For Quick Alerts
ALLOW NOTIFICATIONS  
For Daily Alerts
 

ವಿರುಷ್ಕಾ ದಂಪತಿಗೆ ಪ್ರೀತಿಯ ಹಾರೈಕೆಗಳ ಮಹಾಪೂರ!

By Mahesh

ಬೆಂಗಳೂರು, ಡಿಸೆಂಬರ್ 12: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬೆಂಗಳೂರು ಮೂಲದ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಮದುವೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕ್ರಿಕೆಟರ್ಸ್, ಸಿನಿಮಾ ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪ್ರೀತಿಯ ಶುಭಹಾರೈಕೆ ಸಲ್ಲಿಸಿದ್ದಾರೆ.

2013ರಿಂದ ಗೆಳೆತನದಲ್ಲಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಅವರು ಅಧಿಕೃತವಾಗಿ ದಂಪತಿಗಳಾಗಿದ್ದಾರೆ. ಇಟಲಿಯ ಟಸ್ಕಾನ್ ನಗರದ ಬೋರ್ಗೋ ಫಿನೊಚೆಯಟಾ ರೆಸಾರ್ಟಿನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ನೆರವೇರಿದೆ.

ಮದುವೆ ಬಗ್ಗೆ ಕೊಹ್ಲಿ ಅವರು ತಮ್ಮ ಅಧಿಕೃತ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿದ್ದು ಹೀಗೆ:

'ಅನವರತ ಪರಸ್ಪರ ಪ್ರೀತಿಗೆ ಬದ್ಧರಾಗಿರುತ್ತೇವೆ ಎಂದು ನಾವಿಂದು ಪ್ರಮಾಣ ಮಾಡಿದ್ದೇವೆ. ಈ ಶುಭ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಅಭಿಮಾನಿಗಳ ಪ್ರೀತಿ, ಕುಟುಂಬದವರ ಬೆಂಬಲ, ಆಪ್ತರ ಕಾಳಜಿಯಿಂದ ಈ ದಿನ ಇನ್ನಷ್ಟು ಸುಂದರ, ವಿಶೇಷವಾಗಿದೆ. ನಮ್ಮ ಪ್ರಯಾಣದಲ್ಲಿ ಮುಖ್ಯವಾಗಿ ನೀವು ಭಾಗವಾಗಿರುವುದಕ್ಕೆ ನಿಮಗೆಲ್ಲ ಧನ್ಯವಾದಗಳು' ಎಂಬರ್ಥದಲ್ಲಿ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ವಿರುಷ್ಕಾ ದಂಪತಿಗೆ ಶುಭ ಹಾರೈಸಿರುವ ಟ್ವೀಟ್ ಗಳು ಇಲ್ಲಿವೆ...

ಹರಿದ್ವಾರದಿಂದ ಇಟಲಿಗೆ ಪಂಡಿತ್ ಅನಂತ್ ಬಾಬಾ

ಹರಿದ್ವಾರದಿಂದ ಇಟಲಿಗೆ ಪಂಡಿತ್ ಅನಂತ್ ಬಾಬಾ

ಹರಿದ್ವಾರದಿಂದ ಇಟಲಿಗೆ ಪಂಡಿತ್ ಅನಂತ್ ಬಾಬಾ
2016ರಲ್ಲಿ ಹರಿದ್ವಾರದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಕುಟುಂಬಸ್ಥರು ವಿಶೇಷ ಪೂಜೆ ನೆರವೇರಿಸಿದ್ದರು. ಹರಿದ್ವಾರದ ಪಂಡಿತ್ ಮಹಾರಾಜ್ ಅನಂತ್ ಬಾಬಾ ಅವರು ಅನುಷ್ಕಾ ಮನೆ ಪುರೋಹಿತರಾಗಿದ್ದು, ಹರಿದ್ವಾರದ ಅನಂತ್ ಧಾಮ್ ಆತ್ಮಬೋಧ ಆಶ್ರಮದಿಂದ ಇಟಲಿಗೆ ತೆರಳಿ ಮದುವೆ ನೆರವೇರಿಸಿದ್ದಾರೆ.

ಮದುವೆ ನೋಂದಣಿ ಯಾವಾಗ?

ಮದುವೆ ನೋಂದಣಿ ಯಾವಾಗ?

ಕುಟುಂಬ ವರ್ಗ, ಆಪ್ತ ಗೆಳೆಯ, ಗೆಳತಿಯರ ಸಮ್ಮುಖದಲ್ಲಿ ಮದುವೆಯಾದ ವಿರುಷ್ಕಾ ಅವರು ಜನವರಿ12, 2018ರಂದು ಮುಂಬೈನ ಬಾಂದ್ರಾದಲ್ಲಿ ಮದುವೆ ನೋಂದಣಿ ಮಾಡಿಸಲಿದ್ದಾರೆ. ಇದಕ್ಕೂ ಮುನ್ನ ಡಿಸೆಂಬರ್ 26ರಂದು ಅದ್ದೂರಿ ಆರತಕ್ಷತೆ ಕೂಡಾ ನೆರವೇರಲಿದೆ.

ಸ್ಪಿನ್ ದಿಗ್ಗಜ ಬಿಷನ್ ಸಿಂಗ್ ಬೇಡಿ

ಸ್ಪಿನ್ ದಿಗ್ಗಜ ಬಿಷನ್ ಸಿಂಗ್ ಬೇಡಿ ಅವರು ಶುಭ ಹಾರೈಸಿ, ಹೊಸ ಇನ್ನಿಂಗ್ಸ್, ಹೊಸ ಗಾರ್ಡ್ ತೆಗೆದುಕೊಂಡು ಸ್ಟ್ರೈಟ್ ಆಗಿ ಆಡುವುದನ್ನು ಕಲಿಯಿರಿ ಎಂದು ಕಿವಿಮಾತು ಹೇಳಿದ್ದಾರೆ.

ವಿವಿಎಸ್ ಲಕ್ಷ್ಮಣ್

#VirushkaWEDDING ಟ್ಯಾಗ್ ನಲ್ಲಿ ವಿರುಷ್ಕಾ ದಂಪತಿಗೆ ಪ್ರೀತಿಯ ಹಾರೈಕೆಗಳ ಮಹಾಪೂರ ಹರಿದು ಬರುತ್ತಿದೆ. ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದು ಹೀಗೆ...

ಕ್ರಿಕೆಟರ್ ಸುರೇಶ್ ರೈನಾ

ಕ್ರಿಕೆಟರ್ ಸುರೇಶ್ ರೈನಾ ಅವರು ಟ್ವೀಟ್ ಮಾಡಿ, ಪ್ರೀತಿಸಿದವರು ಒಂದಾಗುವುದಕ್ಕಿಂತ ಹೆಚ್ಚಿನ ಕೂಡಿಕೆ ಮತ್ತೊಂದಿಲ್ಲ ಎಂದಿದ್ದಾರೆ.

ಹರ್ಷ್ ಗೋಯೆಂಕಾ

ಆರ್ ಪಿಜಿ ಎಂಟರ್ ಪ್ರೈಸಸ್ ನ ಚೇರ್ಮನ್ ಹರ್ಷ್ ಗೋಯೆಂಕಾ ಅವರು, ' ಮೊದಲ ಫೇರಾ ನಂತರ ಸಿಕ್ಸ್ ಬಾರಿಸಿದ ಕೊಹ್ಲಿ 'ಸಾಥ್ ಫೆರೆ' ಮುಕ್ತಾಯಗೊಳಿಸಿದರು' ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

ಕುಸ್ತಿ ಪಟು ಗೀತಾ ಫೋಗಟ್

ಒಲಿಂಪಿಯನ್, ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಕುಸ್ತಿ ಪಟು ಗೀತಾ ಫೋಗಟ್ ಶುಭ ಹಾರೈಸಿದ್ದಾರೆ.

ಶಾಹೀದ್ ಅಫ್ರಿದಿ

ಪಾಕಿಸ್ತಾನ ಜನಪ್ರಿಯ ಕ್ರಿಕೆಟರ್ ಶಾಹೀದ್ ಅಫ್ರಿದಿ ಅವರು ಕೊಹ್ಲಿಗೆ ಶುಭಹಾರೈಸಿದ್ದಾರೆ.

ಮಾಜಿ ವೇಗಿ ಶೋಯಬ್ ಅಖ್ತರ್

ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ಅವರು ಶುಭಹಾರೈಸಿದ್ದು ಹೀಗೆ.

ಕರಣ್ ಜೋಹರ್ ರಿಂದ ಶುಭ ಹಾರೈಕೆ

ಚಿತ್ರಕರ್ಮಿ ಕರಣ್ ಜೋಹರ್ ಅವರು ವಿರುಷ್ಕಾ ದಂಪತಿಗೆ ಶುಭಹಾರೈಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+