For Quick Alerts
ALLOW NOTIFICATIONS  
For Daily Alerts
 

501 ರನ್ ಗಳಿಸಿ ಟಿ20 ವಿಶ್ವ ದಾಖಲೆ ನಿರ್ಮಿಸಿದ ದಕ್ಷಿಣ ಆಫ್ರಿಕಾದ ದೇಶೀಯ ಪಂದ್ಯ

CSA T20 Challenge: Create A T20 World Record By Scoring 501 Runs In A Single Match

ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೈಟಾನ್ಸ್ ಮತ್ತು ನೈಟ್ಸ್ ನಡುವಿನ ದಕ್ಷಿಣ ಆಫ್ರಿಕಾ ದೇಶೀಯ ಟಿ20 ಪಂದ್ಯದಲ್ಲಿ ವಿಶ್ವದಾಖಲೆಯ 501 ರನ್ ಗಳಿಸಲಾಗಿದ್ದು, ಇದೇ ವೇಳೆ ಹಲವಾರು ಮೈಲಿಗಲ್ಲುಗಳನ್ನು ತಲುಪಿದೆ.

ಸೋಮವಾರ ನಡೆದ ಕ್ರಿಕೆಟ್ ಸೌತ್ ಆಫ್ರಿಕಾ (CSA) ಟಿ20 ಚಾಲೆಂಜ್ ಪಂದ್ಯದಲ್ಲಿ ಆರಂಭಿಕ ಆಟಗಾರ ಡೆವಾಲ್ಡ್ ಬ್ರೆವಿಸ್ 57 ಎಸೆತಗಳಲ್ಲಿ 13 ಬೌಂಡರಿ ಹಾಗೂ 13 ಸಿಕ್ಸರ್‌ಗಳ ನೆರವಿನಿಂದ 162 ರನ್ ಗಳಿಸುವುದರೊಂದಿಗೆ ಟೈಟಾನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 271 ರನ್ ಗಳಿಸಿತು. ನಂತರ ಬೃಹತ್ ಗುರಿ ಬೆನ್ನಟ್ಟಿದ ನೈಟ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 230 ರನ್ ಗಳಿಸಿ 41 ರನ್‌ಗಳಿಂದ ಸೋಲು ಕಂಡಿತು.

2016-17ರಲ್ಲಿ ಸೂಪರ್ ಸ್ಮ್ಯಾಶ್‌ನಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಮತ್ತು ಒಟಾಗೋದಿಂದ 497 ರನ್ ಗಳಿಸಿದ್ದು, ಈವರೆಗಿನ ಟಿ20 ಪಂದ್ಯದಲ್ಲಿ ಹಿಂದಿನ ಗರಿಷ್ಠ ಸ್ಕೋರ್ ಆಗಿತ್ತು. ಪೊಟ್ಚೆಫ್‌ಸ್ಟ್ರೂಮ್‌ನಲ್ಲಿ ಎರಡೂ ತಂಡಗಳು 36 ಸಿಕ್ಸರ್‌ಗಳನ್ನು ಬಾರಿಸಿದ್ದು, ಟಿ20 ಪಂದ್ಯದಲ್ಲಿ ಮೂರನೇ ಅತಿ ಹೆಚ್ಚು ಸಿಕ್ಸರ್‌ಗಳಾಗಿವೆ.

ಟೈಟಾನ್ಸ್ ತಂಡ ಗಳಿಸಿದ 271 ರನ್ ಪುರುಷರ ಟಿ20 ಪಂದ್ಯಗಳಲ್ಲಿ ಯಾವುದೇ ತಂಡದಿಂದ ನಾಲ್ಕನೇ ಗರಿಷ್ಠ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚಿನ ಮೊತ್ತವಾಗಿದೆ.

CSA T20 Challenge: Create A T20 World Record By Scoring 501 Runs In A Single Match

2013ರಲ್ಲಿ ಭಾರತದ ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಪರ ಕ್ರಿಸ್ ಗೇಲ್ ಔಟಾಗದೆ 175 ಮತ್ತು 2018ರಲ್ಲಿ ಜಿಂಬಾಬ್ವೆ ವಿರುದ್ಧ ಆರೋನ್ ಫಿಂಚ್ ಅವರ 172ರ ನಂತರ ಡೆವಾಲ್ಡ್ ಬ್ರೆವಿಸ್ ಅವರ 162 ರನ್ ಪುರುಷರ ಟಿ20 ಪಂದ್ಯದಲ್ಲಿ ಮೂರನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಅಲ್ಲದೆ ಇದು ಪುರುಷರ ಟಿ20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳ ಗರಿಷ್ಠ ಸ್ಕೋರ್ ಆಗಿದೆ.

ಡೆವಾಲ್ಡ್ ಬ್ರೆವಿಸ್‌ಗೆ 150 ರನ್‌ಗಳನ್ನು ತಲುಪಲು ಕೇವಲ 52 ಎಸೆತಗಳು ಬೇಕಾಗಿದವು. ಇದು ಟಿ20 ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟರ್‌ನ ವೇಗದ ಬ್ಯಾಟಿಂಗ್. ಕ್ರಿಸ್ ಗೇಲ್ ಅವರ 175 ರನ್‌ಗಳನ್ನು ಬಾರಿಸಲು 53 ಎಸೆತಗಳನ್ನು ತೆಗೆದುಕೊಂಡಿದ್ದು ಹಿಂದಿನ ವೇಗದ ಬ್ಯಾಟಿಂಗ್ ಆಗಿದೆ.

ಡೆವಾಲ್ಡ್ ಬ್ರೆವಿಸ್ ಅವರು 19 ವರ್ಷ ಮತ್ತು 185 ದಿನಗಳಲ್ಲಿ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಅತ್ಯಂತ ಕಿರಿಯ ಆಟಗಾರರಾದರು. ಪುರುಷರ ಟಿ20ಯಲ್ಲಿ ಶತಕ ಬಾರಿಸಿದ ವಿಶ್ವದ ಆರನೇ ಅತಿ ಕಿರಿಯ ಬ್ಯಾಟರ್ ಕೂಡ ಎನಿಸಿದರು.

ಡೆವಾಲ್ಡ್ ಬ್ರೆವಿಸ್ ಅವರ ಸ್ಟ್ರೈಕ್ ರೇಟ್ 284.21, ಇದು ಪುರುಷರ ಟಿ20 ಕ್ರಿಕೆಟ್‌ನಲ್ಲಿ ಶತಕದಲ್ಲಿ ಐದನೇ ಅತಿ ಹೆಚ್ಚು ಮತ್ತು ದಕ್ಷಿಣ ಆಫ್ರಿಕಾದಲ್ಲಿ ಗರಿಷ್ಠ ಸ್ಟ್ರೈಕ್ ರೇಟ್ ಟಿ20 ಶತಕವಾಗಿದೆ.

ಡೆವಾಲ್ಡ್ ಬ್ರೆವಿಸ್ ಅವರು 35 ಎಸೆತಗಳಲ್ಲಿ ತಮ್ಮ ಶತಕವನ್ನು ತಲುಪಿದರು, ವಿಶ್ವ ಟಿ20 ಕ್ರಿಕೆಟ್‌ನಲ್ಲಿ ಜಂಟಿ ಐದನೇ-ವೇಗದ ಶತಕ ಮತ್ತು ದಕ್ಷಿಣ ಆಫ್ರಿಕಾದ ಜಂಟಿ ಎರಡನೇ ವೇಗದ ಟಿ20 ಶತಕವೆನಿಸಿತು.

Story first published: Wednesday, November 2, 2022, 8:39 [IST]
Other articles published on Nov 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+