ವೆಸ್ಟ್ ಇಂಡೀಸ್ ಆಟಗಾರರ ಒಪ್ಪಂದದ ಪಟ್ಟಿ ಪ್ರಕಟ, ಹೋಲ್ಡರ್‌ಗೆ ಮಣೆ

ಪೋರ್ಟ್ ಆಫ್ ಸ್ಪೇನ್: ಆಲ್ ರೌಂಡರ್ ಜೇಸನ್ ಹೋಲ್ಡರ್‌ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಣೆ ಹಾಕಿದೆ. 2021-2022ರ ವರೆಗೆ ವೆಸ್ಟ್ ಇಂಡೀಸ್ ಪುರುಷರ ಕ್ರಿಕೆಟ್ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಹೋಲ್ಡರ್‌ಗೆ ವಿಂಡೀಸ್ ಮೂರೂ ಕ್ರಿಕೆಟ್ ಮಾದರಿಯಲ್ಲಿ ಸ್ಥಾನ ನೀಡಿದೆ. ಉಳಿಸಿಕೊಳ್ಳುವ ಅಂತಾರಾಷ್ಟ್ರೀಯ ಆಟಗಾರರ ಪಟ್ಟಿಯಲ್ಲಿ ಮೂರೂ ಮಾದರಿಗಳಲ್ಲಿ ಸ್ಥಾನ ಪಡೆದಿರುವ ವಿಂಡೀಸ್ ಆಟಗಾರ ಹೋಲ್ಡರ್ ಒಬ್ಬರೇ.
ಇದೇ ಜುಲೈ 1ರಿಂದ ಆರಂಭಗೊಳ್ಳುವ 2021-22ರ ಸೀಸನ್, 30 ಜೂನ್ 2022ಕ್ಕೆ ಕೊನೆಗೊಳ್ಳಲಿದೆ. ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿರುವ ಆಟಗಾರರು ಈ ಅವಧಿಯವರೆಗೆ ಒಪ್ಪಂದಕ್ಕೆ ಒಳಗಾಗಲಿದ್ದಾರೆ. ಒಪ್ಪಂದದ ಪಟ್ಟಿಯಲ್ಲಿ ಒಟ್ಟು 18 ಮಂದಿ ಆಟಗಾರರಿದ್ದಾರೆ.

ಎಲ್ಲಾ ಮಾದರಿಯ ಒಪ್ಪಂದ
ಜೇಸನ್ ಹೋಲ್ಡರ್: 2021-22ರ ವರೆಗೆ ಎಲ್ಲಾ ಮಾದರಿಯ ಒಪ್ಪಂದ ಹೊಂದಿರುವ ಆಟಗಾರ ಜೇಸನ್ ಹೋಲ್ಡರ್ ಒಬ್ಬರೇ. ಹೋಲ್ಡರ್ 47 ಟೆಸ್ಟ್ ಪಂದ್ಯಗಳಲ್ಲಿ 2253 ರನ್, 123 ವಿಕೆಟ್, 118 ಏಕದಿನ ಪಂದ್ಯಗಳಲ್ಲಿ 1837 ರನ್, 139 ವಿಕೆಟ್, 20 ಟಿ20ಐ ಪಂದ್ಯಗಳಲ್ಲಿ 163 ರನ್, 16 ವಿಕೆಟ್ ದಾಖಲೆ ಹೊಂದಿದ್ದಾರೆ.

ರೆಡ್ ಬಾಲ್ ಒಪ್ಪಂದಗಳು
ಕ್ರೇಗ್ ಬ್ರಾಥ್‌ವೈಟ್, ಜೆರ್ಮೈನ್ ಬ್ಲ್ಯಾಕ್‌ವುಡ್, ಎನ್‌ಕ್ರುಮಾ ಬೊನ್ನರ್ *, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಕೈಲ್ ಮೇಯರ್ಸ್ ಮತ್ತು ಕೆಮರ್ ರೋಚ್.

ವೈಟ್ ಬಾಲ್ ಒಪ್ಪಂದಗಳು
ಕೀರನ್ ಪೊಲಾರ್ಡ್, ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ಶೈ ಹೋಪ್, ಅಕೀಲ್ ಹೊಸೈನ್ *, ಎವಿನ್ ಲೂಯಿಸ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್ ಮತ್ತು ಹೇಡನ್ ವಾಲ್ಷ್ ಜೂನಿಯರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications