Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಗಾಸಿಪ್ : ಕೊನೆಗೂ ಮೌನ ಮುರಿದ ಶುಭಮನ್ ಗಿಲ್ ಹೇಳಿದ್ದೇನು?

Cricketer Shubmam Gill Finally Opens Up On Dating Rumours With Actress Sara Ali Khan

ಭಾರತೀಯ ಕ್ರಿಕೆಟ್ ಲೋಕಕ್ಕೂ ಬಾಲಿವುಡ್ ಚಿತ್ರರಂಗಕ್ಕೂ ಮೊದಲಿನಂದಲೂ ಅವಿನಾಭಾವ ಸಂಬಂಧವಿದೆ. ಅನೇಕ ಕ್ರಿಕೆಟಿಗರು ಬಾಲಿವುಡ್ ನಟ-ನಟಿಯರ ಜೊತೆ ಸ್ನೇಹ, ಪ್ರೀತಿಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಅನುಷ್ಕಾರನ್ನು ಪ್ರೀತಿಸಿ ಮದುವೆಯಾಗಿದ್ದು, ಕ್ರಿಕೆಟ್-ಸಿನಿಮಾ ಲೋಕದ ನಂಟಿಗೆ ಸಾಕ್ಷಿ.

ಕ್ರಿಕೆಟಿಗರ ಜೊತೆ ನಟಿಯರ ಹೆಸರು ಥಳುಕು ಹಾಕಿಕೊಳ್ಳುವುದು ಹೊಸದೇನಲ್ಲ. ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ, ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್ ಸೇರಿದಂತೆ ಹಲವರ ಬಗ್ಗೆ ಈ ರೀತಿಯ ಗಾಸಿಪ್‌ಗಳು ಓಡಾಡಿದ್ದು ಉಂಟು.

ಈಗ ಭಾರತದ ಯುವ ಕ್ರಿಕೆಟಿಗ ಶುಭಮನ್ ಗಿಲ್ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಕೆಲವು ತಿಂಗಳಿನಿಂದ ಕ್ರಿಕೆಟ್ ಮತ್ತು ಬಾಲಿವುಡ್ ಅಂಗಳದಲ್ಲಿ ಸುಳಿದಾಡುತ್ತಿದೆ. ಈ ಬಗ್ಗೆ ಇದುವರೆಗೂ ಇಬ್ಬರೂ ಎಲ್ಲೂ ಕೂಡ ಬಾಯಿ ಬಿಟ್ಟಿರಲಿಲ್ಲ. ಆದರೆ, ಕ್ರಿಕೆಟಿಗ ಶುಭಮನ್ ಗಿಲ್ ಕೊನೆಗೂ ತಮ್ಮ ಡೇಟಿಂಗ್ ವದಂತಿ ಬಗ್ಗೆ ಮಾತನಾಡಿದ್ದಾರೆ.

ಪ್ರೀತಿ ಮತ್ತು ನೀತಿ ಸಿಮೋಸ್ ಎನ್ನುವವರು ನಡೆಸಿಕೊಡುವ ದಿಲ್ ದಿಯಾ ಗಲ್ಲಾನ್‌ ಎನ್ನುವ ಪಂಜಾಬಿ ಚಾಟ್‌ ಶೋನಲ್ಲಿ ಭಾಗವಹಿಸಿದ್ದ ಗಿಲ್‌ ಉತ್ತರ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಬಾಲಿವುಡ್‌ನಲ್ಲಿ ಅತ್ಯಂತ ಹೆಚ್ಚು ಫಿಟ್‌ ಆಗಿರುವ ನಟಿ ಯಾರು ಎಂದು ಕೇಳಿದ ಪ್ರಶ್ನೆಗೆ ಸಾರಾ ಅಲಿ ಖಾನ್ ಎಂದು ಉತ್ತರ ನೀಡಿದ್ದಾರೆ.

 ಶುಭಮನ್ ಗಿಲ್ ಕೊಟ್ಟ ಉತ್ತರವೇನು?

ಶುಭಮನ್ ಗಿಲ್ ಕೊಟ್ಟ ಉತ್ತರವೇನು?

ನಂತರ ಕಾರ್ಯಕ್ರಮ ನಿರೂಪಕ ಸೋನಮ್ ಬಾಜ್ವಾ, ನೀವು ಸಾರಾ ಅಲಿ ಖಾನ್ ಜೊತೆ ಡೇಟ್ ಮಾಡುತ್ತಿದ್ದೀರಾ ಎಂದು ನೇರವಾಗಿಯೇ ಪ್ರಶ್ನೆ ಕೇಳಿದರು. ಇದಕ್ಕೆ ಶುಭ್‌ಮನ್ ಗಿಲ್ "ಬಹುಶಃ" ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರ ನೀಡಿದರು.

ಇಷ್ಟಕ್ಕೆ ಸುಮ್ಮನಾಗದ ನಿರೂಪಕ, ಎಲ್ಲಾ ಸತ್ಯವನ್ನೇ ಹೇಳಿ (ಸಾರಾ ಕಾ ಸಾರಾ ಸಚ್ ಬೋಲೋ) ಎಂದು ಕೇಳಿದರು. ಹೌದು ನಾನು ಸತ್ಯವನ್ನೇ ಹೇಳಿದ್ದೇನೆ (ಸಾರಾ ಕಾ ಸಾರಾ ಸಚ್‌ ಬೋಲ್‌ ದಿಯಾ) ಎಂದು ಉತ್ತರ ನೀಡಿದ್ದಾರೆ. ಶುಭಮನ್‌ ಗಿಲ್ ಮಾತುಗಳನ್ನು ಕೇಳಿದ ನಂತರ ಅಭಿಮಾನಿಗಳು ಆತ ಸಾರಾ ಅಲಿ ಖಾನ್‌ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಪಾಲಿಗೆ ಈತನೇ ಭವಿಷ್ಯದ ಪೊಲಾರ್ಡ್ ಎಂದ ಹನುಮ ವಿಹಾರಿ

ಗಿಲ್-ಸಾರಾ ಡೇಟಿಂಗ್ ಗಾಸಿಪ್‌ ಹುಟ್ಟಿದ್ದೇಗೆ?

ಗಿಲ್-ಸಾರಾ ಡೇಟಿಂಗ್ ಗಾಸಿಪ್‌ ಹುಟ್ಟಿದ್ದೇಗೆ?

ಆಗಸ್ಟ್ ತಿಂಗಳಿನಲ್ಲಿ ಸಾರಾ ಅಲಿ ಖಾನ್ ಮತ್ತು ಶುಭಮನ್ ಗಿಲ್‌ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಊಟ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಈ ಡೇಟಿಂಗ್ ವದಂತಿ ಹುಟ್ಟಿಕೊಂಡಿತು. ಮುಂಬೈನ ಬಾಸ್ಟಿಯನ್‌ನಲ್ಲಿ ಮಹಿಳೆಯೊಬ್ಬರು ಇವರಿಬ್ಬರನ್ನು ಗುರುತಿಸಿ ವಿಡಿಯೋ ಮಾಡಿದ್ದರು. ಅದಾದ ನಂತರ ಅಕ್ಟೋಬರ್ ತಿಂಗಳಿನಲ್ಲಿ, ಇಬ್ಬರು ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಇದಕ್ಕೂ ಮುನ್ನ ಸಾರಾ ಅಲಿ ಖಾನ್ ತಾನು ನಟಿಸಿದ್ದ ಲವ್ ಆಜ್‌ ಕಲ್ -2 ಚಿತ್ರದ ನಾಯಕ ನಟ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವದಂತಿಗಳಿದ್ದವು. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಅದನ್ನು ದೃಢಪಡಿಸಿದ್ದರು.

ಸಚಿನ್ ಪುತ್ರಿಯ ಜೊತೆ ಬ್ರೇಕಪ್?

ಸಚಿನ್ ಪುತ್ರಿಯ ಜೊತೆ ಬ್ರೇಕಪ್?

ಶುಭಮನ್ ಗಿಲ್ ಈ ಮೊದಲು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಪ್ರೇಮದಲ್ಲಿದ್ದಾರೆ ಎನ್ನುವ ವದಂತಿಗಳಿದ್ದವು. ಇಬ್ಬರೂ ಈ ಸುದ್ದಿಯನ್ನು ಒಪ್ಪಿಕೊಂಡಿರಲಿಲ್ಲವಾದರೂ ನಿರಾಕರಿಸಿಯೂ ಇರಲಿಲ್ಲ. ಸಚಿನ್ ಕೂಡ ಮಗಳ ಪ್ರೇಮಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಇಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.

ಆದರೆ ಕೆಲವೇ ದಿನಗಳಲ್ಲಿ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. ಅದಕ್ಕೆ ಸಾಕ್ಷಿ ಎಂಬಂತೇ ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಒಬ್ಬರನಬ್ಬೊರು ಅನ್‌ಫಾಲೋ ಮಾಡಿದ್ದರು.

Story first published: Wednesday, November 16, 2022, 15:18 [IST]
Other articles published on Nov 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+