Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋವಿಡ್-19ನಿಂದ ಚೇತರಿಸಿ ಆಸ್ಟ್ರೇಲಿಯಾಕ್ಕೆ ಹೊರಟ ಮೈಕ್ ಹಸ್ಸಿ

CSK batting coach Mike Hussey returns to Australia after recovering from COVID-19

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಬ್ಯಾಟಿಂಗ್‌ ಕೋಚ್ ಆಗಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕ್ ಹಸ್ಸಿ ಕೋವಿಡ್-19ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಸೋಮವಾರ (ಮೇ 17) ಹಸ್ಸಿ ತನ್ನ ತವರಾದ ಆಸ್ಟ್ರೇಲಿಯಾಕ್ಕೆ ವಾಪಸ್ಸಾಗಿದ್ದಾರೆ.

ಸೋಂಕಿಗೀಡಾಗಿದ್ದ ಮೈಕ್ ಹಸ್ಸಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡು ಭಾನುವಾರ (ಮೇ 16) ಕಮರ್ಷಿಯಲ್ ಫ್ಲೈಟ್ ನಲ್ಲಿ ದೋಹಾ ಮುಖಾಂತರ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ್ದಾರೆ ಎಂದು ಸಿಎಸ್‌ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಸಿವಿಶ್ವನಾಥನ್ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಐಪಿಎಲ್ ವೇಳೆ ಸೋಂಕಿಗೀಡಾಗಿದ್ದ ಸಿಎಸ್‌ಕೆ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಕೂಡ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಬಾಲಾಜಿ ಮತ್ತು ಹಸ್ಸಿ ಇರುವ ಚಿತ್ರವನ್ನು ಟ್ವಿಟರ್‌ಗೆ ಹಾಕಿಕೊಂಡಿರುವ ಸಿಎಸ್‌ಕೆ, 'ಸಿಎಸ್‌ಕೆ ಪ್ರಮುಖ ಸ್ಫೂರ್ತಿಗಳು ಮರಳಿದ್ದಾರೆ, ಅವರ ತವರಿಗೆ ತಲುಪಿದ್ದಾರೆ' ಎಂದು ಬರೆದುಕೊಂಡಿದೆ.

ಮೇ 17ರ ಸೋಮವಾರ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್ ಸೇರಿದಂತೆ ಇನ್ನೊಂದಿಷ್ಟು ಆಟಗಾರರು ಸಿಡ್ನಿಗೆ ತಲುಪಿದ್ದರು. ಅಂದ್ಹಾಗೆ ಕಳೆದ ವಾರ ಭಾರತದಿಂದ ಬರುವ ತಮ್ಮ ನಿವಾಸಿಗಳ ಮೇಲಿನ ಎರಡು ವಾರಗಳ ನಿಷೇಧವನ್ನು ಆಸ್ಟ್ರೇಲಿಯಾ ತೆರವುಗೊಳಿಸಿತ್ತು.

Story first published: Tuesday, May 18, 2021, 17:45 [IST]
Other articles published on May 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+