ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುವ ಆಟಗಾರರಿಗೆ ಹಣವನ್ನು ಹೂಡಿದೆ. ಇತಿಹಾಸದಲ್ಲಿ ಅನ್‌ಕ್ಯಾಪ್ಡ್ ಆಟಗಾರರಿಗೆ ಅತಿ ಹೆಚ್ಚು ಹಣವನ್ನು ಹೂಡಿದೆ. ಈ ಬಾರಿ ದೇಶೀಯ ಟೂರ್ನಿಯಲ್ಲಿ ಮಿಂಚಿದ್ದ ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್ ಅವರಿಗೆ ಚೆನ್ನೈ ಭಾರೀ ಹಣವನ್ನು ಹೂಡಿದೆ.
ಈ ಬಾರಿಯ ಹರಾಜಿಗೆ ಚೆನ್ನೈ ಒಟ್ಟು 43.30 ಕೋಟಿ ರೂ.ಗಳೊಂದಿಗೆ ಅಂಗಳ ಪ್ರವೇಶಿಸಿತ್ತು. ಈ ವೇಳೆ 9 ಆಟಗಾರರನ್ನು ಖರೀದಿಸುವ ಅವಕಾಶ ಇತ್ತು. ಈ ವೇಳೆ ಚೆನ್ನೈ ಅನ್‌ಕ್ಯಾಪ್ಡ್ ಆಟಗಾರರಿಗೆ ಹಣವನ್ನು ಹೂಡಿತು. ತನ್ನ ಬಳಿ ಇದ್ದ ಅರ್ಧಕ್ಕಿಂತ ಹೆಚ್ಚು ಹಣವನ್ನು ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್ ಅವರ ಮೇಲೆ ಹೂಡಿತು. ಈ ಇಬ್ಬರೂ ಆಟಗಾರರ ಬಗ್ಗೆ ಈಗ ಚರ್ಚೆಗಳು ಆರಂಭವಾಗಿವೆ. 20 ವರ್ಷದ ಪ್ರಶಾಂತ್ ವೀರ್ ಮತ್ತು 19 ವರ್ಷದ ಕಾರ್ತಿಕ್ ಶರ್ಮಾ ಹರಾಜು ಇತಿಹಾಸ ನಿರ್ಮಿಸಿದ್ದಾರೆ.

19 ವರ್ಷದ ಕಾರ್ತಿಕ್ ಶರ್ಮಾ ಹೆಸರು ಹರಾಜಿನ ಅಂಗಳದಲ್ಲಿ ಕೇಳಿ ಬಂದಾಗ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರವಲ್ಲದೆ ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಹಣ ಹೂಡಲು ಮುಂದಾಗಿದ್ದವು. ಆದರೆ ಯಾರೂ ಊಹಿಸದ ರೀತಿಯಲ್ಲಿ ಚೆನ್ನೈ ಈ ಆಟಗಾರನ ಬೆನ್ನಿಗೆ ಬಿದ್ದಿತು. ಅಲ್ಲದೆ ಇವರಿಗೆ ದಾಖಲೆಗೆ 14.20 ಕೋಟಿ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿತು. ಇವರು ವಿಕೆಟ್ ಕೀಪರ್ ಬ್ಯಾಟರ್ ಆಗಿ ಈಗಾಗಲೇ ಸದ್ದು ಮಾಡಿದ್ದಾರೆ.
ಕಾರ್ತಿಕ್ ಶರ್ಮಾ ಕೆಚ್ಚೆದೆಯಿಂದ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರು ಬಿಗ್ ಹಿಟ್ ಬಾರಿಸಲು ಹೆಸರುವಾಸಿ. ಇವರು ಇವರೆಗೆ ದೇಶೀಯ ಟೂರ್ನಿಯಲ್ಲಿ ಆಡಿರುವ 12 ಟಿ20 ಪಂದ್ಯಗಳಲ್ಲಿ, 164 ರ ಸ್ಫೋಟಕ ಸ್ಟ್ರೈಕ್ ರೇಟ್‌ನಲ್ಲಿ 334 ರನ್‌ಗಳನ್ನು ಗಳಿಸಿದ್ದು 28 ಸಿಕ್ಸರ್ ಬಾರಿಸಿದ್ದಾರೆ. ಇವರು ಕ್ಲೀನ್ ಹಿಟ್ಟಿಂಗ್ ಇವರ ಮೇಲೆ ಚೆನ್ನೈ ಹಣ ಹೂಡುವಂತೆ ಮಾಡಿದೆ. ಇವರು ಫಿನಿಷರ್ ಪಾತ್ರವನ್ನು ಸಹ ನಿಭಾಯಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಒತ್ತಡದಲ್ಲಿ ಸಮಯೋಚಿತ ಬ್ಯಾಟಿಂಗ್ ಮಾಡುವ ಕಲೆಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಧೋನಿ ಉತ್ತರಾಧಿಕಾರಿಯನ್ನು ಹುಡುಕುತ್ತಿರುವ ಸಿಎಸ್‌ಕೆ ಇವರು ಬೆಸ್ಟ್ ಚಾಯ್ಸ್ ಆಗಬಹುದು.
ಉತ್ತರ ಪ್ರದೇಶ ಟಿ20 ಲೀಗ್‌ನಲ್ಲಿ ಎಲ್ಲರ ಗಮನ ಸೆಳೆದ ಆಟಗಾರ ಪ್ರಶಾಂತ್ ವೀರ್. 20 ವರ್ಷದ ಯುವ ಆಟಗಾರ ಎಡಗೈ ಸ್ಪಿನ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡಲು ಹೆಸರುವಾಸಿ. ದೇಶೀಯ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ರವೀಂದ್ರ ಜಡೇಜಾ ಅವರಿಗೆ ಬದಲಿ ಆಟಗಾರನ ಹುಡುಕಾಟದಲ್ಲಿರುವ ಸಿಎಸ್‌ಕೆ ಪ್ರಶಾಂತ್ ವೀರ್ ಒಳ್ಳೆಯ ಆಯ್ಕೆ. ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡಿದ್ದು ಖುಷಿ ತಂದಿದೆ ಎಂದು ಪ್ರಶಾಂತ್ ವೀರ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪರ ಆಲ್‌ರೌಂಡರ್ ಪರ ಆಡುವ ಪ್ರಶಾಂತ್ ವೀರ್ ತಮ್ಮ ಪವರ್ ಹಿಟ್ಟಿಂಗ್‌ನಿಂದ ಹೆಸರು ಮಾಡಿರುವವ ಆಟಗಾರ. ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ, ಇವರು ಆಡಿದ ಏಳು ಪಂದ್ಯಗಳಲ್ಲಿ 169.19 ಸ್ಟ್ರೈಕ್ ರೇಟ್‌ನಲ್ಲಿ 112 ರನ್ ಸಿಡಿಸಿದ್ದಾರೆ. ಈ ಮೂಲಕ ಇವರ ಮೂಲ ಬೆಲೆ 30 ಲಕ್ಷ ರೂ. ಆಗಿತ್ತು.