ಇಂಗ್ಲೆಂಡ್ vs ವಿಂಡೀಸ್: ವರ್ಣಬೇಧದ ವಿರುದ್ಧ ಮೈದಾನದಲ್ಲೇ ಮೊಣಕಾಲೂರಿ ಕ್ರಿಕೆಟಿಗರ ಆಕ್ರೋಶ

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ಮಧ್ಯೆ ಟೆಸ್ಟ್ ಸರಣಿಯ ಆರಂಭವಾಗುವ ಮೂಲಕ ಕೊರೊನಾ ವೈರಸ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ದೊರೆತಿದೆ. ಪ್ರೇಕ್ಷಕರಿಲ್ಲದೇ ನಡೆಯುತ್ತಿರುವ ಈ ಐತಿಹಾಸಿಕ ಪಂದ್ಯ ವಿಶೇಷ ಸಂದರ್ಭವೊಂದಕ್ಕೆ ಸಾಕ್ಷಿಯಾಯಿತು.
ಸೌಥಾಂಪ್ಟನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದ ಆರಂಭದಲ್ಲಿ ಎರಡೂ ತಂಡಗಳ ಆಟಗಾರರು ತಮ್ಮ ಬಲ ಮೊಣಕಾಲನ್ನು 30 ಸೆಕೆಂಡ್‌ಗಳ ಕಾಲ ನೆಲಕ್ಕೆ ಊರುವ ಮೂಲಕ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಭಯಾನಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ವರ್ಣಬೇಧ ನೀತಿಯ ವಿರುದ್ಧದ ಹೋರಾಟಕ್ಕೆ ಕ್ರಿಕೆಟ್ ಅಂಗಳವೂ ಸಾಕ್ಷಿಯಾಯಿತು.
ಮಳೆಯಿಂದಾಗಿ ತಡವಾಗಿ ಪಂದ್ಯ ಆರಂಭವಾದ ಬಳಿಕ ಅಂಗಳಕ್ಕಿಳಿದ ಫೀಲ್ಡಿಂಗ್ ಮಾಡುತ್ತಿರುವ ವೆಸ್ಟ್ ಇಂಡೀಸ್ ತಂಡದ ಎಲ್ಲಾ ಆಟಗಾರರ ಜೊತೆಗೆ ಇಂಗ್ಲಂಡ್ ತಂಡದ ಆರಂಭಿಕ ಆಟಗಾರು ಕೂಡ ತಮ್ಮ ಮೊಣಕಾಲನ್ನು ನೆಲಕ್ಕೆ ಬಾಗಿಸಿ ಈ ಹೋರಾಟಕ್ಕೆ ಬೆಂಬಲಿಸಿದರು. ಅಂಪೈರ್ ಬೌಂಡರಿ ಲೈನ್ ಆಚೆಗಿದ್ದ ಇತರ ಆಟಗಾರರು ಹಾಗೂ ಸಿಬ್ಬಂದಿಗಳು ಕೂಡ ಇದೇ ರೀತಿ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದ್ದಾರೆ.
ಅಮೆರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್-ಅಮೆರಿಕನ್ ವ್ಯಕ್ತಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆಯುವ ಸಂದರ್ಭದಲ್ಲಿ ಮೊಣಕಾಲಿನಲ್ಲಿ ಅದುಮಿ ಆತ ಉಸಿರುಗಟ್ಟಿ ಸಾಯಲು ಕಾರಣರಾಗಿದ್ದರು. ಇದು ವಿಶ್ವಾದ್ಯಂತ ವರ್ಣಬೇಧ ನೀತಿಯ ವಿರುದ್ಧ ಹೋರಾಟಕ್ಕೆ ಸಾಕ್ಷಿಯಾಯಿತು. ಅಮೆರಿಕಾದಲ್ಲಿ ದೊಡ್ಡ ಹಿಂಸಾಚಾರವೇ ನಡೆಯಿತು. ಬಳಿಕ ಬ್ಲ್ಯಾಕ್ ಲೈವ್ಸ್ ಬ್ಯಾಟರ್ ಆಂದೋಲನ ವಿಶ್ವಾದ್ಯಂತ ಆರಂಭವಾಯಿತು.
ಈ ಘಟನೆಗೆ ಕ್ರೀಡಾ ಲೋಕವೂ ಸ್ಪಂದಿಸಿತ್ತು. ಜಾರ್ಜ್ ಪ್ಲಾಯ್ಡ್ ಸಾವಿಗೆ ಫುಟ್ಬಾಲ್ ಸೇರಿದಂತೆ ಅನೇಕ ಕ್ರೀಡಾಪಟುಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ವರ್ಣಬೇಧ ನೀತಿಯ ವಿರುದ್ಧ ಮತ್ತೊಂದು ಆಂಧೋಲನಕ್ಕೆ ಇದು ವೇದಿಕೆಯಾಯಿತು. ಕ್ರಿಕೆಟ್‌ನಲ್ಲೂ ಗೇಯ್ಲ್ ಹಾಗೂ ಡ್ಯಾರೆನ್ ಸಮಿಯಂತಾ ಆಟಗಾರರು ವರ್ಣ ಬೇಧದ ಬಗ್ಗೆ ಧ್ವನಿಯೆತ್ತಿದ್ದರು. ಈಗ ಈ ಬ್ಯ್ಲಾಕ್ ಲೈವ್ಸ್ ಮ್ಯಾಟರ್ ಆಂದೋಲನಕ್ಕೆ ಕ್ರಿಕೆಟ್ ಅಂಗಳವೇ ಸಾಕ್ಷಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications