Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾಂಗ್ರೆಸ್ ಪಕ್ಷ ಸೇರಿದ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್

Cricketer Mohammed Shamis Wife Hasin Jahan Joins Congress

ಮುಂಬೈ, ಅಕ್ಟೋಬರ್ 17: ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರು ಮಂಗಳವಾರದಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

ಶಮಿ ವಿರುದ್ಧ ವಿವಾಹೇತರ ಸಂಬಂಧ, ಕಿರುಕುಳ ನೀಡಿದ ಆರೋಪ ಮಾಡಿ ಹಸೀನ್ ಜಹಾನ್ ಸುದ್ದಿಯಾಗಿದ್ದರು.

ಮುಂಬೈನಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸಂಜಯ್‌ ನಿರುಪಮ್‌ ಅವರ ಸಮ್ಮುಖದಲ್ಲಿ ಹಸೀನ್‌ ಜಹಾನ್‌ ಅವರು ಕಾಂಗ್ರೆಸ್ಸಿಗೆ ಸೇರಿದ್ದಾರೆ.

ಮೂಲತಃ ರೂಪದರ್ಶಿಯಾಗಿರುವ ಜಹಾನ್‌ ಅವರು ತಮ್ಮ ಕುಟುಂಬ ವಿಚಾರವನ್ನು ಹಾದಿ ರಂಪ ಬೀದಿ ರಂಪ ಮಾಡಿದ್ದಲ್ಲದೆ,ಶಮಿ ಅವರನ್ನು ಮ್ಯಾಚ್ ಫಿಕ್ಸರ್ ಎಂದಿದ್ದರು. ಪಾಕಿಸ್ತಾನದ ಮಹಿಳೆಯ ಜತೆ ಶಮಿಗೆ ಸಂಪರ್ಕವಿದ್ದು, ಶಮಿ ದೇಶದ್ರೋಹಿ ಎಂದಿದ್ದರು. ಆದರೆ, ಯಾವುದೇ ಆರೋಪ ಸಾಬೀತಾಗಿರಲಿಲ್ಲ.

Cricketer Mohammed Shamis Wife Hasin Jahan Joins Congress

ಕೋಲ್ಕತಾ ಅಲಿಪೊರ್‌ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯದ ಪ್ರಕರಣ ದಾಖಲಿಸಿ, ಶಮಿ ಅವರಿಂದ ಕುಟುಂಬ ನಿರ್ವಹಣಾ ವೆಚ್ಚವನ್ನು ಕೋರಿದ್ದರು. ಶಮಿ ಪರ ಎಂಎಸ್ ಧೋನಿ, ಕಪಿಲ್ ದೇವ್ ಸೇರಿದಂತೆ ಹಲವಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದರು.

Story first published: Wednesday, October 17, 2018, 13:44 [IST]
Other articles published on Oct 17, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+