ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಯುವ ಸ್ಪಿನ್ನರ್ ರಾಹುಲ್ ಚಹಾರ್

ಟೀಂ ಇಂಡಿಯಾದ ಸ್ಪಿನ್ನರ್ ರಾಹುಲ್ ಚಹಾರ್, ಐಪಿಎಲ್ ಸ್ಟಾರ್ ಕ್ರಿಕೆಟರ್ ರಾಹುಲ್ ಚಹಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆದ ರಾಹುಲ್ ಚಹಾರ್ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನ ಹಂಚಿಕೊಂಡಿದ್ದಾರೆ.
ರಾಹುಲ್ ಚಹಾರ್ ಮತ್ತು ಇಶಾನಿ ಅವರ ವಿವಾಹ ಸಮಾರಂಭಗಳು ಮೆಹೆಂದಿ ಸಮಾರಂಭದೊಂದಿಗೆ ಕಿಕ್‌ಸ್ಟಾರ್ಟ್ ಆಗಿದೆ. ಮಾರ್ಚ್ 9, 2022 ರಂದು, ರಾಹುಲ್ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಅವರ ಪತ್ನಿ ಇಶಾನಿ ಅವರೊಂದಿಗಿನ ಮೆಹೆಂದಿ ಸಮಾರಂಭದ ಫೋಟೋಗಳನ್ನ ಹಂಚಿಕೊಂಡಿದ್ದರು. ಫೋಟೋಗಳಲ್ಲಿ, ರಾಹುಲ್ ಕಿತ್ತಳೆ ಬಣ್ಣದ ಶರ್ಟ್ ಮತ್ತು ಮ್ಯಾಚಿಂಗ್ ಕೋಟ್ ಮತ್ತು ಬೀಜ್-ಬಣ್ಣದ ಚೂಡಿದಾರ್ ಅನ್ನು ಧರಿಸಿರುವುದು ಕಂಡುಬಂದಿದೆ.
ಮತ್ತೊಂದೆಡೆ, ಇಶಾನಿ ಬಿಳಿ ಹೂವಿನ ಮುದ್ರಿತ ಲೆಹೆಂಗಾದಲ್ಲಿ ಆಕರ್ಷಕವಾಗಿ ಕಾಣುತ್ತಿದ್ದಾರೆ. ರಾಹುಲ್ ಚಹಾರ್ ಸಹೋದರ ದೀಪಕ್ ಚಹಾರ್ ಮತ್ತು ಸಹೋದರಿ ಮಾಲ್ತಿ ಚಹಾರ್ ಹರಿಶಿನ ಶಾಸ್ತ್ರದಲ್ಲಿ ಭಾಗಿಯಾಗಿದ್ದರ ಕುರಿತು ಫೋಟೊಗಳು ಶೇರ್ ಆಗಿವೆ.
ಬಹಳ ಸಮಯದಿಂದ ಇಷ್ಟ ಪಟ್ಟಿದ್ದ ರಾಹುಲ್ ಮತ್ತು ಇಶಾನಿ ಅಂತಿಮವಾಗಿ ಪರಸ್ಪರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಶಾಶ್ವತವಾಗಿ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅವರ ಮದುವೆ ಸಮಾರಂಭದ ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications