PSL ಬೆಸ್ಟ್ ಎಂದ ಪಾಕ್ ಪತ್ರಕರ್ತನಿಗೆ ರಾಬಿನ್ ಉತ್ತಪ್ಪ ನೀಡಿದ್ರು ತೀಕ್ಷ್ಣ ಪ್ರತ್ಯುತ್ತರ!

ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳಿರುವಾಗ ಐಪಿಎಲ್ ಹಾಗೂ ಪಿಎಸ್‌ಲ್ ಮಧ್ಯೆ ಯಾವುದು ಶ್ರೇಷ್ಠ ಎಂಬ ಚರ್ಚೆ ನಡೆಯುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ನೀಡಿರುವ ಹೇಳಿಕೆಯಿಂದ ಆರಂಭವಾದ ಈ ಚರ್ಚೆಗೆ ಅನೇಕ ಮಾಜಿ ಹಾಲಿ ಕ್ರಿಕೆಟಿಗರು ತಮ್ಮದೇ ಆಟ ಕಾರಣಗಳನ್ನು ನೀಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಪಿಎಸ್‌ಎಲ್ ಪರವಾಗಿ ಸಹಜವಾಗಿಯೇ ಪಾಕಿಸ್ತಾನದ ಹಾಲಿ ಹಾಗೂ ಮಾಜಿ ಆಟಗಾರರು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು ಈಗ ಪಾಕಿಸ್ತಾನದ ಪತ್ರಕರ್ತರೊಬ್ಬರು ಕೂಡ ಈ ಟ್ವೀಟ್ ಮೂಲಕ ಪಾಕಿಸ್ತಾನ ಸೂಪರ್ ಲೀಗ್ ಬೆಸ್ಟ್ ಎಂಬ ಹೇಳಿಕೆಯನ್ನು ಬೆಂಬಲಿಸಿ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನದ ಪತ್ರಕರ್ತನ ಈ ಅಭಿಪ್ರಾಯಕ್ಕೆ ಹಿರಿಯ ಆಟಗಾರ ರಾಬಿನ್ ಉತ್ತಪ್ಪ ತೀಕ್ಷ್ಣ ಪ್ರತಿಕ್ರಿಯೆ ನೀಡುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಈ ಮೂಲಕ ಯಾವುದು ಶ್ರೇಷ್ಠ ಎಂಬ ಚರ್ಚೆಯಲ್ಲಿ ಐಪಿಎಲ್ ಜೊತೆಗೆ ಪಿಸ್‌ಎಲ್ ಹೋಲಿಕೆ ಸಾಧ್ಯವೇ ಇಲ್ಲ ಎಂಬರ್ಥದ ಮಾತನ್ನಾಡಿದ್ದಾರೆ ರಾಬಿನ್ ಉತ್ತಪ್ಪ. ಕೇವಲ ನಾಲ್ಕು ಶಬ್ಧಗಳಲ್ಲಿ ರಾಬಿನ್ ಉತ್ತಪ್ಪ ಪಾಕ್ ಪತ್ರಕರ್ತನಿಗೆ ತಮ್ಮ ಉತ್ತರ ನೀಡಿದ್ದಾರೆ.
ಪಾಕ್ ಪತ್ರಕರ್ತನ ಟ್ವೀಟ್‌ನಲ್ಲೇನಿದೆ?: ಪಾಕಿಸ್ತಾನದ ಪತ್ರಕರ್ತ ತಮ್ಮ ಟ್ವೀಟ್‌ನಲ್ಲಿ ಪಿಎಸ್‌ಎಲ್ ಮತ್ತು ಐಪಿಎಲ್ ಮಧ್ಯೆ ಹೋಲಿಕೆ ಇಲ್ಲ. ಐಪಿಎಲ್ ಟೂರ್ನಿ 2008ರಲ್ಲಿ ಉದ್ಭಾಟನೆಯಾದರೆ ಪಿಎಸ್‌ಎಲ್ 2016 ರಲ್ಲಿ ಪ್ರಾರಂಭವಾಯಿತು. ಆದರೆ ಐಪಿಎಲ್ ಹುಟ್ಟಿದಾಗ ಮಾರುಕಟ್ಟೆಯಲ್ಲಿ ಯಾವುದೇ ಪ್ರತಿಸ್ಪರ್ಧಿ ಇರಲಿಲ್ಲ. ಆದರೆ ಇತರ ಮಂಡಳಿಗಳು ತಮ್ಮ ಲೀಗ್‌ಗಳನ್ನು ಪರಿಚಯಿಸಿದ ಸಂದರ್ಭದಲ್ಲಿಯೂ ಪಿಎಸ್‌ಎಸ್ ವಿಶ್ವಾದ್ಯಂತ ಹೆಚ್ಚು ಜನಪ್ರಿಯತೆಯನ್ನು ಗಳಿಸಿತು ಎಂದು ಒಪ್ಪಿಕೊಳ್ಳಬೇಕು" ಎಂದಿದ್ದರು.
ರಾಬಿನ್ ಉತ್ತಪ್ಪ ನೀಡಿದ ಪ್ರತಿಕ್ರಿಯೆ ಏನು?: ಪಾಕಿಸ್ತಾನದ ಪತ್ರಕರ್ತನ ಟ್ವೀಟ್‌ಗೆ ಕನ್ನಡಿಗ ರಾಬಿನ್ ಉತ್ತಪ್ಪ ಟ್ವಿಟ್ಟರ್‌ನಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಉತ್ತಪ್ಪ ನೀಡಿರುವ ಉತ್ತರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. "ಐಪಿಎಲ್ ಮಾರುಕಟ್ಟೆಯನ್ನು ಸೃಷ್ಟಿಸಿತು" ಎನ್ನುವ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಫುಟ್ಬಾಲ್‌ನಲ್ಲಿ ಜನಪ್ರಿಯವಾಗಿದ್ದ ಲೀಗ್ ಮಾದರಿಯನ್ನು ಕ್ರಿಕೆಟ್‌ಗೆ ಪರಿಚಯಿಸುವ ಪ್ರಯತ್ನ 2008ರ ವರೆಗೂ ನಡೆದಿರಲಿಲ್ಲ. ಆದರೆ 2007ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ಗೆದ್ದು ಭಾರೀ ಯಶಸ್ಸು ಸಾಧಿಸಿದ ಬಳಿಕ ಬಿಸಿಸಿಐ ಟಿ20 ಲೀಗ್‌ಅನ್ನು ಹುಟ್ಟು ಹಾಕುವ ಆಲೋಚನೆಯನ್ನು ಮಾಡಿತು. ಇದರಲ್ಲಿ ಭಾರೀ ಯಶಸ್ಸು ಕೂಡ ಸಾಧಿಸುವಲ್ಲಿ ಯಶಸ್ವಿಯಾಯಿತು. ಪ್ರಸ್ತುತ ಕ್ರಿಕೆಟ್ ಆಡುವ ರಾಷ್ಟ್ರಗಳ ಬಹುತೇಕ ಎಲ್ಲಾ ಮಂಡಳಿಗಳು ಕೂಡ ತಮ್ಮದೇ ಆದ ಟಿ20 ಲೀಗ್‌ಗಳನ್ನು ಆರಂಭಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications