ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಸ್ಮಿತ್
ಸಿಡ್ನಿ, ಜ.7: ಟೀಂ ಇಂಡಿಯಾ ವಿರುದ್ಧ ನಡೆದಿರುವ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ನಾಯಕ ಸ್ಟೀವ್ ಸ್ಮಿತ್ ಭರ್ಜರಿ ದಾಖಲೆ ಬರೆದಿದ್ದಾರೆ.
ಸರ್ ಡಾನ್ ಬ್ರಾಡ್ಮನ್ ಹಾಗೂ ಜಾಕ್ ಕಾಲೀಸ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸ್ಮಿತ್ ಸರಿಗಟ್ಟಿದ್ದಾರೆ. ಪ್ರಸ್ತುತ ಸರಣಿಯ ನಾಲ್ಕು ಪಂದ್ಯಗಳಲ್ಲೂ ಸ್ಮಿತ್ ಶತಕ ದಾಖಲಿಸಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ 117ರನ್ ಗಳಿಸಿದ್ದಾರೆ. ನಾಲ್ಕು ಟೆಸ್ಟ್ ಗಳ ಸರಣಿಯಲ್ಲಿ ಪ್ರತಿ ಪಂದ್ಯದಲ್ಲೂ ಶತಕ ಗಳಿಸಿದ್ದವರ ಪೈಕಿ ಸ್ಮಿತ್ ಹಾಗೂ ಕಾಲಿಸ್ ಹೆಸರು ಮಾತ್ರ ಉಳಿದಿದೆ.

ದಕ್ಷಿಣ ಆಫ್ರಿಕಾದ ಆಟಗಾರ ಜಾಕ್ ಕಾಲಿಸ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಈ ದಾಖಲೆ ಬರೆದಿದ್ದರು. 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಸತತ ಶತಕ ಗಳಿಸಿದವರ ಪೈಕಿ ಮಹಮ್ಮದ್ ಯೂಸುಫ್, ರಿಕಿ ಪಾಂಟಿಂಗ್, ಶೋಯಿಬ್ ಮೊಹಮ್ಮದ್, ರಾಸ್ ಟೇಲರ್, ಮೊಹಮ್ಮದ್ ಅಜರುದ್ದೀನ್, ಮ್ಯಾಥ್ಯೂ ಹೇಡನ್ ಹಾಗೂ ಕೆನ್ ಬ್ಯಾರಿಂಗ್ಟನ್ ಇದ್ದಾರೆ. [ಸಿಡ್ನಿ ಟೆಸ್ಟ್: ಸ್ಮಿತ್ ಶತಕ, ಆಸೀಸ್ ಬೃಹತ್ ಮೊತ್ತ]
ಡಾನ್ ಬ್ರಾಡ್ಮನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 226,112,167 ಹಾಗೂ 299 ರನ್ ನಾಟೌಟ್ ಗಳಿಸಿದರು ಅದರೆ, 5ನೇ ಟೆಸ್ಟ್ ಪಂದ್ಯದಲ್ಲಿ ಗಾಯದ ಕಾರಣ ಬ್ಯಾಟಿಂಗ್ ಮಾಡಿರಲಿಲ್ಲ.
25 ವರ್ಷ ವಯಸ್ಸಿನ ಸ್ಟೀವ್ ಸ್ಮಿತ್ ಈ ಸರಣಿಯಲ್ಲಿ ಅಡಿಲೇಡ್ ನಲ್ಲಿ 162ರನ್, ಬ್ರಿಸ್ಬೇನ್ ನಲ್ಲಿ 133, ಮೆಲ್ಬೋರ್ನ್ ನಲ್ಲಿ 192 ಹಾಗೂ ಸಿಡ್ನಿಯಲ್ಲಿ 117ರನ್ ಗಳಿಸಿದ್ದಾರೆ ಒಟ್ಟಾರೆ ಸರಣಿಯಲ್ಲಿ 7 ಇನ್ನಿಂಗ್ಸ್ ನಿಂದ 139.6 ರನ್ ಸರಾಸರಿಯಂತೆ 698 ರನ್ ಚೆಚ್ಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications