For Quick Alerts
ALLOW NOTIFICATIONS  
For Daily Alerts
 

ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಾಹಲ್

Cricketer Yuzvendra Chahal marries choreographer Dhanashree Verma in Gurugram

ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಾಹಲ್ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಪ್ರೇಯಸಿ ಧನಶ್ರೀ ವರ್ಮಾ ಜೊತೆಗೆ ಗುರುಗ್ರಾಮ್‌ನಲ್ಲಿ ಡಿಸೆಂಬರ್ 22ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಗ್ರಾಮ್‌ನ ಕರ್ಮ ಲೇಕ್ ರೆಸಾರ್ಟ್‌ನಲ್ಲಿ ಆಪ್ತ ವಲಯದ ಸಮ್ಮುಖದಲ್ಲಿ ಈ ಮದುವೆ ಕಾರ್ಯಕ್ರಮ ನಡೆದಿದೆ.

ಮದುವೆ ಕಾರ್ಯಕ್ರಮದ ಫೋಟೋಗಳನ್ನು ಯುಜುವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರೂ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಈ ಫೋಟೋಗಳೂ ವೈರಲ್ ಆಗುತ್ತಿದೆ. ನವ ದಂಪತಿಗಳಿಗೆ ಅಭಿಮಾನಿಗಳು ಶುಭಾಶಯಗಳನ್ನು ಸುರಿಮಳೆ ಹರಿಸುತ್ತಿದ್ದಾರೆ. ಕಡು ಕೆಂಪು ಬಣ್ಣದ ಲೆಹಂಗಾದಲ್ಲಿ ಧನಶ್ರೀ ಕಂಗೊಳಿಸುತ್ತಿದ್ದರೆ ಯುಜುವೇಂದ್ರ ಚಾಹಲ್ ಶೇರ್ವಾನಿ ಹಾಗೂ ಟರ್ಬನ್ ತೊಟ್ಟು ಮದುಮಗನಾಗಿ ಮಿಂಚುತ್ತಿದ್ದಾರೆ.

ಧನಶ್ರೀ ವರ್ಮಾ ಡಾನ್ಸ್ ಕೊರಿಯೋಗ್ರಾಫರ್ ಆಗಿ ಖ್ಯಾತರಾಗಿದ್ದು ಲಾಕ್‌ಡೌನ್ ಸಂದರ್ಭದಲ್ಲಿ ಈ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ ಈಗ ಮದುವೆಯ ಹಂತಕ್ಕೆ ತಲುಪಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಟಿಕ್‌ಟಾಕ್‌ನಲ್ಲಿ ನೃತ್ಯಗಳನ್ನು ಮಾಡುತ್ತಾ ಚಾಹಲ್ ಖ್ಯಾತರಾಗಿದ್ದರು. ಈ ಸಂದರ್ಭದಲ್ಲಿ ನೃತ್ಯಾಭ್ಯಾಸಕ್ಕಾಗಿ ಧನಶ್ರೀ ಅವರನ್ನು ಚಾಹಲ್ ಸಂಪರ್ಕಿಸಿದ್ದು ಹೀಗೆ ಗುರು ಶಿಷ್ಯರಾಗಿ ಆರಂಭವಾದ ಈ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು ಎಂದು ಧನಶ್ರೀ ವರ್ಮಾ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಯುಜವೇಂದ್ರ ಚಾಹಲ್ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯ ಭಾಗವಾಗಿದ್ದರು. ಸೀಮಿತ ಓವರ್‌ಗಳ ಸರಣಿ ಅಂತ್ಯವಾದ ಬಳಿಕ ಚಾಹಲ್ ಭಾರತಕ್ಕೆ ಮರಳಿದ್ದು ಮದುವೆಯ ಸಿದ್ಧತೆಯನ್ನು ನಡೆಸಿದ್ದರು. ಮಂಗಳವಾರದಂದು ಚಾಹಲ್ ಹಾಗೂ ಧನಶ್ರೀ ಮದುವೆಯ ಬಂಧನಕ್ಕೆ ಒಳಗಾಗಿದ್ದಾರೆ.

ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಯುಜುವೇಂದ್ರ ಚಾಹಲ್ ಹಾಗೂ ಧನಶ್ರಿ ರೋಕಾ ಕಾರ್ಯಕ್ರಮದ ಮೂಲಕ ತಮ್ಮ ಮದುವೆಯ ನಿರ್ಧಾರವನ್ನು ಬಹಿರಂಗ ಪಡಿಸಿದ್ದರು. ಐಪಿಎಲ್ ಸಂದರ್ಭದಲ್ಲಿ ಧನಶ್ರೀ ಯುಎಇಗೆ ತೆರಳಿ ಚಾಹಲ್‌ಗೆ ಸಾಥ್ ನೀಡಿದ್ದರು.

Story first published: Wednesday, December 23, 2020, 10:33 [IST]
Other articles published on Dec 23, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+