Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RIP ಎಂದು ಟ್ವೀಟ್ ಮಾಡಿದ್ದ ಶೇನ್ ವಾರ್ನ್‌ ಇನ್ನಿಲ್ಲ: ವಾರ್ನ್ ಕೊನೆಯ ಟ್ವೀಟ್ ಇಲ್ಲಿದೆ

Shane warne

ಆಸ್ಟ್ರೇಲಿಯಾ ಕ್ರಿಕೆಟ್ ಲೋಕದ ಲೆಜೆಂಡ್ ಸ್ಪಿನ್ನರ್ ಶೇನ್ ವಾರ್ನ್ ಹಠಾತ್ತನೇ ಸಾವನ್ನಪ್ಪುವ ಮೂಲಕ ಇಡೀ ಕ್ರಿಕೆಟ್‌ ಲೋಕವೇ ಶಾಕ್‌ಗೆ ಒಳಗಾಗಿದೆ. ಥೈಲ್ಯಾಂಡ್‌ನಲ್ಲಿ ಇಹಲೋಕ ತ್ಯಜಿಸಿರುವ ವಾರ್ನ್‌ ಪ್ರಾಥಮಿಕ ಮಾಹಿತಿ ಪ್ರಕಾರ ಹಾರ್ಟ್‌ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ಲೆಜೆಂಡ್ ಶೇನ್ ವಾರ್ನ್ ಬೆಳಿಗ್ಗೆಯಷ್ಟೇ ಆಸ್ಟ್ರೇಲಿಯಾ ಲೆಜೆಂಡ್ ವಿಕೆಟ್ ಕೀಪರ್ ರಾಡ್ ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಭಾರತೀಯ ಕಾಲಮಾನ ಬೆಳಿಗ್ಗೆ 7.23ಕ್ಕೆ ಟ್ವೀಟ್ ಮಾಡಿದ್ದ ಶೇನ್ ವಾರ್ನ್ ತನ್ನ ನೋವನ್ನ ವ್ಯಕ್ತಪಡಿಸಿ RIP ಎಂದು ಟ್ವೀಟ್ ಮಾಡಿದ್ದರು.

ಆದ್ರೆ ವಿಧಿಯಾಟ ಇದೇ ನೋಡಿ ಮತ್ತೋರ್ವ ಹಿರಿಯ ಕ್ರಿಕೆಟಿಗನಿಗೆ RIP ಎಂದಿದ್ದ ಶೇನ್‌ವಾರ್ನ್‌ ಕೆಲವೇ ಗಂಟೆಗಳು ಮುಗಿಯುವಷ್ಟರಲ್ಲಿ ಇಡೀ ಕ್ರಿಕೆಟ್‌ ಲೋಕ ಸಂತಾಪ ಸೂಚಿಸಿ RIP ಎಂದು ಹೇಳತೊಡಗಿದೆ.

''ರಾಡ್ ಮಾರ್ಷ್ ನಿಧನರಾದ ಸುದ್ದಿ ಕೇಳಿ ಬೇಸರವಾಯಿತು. ಅವರು ನಮ್ಮ ಶ್ರೇಷ್ಠ ಆಟದ ದಂತಕಥೆಯಾಗಿದ್ದರು ಮತ್ತು ಅನೇಕ ಹುಡುಗರು ಮತ್ತು ಹುಡುಗಿಯರಿಗೆ ಸ್ಫೂರ್ತಿಯಾಗಿದ್ದರು. ರಾಡ್ ಕ್ರಿಕೆಟ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು ಮತ್ತು ವಿಶೇಷವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರಿಗೆ ತುಂಬಾ ಸ್ಪೂರ್ತಿ ನೀಡಿದರು. ರೋಸ್ ಮತ್ತು ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ, ನನ್ನ ಕಡೆಯಿಂದ ಸಾಕಷ್ಟು ಪ್ರೀತಿಯನ್ನು ಕಳುಹಿಸಲಾಗುತ್ತಿದೆ. RIP ಮೇಟ್'' ಎಂದು ಶೇನ್ ವಾರ್ನ್ ಟ್ವೀಟ್ ಮಾಡಿದ್ದರು.

ಆದ್ರೆ ದುರಂತ ಅಂದ್ರೆ ಇದೇ ನೋಡಿ ಈ ಟ್ವೀಟ್ ಮಾಡಿ 12 ಗಂಟೆಯೊಳಗೆ ಶೇನ್ ವಾರ್ನ್ ಇನ್ನಿಲ್ಲ ಎಂದು ಕೇಳುವ ಸುದ್ದಿ ಇಡೀ ಕ್ರಿಕೆಟ್‌ ಲೋಕವನ್ನ ಬೆಚ್ಚಿಬೀಳಿಸಿದೆ. ಮನುಷ್ಯನ ಜೀವನ ನೀರಿನ ಮೇಲಿನ ಗುಳ್ಳೆಯಂತೆ ಎನ್ನುವ ಹಿರಿಯರ ನುಡಿಗಳು ನಿಜವೆನಿಸುತ್ತವೆ. ಅದ್ರಲ್ಲೂ ಆಸ್ಟ್ರೇಲಿಯಾ ಕ್ರಿಕೆಟ್‌ 24 ಗಂಟೆಗಳ ಅವಧಿಯಲ್ಲಿ ಇಬ್ಬರು ಕ್ರಿಕೆಟ್ ಲೆಜೆಂಡ್‌ಗಳನ್ನ ಕಳೆದುಕೊಂಡು ಭಾರೀ ನಷ್ಟ ಅನುಭವಿಸಿದೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ,ಮ್ಯಾಜಿಕ್‌ ಸ್ಪಿನ್ನರ್ ಶೇನ್ ವಾರ್ನ್ ನಿಧನ | Oneindia Kannada

Story first published: Saturday, March 5, 2022, 10:27 [IST]
Other articles published on Mar 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+