ಫಿಲಿಪ್ಸ್ ವಿಮಾನ ಲ್ಯಾಂಡಿಂಗ್ ಮಾಡುವ ವಿಡಿಯೋ ಸಖತ್ ವೈರಲ್
ಗ್ಲೆನ್ ಫಿಲಿಪ್ಸ್ ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ. ಇವರು ಬ್ಯಾಟಿಂಗ್, ಬೌಲಿಂಗ್ ಹಾಗೂ ತಮ್ಮ ಅದ್ಭುತ ಕ್ಷೇತ್ರ ರಕ್ಷಣೆಗೆ ಹೆಸರುವಾಸಿ. ಈಗ ಇವರ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಈ ಮೂಲಕ ಫಿಲಿಪ್ಸ್ ತಾವು ಮೈದಾನದಲ್ಲಿ ಅಷ್ಟೇ ಆಲ್‌ರೌಂಡರ್ ಅಲ್ಲ. ಮೈದಾನದ ಹೊರಗೂ ಆಲ್‌ರೌಂಡರ್ ಎಂಬುದನ್ನು ಸಾಬೀತು ಪಡಿಸುವಂತಿದೆ.
ಮೈದಾನದಲ್ಲಿ ತಮ್ಮ ಕ್ಷೇತ್ರ ರಕ್ಷಣೆಯಿಂದಲೇ ಫಿಲಿಪ್ಸ್ ಹೆಸರುವಾಸಿ. ಆಕರ್ಷಕ ಕ್ಯಾಚ್‌ಗಳನ್ನು ಪಡೆದು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಕ್ಷಮತೆ ಫಿಲಿಪ್ಸ್ ಅವರಿಗಿದೆ. ಆದರೆ ಇವರು ಇತ್ತೀಚಿಗೆ ನ್ಯೂಜಿಲೆಂಡ್‌ನಲ್ಲಿ ವಿಮಾನ ಹಾರಾಡಿಸಿ ಸುದ್ದಿಯಾಗಿದ್ದಾರೆ. ಅವರು ಸ್ವತಃ ತಮ್ಮ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್ ಜೊತೆಗೆ ಫಿಲಿಪ್ಸ್ ತಮ್ಮ ನೆನಪನ್ನು ತೆರೆದಿಟ್ಟಿದ್ದಾರೆ.

ಮಾರ್ಚ್ 17 ರಂದು ಗ್ಲೆನ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ವಿಮಾನವನ್ನು ಲ್ಯಾಂಡ್ ಮಾಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಚಕಿತರಾಗಿದ್ದಾರೆ. ಇವರು ಈ ವಿಡಿಯೋ ಹಂಚಿಕೊಳ್ಳುವ ಮೊದಲು ಫಿಲಿಪ್ಸ್ ಫ್ಲೈಯಿಂಗ್ ಸ್ಕೂಲ್‌ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡು ಬಂದಿದೆ.
ವಿಮಾನ ಹಾರಿಸುವುದು ನನ್ನ ಕನಸು. ನಾನು ಕ್ರಿಕೆಟ್ ಆಡದೇ ಇದ್ದಿದ್ದರೆ ಮತ್ತು ಬಾಲ್ಯದಲ್ಲಿ ನನ್ನ ಬಳಿ ಹಣ ಇದ್ದಿದ್ದರೆ ನಾನು ಬಹುಶಃ ಪೈಲಟ್ ಆಗುತ್ತಿದೆ ಎಂದು ಫಿಲಿಪ್ಸ್ ಹೇಳಿದ್ದರು ಎಂದು ವರದಿಗಳು ಬಂದಿವೆ.
ಪರವಾನಿಗೆ ಹೊಂದಿರುವ ಪೈಲಟ್
ಗ್ಲೆನ್ ಫಿಲಿಪ್ಸ್ ಪರವಾನಿಗೆ ಪಡೆದ ಪೈಲಟ್. ಅವರು ಬಿಡುವಿಲ್ಲದ ಕ್ರಿಕೆಟ್ ವೃತ್ತಿಜೀವನದ ಮಧ್ಯೆ ವಿಮಾನ ಹಾರಾಟದ ಪ್ರಯಾಣ ಆರಂಭಿಸಿದರು. ಇವರು ಕಳೆದ ಆವೃತ್ತಿಯ ಐಪಿಎಲ್ ಆಡುವಾಗ ಗಾಯಕ್ಕೆ ತುತ್ತಾಗಿ ತಿಂಗಳು ಗಟ್ಟಲೇ ಮೈದಾನದಿಂದ ದೂರ ಉಳಿಯಬೇಕಾಯಿತು. ಇವರು ತಮ್ಮ ಗಮನವನ್ನು ಬೇರೆ ಕಡೆಗೆ ಕೇಂದ್ರಿಕರಿಸಲು ಬಯಸಿದ್ದರು. ಇವರು ರಿಹ್ಯಾಬ್‌ಟಿಷನ್ ಸಮಯದಲ್ಲಿ ದಿನಕ್ಕೆ 12 ಗಂಟೆಗಳ ಕಾಲ ವಿಮಾನ ಹಾರಾಟದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅಲ್ಲದೆ ಅವರು ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.
ಕಳೆದ ವರ್ಷ ಮೇ 5 ರಂದು ಫಿಲಿಪ್ಸ್ ಹಾರಾಟವನ್ನು ಆರಂಭಿಸಿದರು. ಇವರು ತಮ್ಮ ಇಷ್ಟದ ವಿಷಯವನ್ನು ಬೇಗನೆ ಕಲಿತು, ಸುಮಾರು 80 ಗಂಟೆಗಳ ವಿಮಾನ ಹಾರಿಸುವ ಅನುಭವ ಪಡೆದ ಬಳಿಕ ಅವರು, ಖಾಸಗಿ ಪೈಲಟ್ ಪರವಾನಗಿಯನ್ನು ಗಳಿಸಿದರು.
2025 ರ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ, ಫಿಲಿಪ್ಸ್ ತಮ್ಮ ಹೋಟೆಲ್ ಕೋಣೆಯಲ್ಲಿ ಫ್ಲೈಟ್ ಸಿಮ್ಯುಲೇಟರ್ ಅನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.
ಗುಜರಾತ್ ಪರ ಆಡಲಿರುವ ಗ್ಲೆನ್
ಇನ್ನೇನು ಕೆಲವೇ ದಿನಗಳಲ್ಲಿ 19ನೇ ಆವೃತ್ತಿಯ ಐಪಿಎಲ್ ಆರಂಭವಾಗುತ್ತದೆ. ಈ ಲೀಗ್‌ನಲ್ಲಿ ಫಿಲಿಪ್ಸ್ ಅವರು ಗುಜರಾತ್ ಟೈಟಾನ್ಸ್ ತಂಡದ ಪರ ಆಡಲಿದ್ದಾರೆ. ಇವರು ಇತ್ತೀಚಿಗೆ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications