ಭಾರತ ವಿರುದ್ಧ ಟೆಸ್ಟ್ ಸರಣಿ ಆಡುವ ಕನಸು ಹೊತ್ತಿದ್ದರು. ಬ್ರಿಸ್ಬೇನ್ ನಲ್ಲಿ ಡಿ.4ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.[ವೇಳಾಪಟ್ಟಿ ನೋಡಿ]
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications