ಸಚಿನ್ ಬ್ಲಾಸ್ಟರ್ಸ್ ವಿರುದ್ಧ ವಾರ್ನ್ ತಂಡಕ್ಕೆ ಸರಣಿ ಜಯ
ಲಾಸ್ ಏಂಜಲೀಸ್, ನ.15: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಶೇನ್ ವಾರ್ನ್ ಅವರ ಕನಸಿನ ಕ್ರಿಕೆಟ್ ಟೂರ್ನಿ 'ಆಲ್ ಸ್ಟಾರ್ ಕ್ರಿಕೆಟ್ ಲೀಗ್' ಯಶಸ್ವಿಯಾಗಿ ಪೂರ್ಣಗೊಂಡಿದೆ. ಭಾನುವಾರ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸಚಿನ್ ಬ್ಲಾಸ್ಟರ್ಸ್ ತಂಡವನ್ನು ರೋಚಕವಾಗಿ ಸೋಲಿಸಿದ ವಾರ್ನ್ ವಾರಿಯರ್ಸ್ ತಂಡ 3-0 ಅಂತರದಿಂದ ಸರಣಿ ಗೆದ್ದುಕೊಂಡಿದೆ.
ನವೆಂಬರ್ 7ರಂದು ಚಾಲನೆ ಪಡೆದ ಮೂರು ಟಿ20 ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲಿ ಸಚಿನ್ ಬ್ಲಾಸ್ಟರ್ಸ್ ತಂಡ ಒಡ್ಡಿದ್ದ 220ರನ್ ಗುರಿಯನ್ನು ವಾರ್ನ್ ವಾರಿಯರ್ಸ್ ತಂಡ ಕೊನೆ ಓವರ್ ನಲ್ಲಿ ತಲುಪಿ 4 ವಿಕೆಟ್ ಗಳ ಜಯ ದಾಖಲಿಸಿದೆ. ನಾಯಕ ವಾರ್ನ್ ಅವರು ಸಿಕ್ಸರ್ ಎತ್ತುವ ಮೂಲಕ ಜಯ ದಾಖಲಿಸಿದರು.

220ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ವಾರಿಯರ್ಸ್ ಪರ ಜಾಕ್ ಕಾಲಿಸ್, ರಿಕಿ ಪಾಂಟಿಂಗ್, ಕುಮಾರ್ ಸಂಗಕ್ಕಾರ ಅವರ ಸಮಯೋಚಿತ ಅಟದ ನೆರವಿನಿಂದ ಗೆಲುವು ರೋಚಕವಾಗಿ ದಕ್ಕಿದೆ.
ಜಾಕ್ ಕಾಲಿಸ್ 47ರನ್ (23 ಎಸೆತ, 4x4, 4x6), ರಿಕಿ ಪಾಂಟಿಂಗ್ ಅಜೇಯ 43(25 ಎಸೆತ, 3x4,2x6) ಹಾಗೂ ಕುಮಾರ್ ಸಂಗಕ್ಕಾರ 42ರನ್ (21ಎಸೆತ, 4x4,3x6). ಕಾಲಿಸ್ ಹಾಗೂ ರಿಕಿ ಪಾಂಟಿಂಗ್ ಅವರು 6ನೇ ವಿಕೆಟ್ ಗೆ 88ರನ್ ಕಲೆ ಹಾಕಿದ್ದು ನಿರ್ಣಾಯಕವಾಯಿತು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಸಚಿನ್ ಅವರು 27 ಎಸೆತಗಳಲ್ಲಿ 56 ರನ್ ಚೆಚ್ಚಿದರೆ, ಗಂಗೂಲಿ 27ಎಸೆತಗಳಲ್ಲಿ 50ರನ್ ಗಳಿಸಿ ಪ್ರೇಕ್ಷಕರನ್ನು ರಂಜಿಸಿದರು. ನ್ಯೂಯಾರ್ಕ್ ನಲ್ಲಿ ನಡೆದ ಮೊದಲ ಪಂದ್ಯವನ್ನು 6ವಿಕೆಟ್ ಗಳಿಂದ ಹೋಸ್ಟನ್ ನಲ್ಲಿ ನಡೆದ ಎರಡನೇ ಪಂದ್ಯವನ್ನು 57ರನ್ ಗಳಿಂದ ಹಾಗೂ ಲಾಸ್ ಏಂಜಲೀಸ್ ಪಂದ್ಯವನ್ನು 4 ವಿಕೆಟ್ ಗಳಿಂದ ವಾರ್ನ್ ತಂಡ ಗೆದ್ದುಕೊಂಡಿದೆ.
ಸಂಕ್ಷಿಪ್ತ ಸ್ಕೋರ್
ಸಚಿನ್ ಬ್ಲಾಸ್ಟರ್ಸ್ 219/5, 20 ಓವರ್ಸ್
ಸಚಿನ್ ತೆಂಡೂಲ್ಕರ್ 56, ಸೌರವ್ ಗಂಗೂಲಿ 50, ಮಹೇಲ ಜಯವರ್ದನೆ 41, ಕಾರ್ಲ್ ಹೂಪರ್ 33, ಸೆಹ್ವಾಗ್ 27, ವೆಟ್ಟೋರಿ 3/33)
ವಾರ್ನೆ ವಾರಿಯರ್ಸ್ 224/6, 19.5 ಓವರ್ಸ್
ಜಾಕ್ ಕಾಲಿಸ್ 47, ಪಾಂಟಿಂಗ್ ಅಜೇಯ 43, ಕುಮಾರ್ ಸಂಗಕ್ಕಾರ 42, ಆಂಡ್ರ್ಯೂ ಸೈಮಂಡ್ಸ್ 31, ಸ್ವಾನ್ 2/21)
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications