ಟೀಮ್ ಇಂಡಿಯಾ ಮಹಿಳಾ ಕ್ರಿಕೆಟಿಗರ ಕ್ವಾರಂಟೈನ್ ಲೈಫ್: ಜೆಮಿಮಾ ರೊಡ್ರಿಗಸ್ ವೀಡಿಯೋ

ನವೆಂಬರ್‌ನಲ್ಲಿ ಯುಎಇನಲ್ಲಿ ನಡೆಯಲಿರುವ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಗೂ ಮುನ್ನ ಮುಂಬೈನ ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಕ್ವಾರಂಟೈನ್ ಆಗಿರುವ ಭಾರತೀಯ ಮಹಿಳಾ ಆಟಗಾರ್ತಿಯರು ಕ್ವಾರಂಟೈನ್ ಜೀವನ ಕಳೆಯುತ್ತಿದ್ದಾರೆ.
ಮಹಿಳಾ ಟಿ 20 ಕ್ರಿಕೆಟ್ಗಾಗಿ ಕ್ವಾರಂಟೈನ್ನಲ್ಲಿರುವ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ತಮ್ಮ ಕ್ವಾರಂಟೈನ್ನ ಮೊದಲ ದಿನದ ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಈ ವೀಡಿಯೋದಲ್ಲಿ ಕಾಮೆಂಟ್ರಿ ನೀಡುತ್ತಿರುವ ಜೆಮಿಮಾ ಗೋಡೆಗೆ ಚೆಂಡನ್ನ ಎಸೆದು ಅದನ್ನ ಬೆಡ್ ಮೇಲೆ ಹಾರಿ ಒಂದೇ ಕೈನಲ್ಲಿ ಕ್ಯಾಚ್ ಹಿಡಿದಿದ್ದಾರೆ
View this post on InstagramA post shared by Jemimah Rodrigues (@jemimahrodrigues) on
ಬಳಿಕ ವಾಟ್ ಅ ಕ್ಯಾಚ್ ಎಂದು ತನ್ನನ್ನು ತಾನೇ ಹೇಳಿಕೊಳ್ಳುವ ರೋಡ್ರಿಗಸ್ ಕ್ಯಾಮರಾದ ಹತ್ತಿರಕ್ಕೆ ಬಂದು ಕ್ವಾರಂಟೈನ್ ಡೇ 1 ಎಂದು ಹೇಳಿ ವೀಡಿಯೋ ಕೊನೆಗೊಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಜೊತೆಗೆ ಇತರೆ ಭಾರತೀಯ ಮಹಿಳಾ ಆಟಗಾರ್ತಿಯರು ಜೆಮಿಮಾ ಕಾಲೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications