World Cup 2023 Trophy: ಪ್ರಪಂಚದ 7ನೇ ಅದ್ಭುತ ತಾಜ್‌ಮಹಲ್ ತಲುಪಿದ ವಿಶ್ವಕಪ್ ಟ್ರೋಫಿ
ಬಹು ನಿರೀಕ್ಷಿತ 2023ರ ಏಕದಿನ ವಿಶ್ವಕಪ್‌ಗೆ ಕೇವಲ 50 ದಿನಗಳು ಉಳಿದಿವೆ. ಇದೀಗ ಐಸಿಸಿ ಟ್ರೋಫಿಯನ್ನು ಉತ್ತರಪ್ರದೇಶದ ಆಗ್ರಾದ ತಾಜ್ ಮಹಲ್‌ನಲ್ಲಿ ಬುಧವಾರ, ಆಗಸ್ಟ್ 16ರಂದು ಪ್ರದರ್ಶಿಸಲಾಯಿತು.
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲೇ ನಡೆಯುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಂತಿಮವಾಗಿ ಚಾಂಪಿಯನ್ ತಂಡಕ್ಕೆ ಬಹುಮಾನವಾಗಿ ಮಿನುಗುವ ಟ್ರೋಫಿಯನ್ನು ನೀಡಲಾಗುತ್ತದೆ.

ಇದೀಗ ಜಗತ್ತನ್ನು ಸುತ್ತು ಹಾಕುತ್ತಿರುವ ವಿಶ್ವಕಪ್ ಟ್ರೋಫಿಯು ವಿಶ್ವದ ಅದ್ಭುತಗಳಲ್ಲೊಂದಾದ ತಾಜ್ ಮಹಲ್‌ನ ಎದುರು ಪ್ರದರ್ಶಿಸಲಾಯಿತು.
ತಾಜ್ ಮಹಲ್‌ಗೆ ವಿಶ್ವಕಪ್ ಟ್ರೋಫಿ ಭೇಟಿಯು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಕ್ರಿಕೆಟ್‌ನ ಉತ್ತುಂಗದ ಸಾಮರಸ್ಯದ ಮಿಶ್ರಣವನ್ನು ಸಾರುತ್ತದೆ. ಪಂದ್ಯಾವಳಿಯ ಉತ್ಸಾಹವು ಇಮ್ಮಡಿಯಾಗುತ್ತಿರುವ ಸಮಯದಲ್ಲೇ ಅಭಿಮಾನಿಗಳಿಗೆ ಟ್ರೋಫಿ ದರ್ಶನ ಮಾಡಿಸಲಾಗಿದೆ.
2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಪ್ರವಾಸವು ವಿಶ್ವಕಪ್‌ಗೆ ಸಂಬಂಧಿಸಿದ ಹಬ್ಬದ ಮತ್ತು ಸಂಭ್ರಮಾಚರಣೆಯ ಮನೋಭಾವವನ್ನು ಮೂಡಿಸುವ ಗುರಿಯನ್ನು ಹೊಂದಿದೆ. "ಕ್ರಿಕೆಟ್ ವಿಶ್ವಕಪ್ 2023ರ ಪಂದ್ಯಾವಳಿಗೆ 50 ದಿನಗಳು ಬಾಕಿ' ಎಂದು ಐಸಿಸಿ ಟ್ವೀಟ್ ಮಾಡಿದೆ.
ಇನ್ನು ಭಾರತದಲ್ಲಿ ನಡೆಯುವ ವಿಶ್ವಕಪ್‌ನ ಪರಿಷ್ಕೃತ ವೇಳಾಪಟ್ಟಿಯನ್ನು ಬುಧವಾರ, ಆಗಸ್ಟ್ 9ರಂದು ಐಸಿಸಿ ಬಿಡುಗಡೆ ಮಾಡಿತು. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವನ್ನು ಒಂದು ದಿನ ಮೊದಲು ಮರುನಿಗದಿಪಡಿಸಲಾಯಿತು. ಇದರೊಂದಿಗೆ ವಿಶ್ವಕಪ್ ಪಂದ್ಯಾವಳಿಯ ಇತರ ಎಂಟು ಪಂದ್ಯಗಳನ್ನು ಸಹ ಬದಲಾವಣೆ ಮಾಡಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವನ್ನು ಈ ಮೊದಲು ಭಾನುವಾರ, ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಆಡಿಸಬೇಕಿತ್ತು. ಆದರೆ ಈ ಪಂದ್ಯವನ್ನು ಒಂದು ದಿನ ಮುಂಚಿತವಾಗಿ ಬದಲಾಯಿಸಲಾಗಿದ್ದು ಶನಿವಾರ, ಅಕ್ಟೋಬರ್ 14ರಂದು ಅದೇ ಸ್ಥಳದಲ್ಲಿ ನಡೆಯಲಿದೆ.
ಇದರ ಪರಿಣಾಮ, ದೆಹಲಿಯಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ ವಿರುದ್ಧದ ಇಂಗ್ಲೆಂಡ್ ಪಂದ್ಯವನ್ನು ಶನಿವಾರ, ಅಕ್ಟೋಬರ್ 14ರ ಬದಲಾಗಿ ಭಾನುವಾರ, ಅಕ್ಟೋಬರ್ 15ಕ್ಕೆ ಬದಲಾಯಿಸಲಾಗಿದೆ.
ಇನ್ನು ಹೈದರಾಬಾದ್‌ನಲ್ಲಿ ಅಕ್ಟೋಬರ್ 12ರ ಗುರುವಾರದಂದು ನಡೆಯಬೇಕಿದ್ದ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಅಕ್ಟೋಬರ್ 10ರ ಮಂಗಳವಾರಕ್ಕೆ ಬದಲಾಯಿಸಲಾಗಿದೆ.
ಇದೇ ವೇಳೆ ನೆದರ್ಲ್ಯಾಂಡ್ಸ್ ವಿರುದ್ಧದ ಆತಿಥೇಯ ಭಾರತ ತಂಡದ ಕೊನೆಯ ಲೀಗ್ ಪಂದ್ಯವನ್ನು ಈಗ ನವೆಂಬರ್ 11ರಿಂದ 12ಕ್ಕೆ ಮುಂದೂಡಲಾಗಿದೆ. ಇದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೊನಲು ಬೆಳಕಿನ ಪಂದ್ಯವಾಗಿದೆ.
ಅಹಮದಾಬಾದ್, ಚೆನ್ನೈ, ಬೆಂಗಳೂರು, ದೆಹಲಿ, ಧರ್ಮಶಾಲಾ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ಸ್ಥಳಗಳು ಮುಖ್ಯ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಗುವಾಹಟಿ, ತಿರುವನಂತಪುರಂ ಮತ್ತು ಹೈದರಾಬಾದ್‌ನಲ್ಲಿ ಅಭ್ಯಾಸ ಪಂದ್ಯಗಳನ್ನು ಆಯೋಜಿಸುತ್ತದೆ.
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದ 10 ಸ್ಥಳಗಳಲ್ಲಿ ನಡೆಯಲಿರುವ ಈ ಅತಿದೊಡ್ಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಹತ್ತು ತಂಡಗಳು ಭಾಗವಹಿಸಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಪಂದ್ಯಾವಳಿಯ ಉದ್ಘಾಟನಾ ಮತ್ತು ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 46 ದಿನಗಳ ಟೂರ್ನಿಯ ಅವಧಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications