ಐಪಿಎಲ್ 2019: ಜಯದ ಲಯಕ್ಕೆ ಮರಳುವ ಲೆಕ್ಕಾಚಾರದಲ್ಲಿ ಸಿಎಸ್‌ಕೆ

ಆತಿಥೇಯ ಚೆನ್ನೈಗೆ ಸನ್‌ರೈಸರ್ಸ್ ಹೈದರಾಬಾದ್ ಸವಾಲು
ಚೆನ್ನೈ, ಏಪ್ರಿಲ್ 23: ಸತತ ಎರಡು ಪಂದ್ಯಗಳನ್ನು ಸೋತಿರುವ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್, ಇದೀಗ ತವರಿನ ಪ್ರೇಕ್ಷಕರ ಬಲದೊಂದಿಗೆ ಅಪಾಯಕಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಐಪಿಎಲ್ 2019ರ 41ನೇ ಲೀಗ್ ಪಂದ್ಯದಲ್ಲಿ ಬಗ್ಗುಬಡಿದು ಜಯದ ಹಾದಿಗೆ ಮರಳುವ ಪ್ರಯತ್ನ ನಡೆಸಲಿದೆ.
ಸೂಪರ್ ಕಿಂಗ್ಸ್ ತನ್ನ ಹಿಂದಿನ ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಜೇಯ 84 ರನ್‌ಗಳ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು 1 ರನ್‌ಗಳ ವೀರೋಚಿತ ಸೋಲನುಭವಿಸಿತ್ತು. ಆದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಸಿಎಸ್‌ಕೆ 10 ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿ ಪ್ಲೇಆಫ್ಸ್ ತಲುಪುವ ಹೊಸ್ತಿಲಲ್ಲಿದೆ.
ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ಅಮೋಘ ಲಯದಲ್ಲಿದ್ದು, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್ ಅವರ ಸ್ಫೋಟಕ ಬ್ಯಾಟಿಂಗ್ ಬಲದಿಂದ ಸತತ ಎರಡು ಪಂದ್ಯಗಳನ್ನು ಗೆದ್ದು ಪ್ಲೇಆಫ್ಸ್ ರೇಸ್‌ನಲ್ಲಿ ಉಳಿದಿದೆ. ಆಡಿದ 9 ಪಂದ್ಯಗಳಿಂದ 10 ಅಂಕಗಳನ್ನು ಗಳಿಸಿರುವ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಸಿಎಸ್‌ಕೆ ಸಂಭಾವ್ಯ 11
ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂ.ಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದುಲ್‌ಠಾಕೂರ್, ದೀಪಕ್ ಚಹರ್, ಇಮ್ರಾನ್ ತಾಹಿರ್.
ಎಸ್‌ಆರ್‌ಎಚ್ ಸಂಭಾವ್ಯ 11
ಡೇವಿಡ್ ವಾರ್ನರ್, ಜಾನಿ ಬೈರ್ ಸ್ಟೋವ್, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಯೂಸುಫ್ ಪಠಾಣ್, ದೀಪಕ್ ಹೂಡಾ, ರಶೀದ್ ಖಾನ್, ಭುವನೇಶ್ವರ್ ಕುಮಾರ್,ಶಹಬಾಜ್ ನದೀಮ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications