ವೆಸ್ಟ್ ಇಂಡೀಸ್, ಐರ್ಲೆಂಡ್ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಕೇಪ್‌ಟೌನ್: ಮುಂಬರಲಿರುವ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡಗಳನ್ನು ಪ್ರಕಟಿಸಿದೆ. ಕಳೆದ ಕೆಲವು ತಿಂಗಳಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಲಿರುವುದಾಗಿ ಹೇಳಲಾಗುತ್ತಿದ್ದ ಎಬಿ ಡಿ ವಿಲಿಯರ್ಸ್ ಪ್ರಕಟಿತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಅವರ ಅಂತಾರಾಷ್ಟ್ರೀಯ ನಿವೃತ್ತಿ ಹಾಗೇ ಮುಂದುವರೆಯಲಿದೆ ಎಂದು ಕ್ರಿಕೆಟ್ ಸೌತ್ ಆಫ್ರಿಕಾ ಖಾತರಿಪಡಿಸಿದೆ. 2021ರ ಟಿ20 ವಿಶ್ವಕಪ್‌ನಲ್ಲಿ ಎಬಿಡಿ ಆಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಇದರಿಂದ ನಿರಾಸೆಯಾಗಿದೆ.
ಎಬಿ ಡಿ ವಿಲಿಯರ್ಸ್ ಇನ್ಮುಂದೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದ ಪರ ಆಡುತ್ತಿಲ್ಲ ಎಂದು ತಂಡದ ಕೋಚ್ ಮಾರ್ಕ್ ಬೌಚರ್ ಕೂಡ ಮಾಹಿತಿ ನೀಡಿದ್ದಾರೆ. 'ನನ್ನನ್ನು ತಂಡದಲ್ಲಿ ಆಡಿಸುವ ಬಗ್ಗೆ ಆಸಕ್ತಿಯಿದೆಯಾ ಎಂದು ಕಳೆದ ವರ್ಷ ಎಬಿಡಿ ನನ್ನಲ್ಲಿ ಎಬಿಡಿ ಪ್ರಶ್ನಿಸಿದ್ದರು. ಅದಕ್ಕೆ ಹೌದು ಎಂದಿದ್ದೆ. ಆದರೆ ಐಪಿಎಲ್ ಬಳಿಕ ಸಂದರ್ಭಕ್ಕನುಗುಣವಾಗಿ ನಿರ್ಧರಿಸುತ್ತೇನೆ ಎಂದಿದ್ದರು. ಈಗ ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯುವ ನಿರ್ಧಾರ ತಾಳಿದ್ದಾರೆ,' ಎಂದು ಬೌಚರ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಜೂನ್ 10ರಿಂದ ಎರಡು ಟೆಸ್ಟ್ ಪಂದ್ಯ ಬಳಿಕ 5 ಟಿ20ಐ ಪಂದ್ಯ ಆಡಲಿದೆ. ಅದಾಗಿ ಜುಲೈ 11ರಿಂದ ಐರ್ಲೆಂಡ್ ವಿರುದ್ಧ 3 ಏಕದಿನ, 3 ಟಿ20ಐ ಪಂದ್ಯಗಳನ್ನಾಡಲಿದೆ.

ಎಬಿಡಿ ಯಾಕೆ ಆಡುತ್ತಿಲ್ಲ?
2018ರ ಮೇ 23ರಂದು ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಆ ಬಳಿಕ 2019ರ ಏಕದಿನ ವಿಶ್ವಕಪ್‌ಗೂ ಮುನ್ನ ನಿವೃತ್ತಿ ವಾಪಸ್ ಪಡೆದಿದ್ದ ಎಬಿಡಿ, ವಿಶ್ವಕಪ್‌ನಲ್ಲಿ ಆಡುವ ಇಂಗಿತ ತೋರಿಕೊಂಡಿದ್ದರು. ಆದರೆ ಆಫ್ರಿಕಾ ತಂಡದಲ್ಲಿ ಎಬಿಡಿಗೆ ಸ್ಥಾನ ಸಿಕ್ಕಿರಲಿಲ್ಲ. ಐಪಿಎಲ್ ಬಳಿಕ ಅಂತಾರಾಷ್ಟ್ರೀಯ ಕಮ್‌ಬ್ಯಾಕ್ ಮಾಡುವುದಾಗಿ ಎಬಿಡಿ ಹೇಳಿದ್ದರಾದರೂ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಆಟಗಾರರಿಗೆ ಅವಕಾಶ ಸಿಗಲಿ ಎಂದು ನಿರ್ಧಾರ ಬಲಿಸಿದ್ದಾರೆ ಎಂಬರ್ಥದಲ್ಲಿ ಮಾರ್ಕ್ ಬೌಚರ್ ಹೇಳಿದ್ದಾರೆ.

ವಿಂಡೀಸ್ ವಿರುದ್ಧದ ಟೆಸ್ಟ್‌ಗೆ ದಕ್ಷಿಣ ಆಫ್ರಿಕಾ ತಂಡ
ಡೀನ್ ಎಲ್ಗರ್ (ನಾಯಕ), ಟೆಂಬಾ ಬವುಮಾ (ಉಪನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸಾರೆಲ್ ಎರ್ವೀ, ಬ್ಯೂರನ್ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಐಡೆನ್ ಮಾರ್ಕ್ರಮ್, ವಯಾನ್ ಮುಲ್ಡರ್, ಅನ್ರಿಕ್ ನೋರ್ಕಿಯಾ, ಕೀಗನ್ ಪೀಟರ್ಸನ್, ಕಗಿಸೊ ರಬಾಡಾ, ರಾಸ್ಸಿ ವಾನ್ ಡೆರ್ ಡುಸೆನ್, ಕೈಲ್ ವೆರೆನ್ನೆ, ತಬ್ರೈಜ್ ಶಮ್ಸಿ, ಲಿಜಾಡ್ ವಿಲಿಯಮ್ಸ್, ಪ್ರೆನೆಲನ್ ಸುಬ್ರಾಯೆನ್, ಮಾರ್ಕೊ ಜಾನ್ಸೆನ್.

ವಿಂಡೀಸ್ ವಿರುದ್ಧದ ಟಿ20ಐಗೆ ಸೌತ್ ಆಫ್ರಿಕಾ ತಂಡ
ಟೆಂಬಾ ಬಾವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಜಾರ್ನ್ ಫಾರ್ಚುಯಿನ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಜಾರ್ಜ್ ಲಿಂಡೆ, ಸಿಸಂಡಾ ಮಗಾಲಾ, ಜನ್ನೆಮನ್ ಮಲನ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನೋರ್ಕಿಯಾ, ಆ್ಯಂಡಿಲೆ ಫೆಹ್ಲಕ್ವಾಯೊ, ಡ್ವೇನ್ ಪ್ರಿಟೋರಿಯಸ್, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡುಸೆನ್, ಕೈಲ್ ವೆರೆನ್ನೆ, ಲಿಜಾಡ್ ವಿಲಿಯಮ್ಸ್.

ಐರ್ಲೆಂಡ್ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ
ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಜಾರ್ನ್ ಫಾರ್ಚುಯಿನ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಜಾರ್ಜ್ ಲಿಂಡೆ, ಸಿಸಂದಾ ಮಾಗಲಾ, ಕೇಶವ್ ಮಹಾರಾಜ್, ಜನ್ನೆಮನ್ ಮಲನ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನೋರ್ಕಿಯಾ, ಆ್ಯಂಡಿಲೆ ಫೆಹ್ಲಕ್ವಾಯೊ, ಕಾಗಿಸೊ ರಬಾಡಾ, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡುಸೆನ್, ಕೈಲ್ ವೆರೆನ್ನೆ, ಲಿಜಾಡ್ ವಿಲಿಯಮ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications