ಪುನೀತ್ ವರ್ಕ್ ಔಟ್ ನೋಡಿ ಧೋನಿ ಹೇಳಿದ್ದೇನು ಗೊತ್ತಾ?

ಮಹೇಂದ್ರ ಸಿಂಗ್ ಧೋನಿ ಕನ್ನಡದ ನಟ ಪುನೀತ್ ರಾಜ್ ಕುಮಾರ್ ಅವರ ವರ್ಕೌಟ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ವಿಚಾರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪುನೀತ್ ಅಭಿನಯದ ಯುವರತ್ನ ಚಿತ್ರ ಬಿಡುಗಡೆ ಕುರಿತಾಗಿ ಕನ್ನಡದ ಸುದ್ದಿ ವಾಹಿನಿಯೊಂದು ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಸಂದರ್ಶನವನ್ನು ಮಾಡಿದೆ. ಈ ಸಂದರ್ಶನದಲ್ಲಿ ಯುವರತ್ನ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅವರ ವರ್ಕೌಟ್ ವಿಚಾರ ಚರ್ಚೆಯಾಗಿದೆ.
ಈ ಸಂದರ್ಭದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಹೇಂದ್ರ ಸಿಂಗ್ ಧೋನಿ ಅವರು ಪುನೀತ್ ರಾಜ್ ಕುಮಾರ್ ಅವರ ವರ್ಕೌಟ್ ವಿಡಿಯೋ ನೋಡಿ ಪ್ರಶಂಸೆ ವ್ಯಕ್ತಪಡಿಸಿದ ವಿಚಾರವನ್ನು ಹಂಚಿಕೊಂಡಿದ್ದಾರೆ. ಪುನೀತ್ ಅವರ ವರ್ಕೌಟ್ ವಿಡಿಯೋ ನೋಡಿ ಅಪ್ಪು ಅವರ ಜೊತೆಗೆ ಸ್ವತಃ ಧೋನಿ ಅವರೇ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬ ವಿಷಯವನ್ನು ಸಂತೋಷ್ ಅವರು ಹಂಚಿಕೊಂಡರು.
ಸಂತೋಷ್ ಆನಂದ್ ರಾಮ್ ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಹೇಂದ್ರ ಸಿಂಗ್ ಧೋನಿ ಅವರು ಕನ್ನಡ ನಟನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ವಿಷಯ ತಿಳಿದ ಕನ್ನಡ ಕ್ರೀಡಾಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications