For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟರ್ ದಿನೇಶ್ ವೆಡ್ಸ್ ಸ್ಕ್ವಾಶ್ ಆಟಗಾರ್ತಿ ದೀಪಿಕಾ

By Mahesh

ಚೆನ್ನೈ, ಆಗಸ್ಟ್ 19: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಅವರು ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ಮಂಗಳವಾರ ಅಧಿಕೃತವಾಗಿ ಮದುವೆಯಾಗಿದ್ದಾರೆ. ಇದು ಇವರ ಮದುವೆಯ ಮೊದಲ ಭಾಗವಾಗಿದ್ದು, ಮತ್ತೊಮ್ಮೆ ವಿವಾಹ ಬಂಧನಕ್ಕೊಳಗಾಗಲಿದ್ದಾರೆ.

ಕಾರ್ತಿಕ್ ಹಾಗೂ ದೀಪಿಕಾ ಅವರು ಮಂಗಳವಾರದಂದು ಚೆನ್ನೈನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ 'ಐ ಡು ಐಡು' ಎಂದು ಪರಸ್ಪರ ಒಪ್ಪಿಗೆ ಸೂಚಿಸಿ ರಿಂಗ್ ಬದಲಾಯಿಸಿಕೊಂಡರು. ನಂತರ ಹಿಂದೂ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಗುರುವಾರ (ಆಗಸ್ಟ್ 20) ದಂದು ತೆಲುಗು ನಾಯ್ಡುಗಳ ಮದುವೆ ಮನೆ ಸಂಭ್ರಮವನ್ನು ಕಾಣಬಹುದು.

ಕ್ರಿಶ್ಚಿಯನ್ ಸಂಪ್ರದಾಯ, ತೆಲುಗು ನಾಯ್ಡು ಮದುವೆ ಮನೆ ಸಂಭ್ರಮದ ಜೊತೆಗೆ ಬ್ಯಾಚುಲರ್ಸ್ ಪಾರ್ಟಿ, ಸಂಗೀತ್ ಕಾರ್ಯಕ್ರಮ ಎಲ್ಲವೂ ನಡೆಯಲಿದೆ. ಕಾರ್ತಿಕ್ ಹಾಗೂ ದೀಪಿಕಾ ಅವರು ವಿಶೇಷ ನೃತ್ಯ ಪ್ರದರ್ಶನ ಕೂಡಾ ಇರುತ್ತದೆ. ನಿಕಿತಾ ಎಂಬ ಬಾಲ್ಯದ ಗೆಳತಿಯನ್ನು 2007ರಲ್ಲಿ ಕೈಹಿಡಿದಿದ್ದ ದಿನೇಶ್ ಕಾರ್ತಿಕ್ ಅವರಿಗೆ ಇದು 2ನೇ ವಿವಾಹವಾಗಿದೆ. ನಿಕಿತಾ ಈಗ ಮತ್ತೊಬ್ಬ ಕ್ರಿಕೆಟರ್ ಮುರಳಿ ವಿಜಯ್ ಪತ್ನಿಯಾಗಿದ್ದಾರೆ.

2013ರಲ್ಲೇ ದಿನೇಶ್ ಹಾಗೂ ದೀಪಿಕಾ ನಿಶ್ಚಿತಾರ್ಥ

2013ರಲ್ಲೇ ದಿನೇಶ್ ಹಾಗೂ ದೀಪಿಕಾ ನಿಶ್ಚಿತಾರ್ಥ

2013ರ ನವೆಂಬರ್ 15ರಂದು ದಿನೇಶ್ ಹಾಗೂ ದೀಪಿಕಾ ನಡುವೆ ನಿಶ್ಚಿತಾರ್ಥ ನೆರವೇರಿತ್ತು. ಚೆನ್ನೈನಲ್ಲಿ ಈ ಇಬ್ಬರು ಕ್ರೀಡಾಪಟುಗಳಿಗೆ ಫಿಟ್ನೆಸ್ ಮಾರ್ಗದರ್ಶನ ಪಡೆಯಲು ಇಬ್ಬರು ಒಂದೇ ಕೇಂದ್ರಕ್ಕೆ ಬರುತ್ತಿದ್ದರು .ಆಗ ಪರಿಚಯವಾಗಿ ನಂತರ ಸ್ನೇಹ, ಪ್ರೀತಿ ಬೆಳೆದು ಮದುವೆ ತನಕ ಬಂದಿದೆ.

ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್

ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್

30 ವರ್ಷದ ತಮಿಳುನಾಡು ವಿಕೆಟ್ ಕೀಪರ್ -ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ಅವರು ಟೀಂ ಇಂಡಿಯಾ ಪರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳೆರಡರಲ್ಲೂ ಆಡಿದ ಅನುಭವ ಹೊಂದಿದ್ದಾರೆ. 23 ಟೆಸ್ಟ್, 71 ಏಕದಿನ ಪಂದ್ಯ ಆಡಿದ್ದಾರೆ. ಐಪಿಎಲ್​ನಲ್ಲಿ ಅವರು ಮೊದಲು ಆರ್​ಸಿಬಿ ತಂಡದ ಪರ ಆಡಿದವರು ನಂತರ ಡೆಲ್ಲಿ ಹಾಗೂ ಮುಂತಾದ ತಂಡದಲ್ಲಿ ಕಾಣಿಸಿಕೊಂಡರು.

ದೇಶದ ಹೆಮ್ಮೆಯ ಸ್ಕ್ವಾಶ್ ಆಟಗಾರ್ತಿ ದೀಪಿಕಾ

ದೇಶದ ಹೆಮ್ಮೆಯ ಸ್ಕ್ವಾಶ್ ಆಟಗಾರ್ತಿ ದೀಪಿಕಾ

23 ವರ್ಷದ ದೀಪಿಕಾ ದೇಶದ ಸ್ಕ್ವಾಶ್ ಆಟಗಾರ್ತಿಯಾಗಿದ್ದಾರೆ. ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸ್ವರ್ಣ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಸಿಂಗಲ್ಸ್​ನಲ್ಲಿ ಕಂಚು ಗೆದ್ದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಳು ಪ್ರಶಸ್ತಿಗಳನ್ನು ಜಯಿಸಿರುವ ದೇಶದ ಹೆಮ್ಮೆಯ ಆಟಗಾರ್ತಿ.

ಕಾರ್ತಿಕ್ ಹಾಗೂ ದೀಪಿಕಾ

ಕಾರ್ತಿಕ್ ಹಾಗೂ ದೀಪಿಕಾ

ಕಾರ್ತಿಕ್ ಹಾಗೂ ದೀಪಿಕಾ ಅವರು ಮಂಗಳವಾರದಂದು ಚೆನ್ನೈನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಐ ಡು ಐ ಡು ಎಂದು ಪರಸ್ಪರ ಒಪ್ಪಿಗೆ ಸೂಚಿಸಿ ರಿಂಗ್ ಬದಲಾಯಿಸಿಕೊಂಡರು. ಮಂಗಳವಾರ ಅಧಿಕೃತವಾಗಿ ಮದುವೆಯಾಗಿದ್ದಾರೆ.

ಹಿಂದೂ ಸಂಪ್ರದಾಯದಂತೆ ಮದುವೆ

ಹಿಂದೂ ಸಂಪ್ರದಾಯದಂತೆ ಮದುವೆ

ಹಿಂದೂ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಗುರುವಾರ (ಆಗಸ್ಟ್ 20) ದಂದು ತೆಲುಗು ನಾಯ್ಡುಗಳ ಮದುವೆ ಮನೆ ಸಂಭ್ರಮವನ್ನು ಕಾಣಬಹುದು.

ಕಾರ್ತಿಕ್ ​ಗೆ ಇದು ಎರಡನೇ ಮದುವೆ

ಕಾರ್ತಿಕ್ ​ಗೆ ಇದು ಎರಡನೇ ಮದುವೆ

ನಿಕಿತಾ ಎಂಬ ಬಾಲ್ಯದ ಗೆಳತಿಯನ್ನು 2007ರಲ್ಲಿ ಕೈಹಿಡಿದಿದ್ದ ದಿನೇಶ್ ಕಾರ್ತಿಕ್ ಅವರಿಗೆ ಇದು 2ನೇ ವಿವಾಹವಾಗಿದೆ. ನಿಕಿತಾ ಈಗ ಮತ್ತೊಬ್ಬ ಕ್ರಿಕೆಟರ್ ಮುರಳಿ ವಿಜಯ್ ಪತ್ನಿಯಾಗಿದ್ದಾರೆ.

ದೀಪಿಕಾ-ದಿನೇಶ್ ಸಂಗೀತ್ ಕಾರ್ಯಕ್ರಮ

ದೀಪಿಕಾ-ದಿನೇಶ್ ಸಂಗೀತ್ ಕಾರ್ಯಕ್ರಮ

ಕ್ರಿಶ್ಚಿಯನ್ ಸಂಪ್ರದಾಯ, ತೆಲುಗು ನಾಯ್ಡು ಮದುವೆ ಮನೆ ಸಂಭ್ರಮದ ಜೊತೆಗೆ ಬ್ಯಾಚುಲರ್ಸ್ ಪಾರ್ಟಿ, ಸಂಗೀತ್ ಕಾರ್ಯಕ್ರಮ ಎಲ್ಲವೂ ನಡೆಯಲಿದೆ. ಕಾರ್ತಿಕ್ ಹಾಗೂ ದೀಪಿಕಾ ಅವರು ವಿಶೇಷ ನೃತ್ಯ ಪ್ರದರ್ಶನ ಕೂಡಾ ಇರುತ್ತದೆ.

ಮುರಳಿ ವಿಜಯ್ ಜೊತೆ ಕಾರ್ತಿಕ್ ಮಾಜಿ ಪತ್ನಿ

ಮುರಳಿ ವಿಜಯ್ ಜೊತೆ ಕಾರ್ತಿಕ್ ಮಾಜಿ ಪತ್ನಿ

ಕಾರ್ತಿಕ್ ಮಾಜಿ ಪತ್ನಿ ನಿಕಿತಾ ಅವರ ಮನೆಗೆ ಬರುತ್ತಿದ್ದ ಮುರಳಿ ವಿಜಯ್ ಅವರು ಕೊನೆಗೆ ಕಾರ್ತಿಕ್ ಇಲ್ಲದ ಸಮಯದಲ್ಲಿ ಸಂಬಂಧ ಬೆಳೆಸಿಬಿಟ್ಟರು. ಡೆಲ್ಲಿ ಪರ ಆಡುತ್ತಿದ್ದ ಕಾರ್ತಿಕ್ ಚೆನ್ನೈಗೆ ಬಂದಾಗ ಪತ್ನಿ ಗರ್ಭಿಣಿಯಾಗಿದ್ದು ಕೇಳಿ ಆಘಾತಕ್ಕೊಳಗಾಗಿ ವಿಚ್ಛೇದನ ನೀಡಿದರು. ಈಗ ಮುರಳಿ ವಿಜಯ್ ಹಾಗೂ ನಿಕಿತಾ ತಮ್ಮ ಮಗುವಿನೊಂದಿಗೆ ಸುಖವಾಗಿದ್ದಾರೆ. ಮುರಳಿ ಹಾಗೂ ಕಾರ್ತಿಕ್ ಈಗಲೂ ಒಂದೇ ತಂಡದಲ್ಲಿ ಆಡಿದರೂ ಮಾತನಾಡುವುದಿಲ್ಲ.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+