MS Dhoni: ಚೆನ್ನೈ ತಂಡದ ಚಿಂತೆ ಹೆಚ್ಚಿಸಿದೆ ಧೋನಿ ಗಾಯ
ಮಹೇಂದ್ರ ಸಿಂಗ್ ಧೋನಿ ಸೋಮವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಾಸ್ಟರ್ ಕ್ಲಾಸ್ ಇನಿಂಗ್ಸ್ ಆಡಿ ಗಮನ ಸೆಳೆದರು. ಇವರ ಈ ಅಮೋಘ ಇನಿಂಗ್ಸ್ ಸಹಾಯದಿಂದ ಚೆನ್ನೈ ಟೂರ್ನಿಯಲ್ಲಿ ಎರಡನೇ ಗೆಲುವಿನ ನಗೆ ಬೀರಿದೆ. ಅಲ್ಲದೆ ಪ್ಲೇ ಆಫ್ ಆಸೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಧೋನಿ ಸಾರಥ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೊಸ ಉತ್ಸಾಹದಲ್ಲಿ ಕಾಣಿಸಿಕೊಳ್ಳಲಿದೆ. ಈ ವೇಳೆ ಆ ಒಂದು ಚಿಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಟೆನ್ಷನ್ ಶುರುಮಾಡಿದೆ.
ಸೋಮವಾರ ಲಕ್ನೋ ಅಂಗಳದಲ್ಲಿ ಮಹೇಂದ್ರ ಸಿಂಗ್ ಧೋನಿ ಮೈದಾನಕ್ಕೆ ಇಳಿಯುವಾಗ ಎಲ್ಲರ ಕಣ್ಣುಗಳು ಅವರ ಮೇಲೆ ನೆಟ್ಟಿದ್ದರು. ಇವರು ಮೈದಾನಕ್ಕೆ ಇಳಿಯುವ ಮುನ್ನವೂ ಮೆಟ್ಟಿಲುಗಳನ್ನು ಹತ್ತಿ ಡ್ರೆಸ್ಸಿಂಗ್ ರೂಮ್‌ನತ್ತ ಹೆಜ್ಜೆ ಹಾಕುತ್ತಿದ್ದಾಗ, ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಾಗ ಕಂಡ ದೃಶ್ಯ ಅವರ ಕಮಿಟ್‌ಮೆಂಟ್‌ಗೆ ಹಿಡಿದ ಕೈಗನ್ನಡಿ. ಇವರು ಕುಂಟುತ್ತಲೇ ಮೈದಾನಕ್ಕೆ ಇಳಿದರು. ಇವರು ಮೈದಾನಕ್ಕೆ ಇಳಿಯುತ್ತಿದ್ದಂತೆ ಮೈದಾನದಲ್ಲಿ ಹೊಸ ಎನರ್ಜಿ ಪಾಸ್ ಅದಷ್ಟೇ ಜೋಶ್ ಪಾಸ್ ಆಯಿತು. ಇವರು ಬ್ಯಾಟಿಂಗ್ ನಡೆಸಿದಾಗ ಅಭಿಮಾನಿಗಳು ಫುಲ್ ಖುಷ್ ಆದರು.

ಈ ಪಂದ್ಯದಲ್ಲಿ ಧೋನಿ ಹೆಚ್ಚಾಗಿ ಸಿಂಗಲ್ ಡಬಲ್ ಓಡುವುದನ್ನು ಕಂಡು ಬಾರಲಿಲ್ಲ. ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕವೇ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡಿದರು. ಇದಕ್ಕೆ ಕಾರಣ ಇವರ ಕಾಲಿನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಇವರು ಕುಂಟುತ್ತಾ ಮೈದಾನದಿಂದ ಹೊರ ಹೋಗುವ ದೃಶ್ಯಗಳು ನಿಜಕ್ಕೂ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಧೋನಿ ಮುಂದಿನ ಪಂದ್ಯ ಆಡುತ್ತಾರಾ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು.
ಚೆನ್ನೈ ನಾಯಕತ್ವ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಇವರ ಸ್ಥಾನವನ್ನು ಧೋನಿ ತುಂಬಿದ್ದರು. ಆದರೆ ಧೋನಿ ಅವರ ಈಗಿನಿ ಸ್ಥಿತಿಯನ್ನು ಕಂಡು ಇವರು ಮುಂದಿನ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಅನುಮಾನ ಶುರುವಾಗಿದೆ. ಧೋನಿ ಈ ಹಿಂದೆಯೂ ಕಾಲಿನ ಗಾಯದಿಂದ ಬಳಲುತ್ತಿದ್ದರು. ಇದಾದ ನಂತರ ಅವರು ಹೆಚ್ಚು ಕಾಲ ಆಡಲು ಸಾಧ್ಯವಾಗಲಿಲ್ಲ. ಸತತ ಐದು ಪಂದ್ಯಗಳಲ್ಲಿ ಸೋತ ಬಳಿಕ ಚೆನ್ನೈ ಸೋಮವಾರ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ಆಡುವುದು ಡೌಟ್
ಐದು ಬಾರಿ ಐಪಿಎಲ್ ಚಾಂಪಿಯನ್ ತಂಡಗಳಾದ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಅಂಗಳದಲ್ಲಿ ಭಾನುವಾರ ಕಾದಾಟ ನಡೆಸಲಿವೆ. ಈ ವೇಳೆ ಈ ಪಂದ್ಯ ವಾಂಖೆಡೆಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಧೋನಿ ಕಣಕ್ಕೆ ಇಳಿಯುತ್ತರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಯಾವುದೇ ಅಪ್‌ಡೇಟ್ ನೀಡಿಲ್ಲ. ಧೋನಿ ಸಂಪೂರ್ಣವಾಗಿ ಫಿಟ್ ಆಗಿಲ್ಲದಿದ್ದರೆ, ಅವರು ಮುಂಬರುವ ಪಂದ್ಯಗಳಿಂದ ಹೊರಗುಳಿಯಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications