For Quick Alerts
ALLOW NOTIFICATIONS  
For Daily Alerts
 

IPL 2026 Auction: ಗತವೈಭವಕ್ಕೆ ಮರಳಲು ಈ ಆಟಗಾರರೆ ಚೆನ್ನೈ ತಂಡದ ಮೊದಲ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಆರಂಭಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ. ಡಿಸೆಂಬರ್ 16 ರಂದು ಐಪಿಎಲ್‌ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯಲಿದೆ. ಈ ವೇಳೆ ಮಾಲೀಕರು ತಮ್ಮ ತಂಡದ ಸಂಯೋಜನೆಗೆ ಒತ್ತು ನೀಡಲಿದ್ದಾರೆ. ತಮ್ಮ ಬಳಿ ಇರುವ ಹಣವನ್ನು ಸ್ಟಾರ್ ಆಟಗಾರರ ಮೇಲೆ ಹೂಡಲು ಮಾಲೀಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಂತೆಯೇ ಎಲ್ಲ ತಂಡಗಳು ಈ ಹರಾಜಿನಲ್ಲಿ ತಾವು ಕೊಳ್ಳಬಹುದಾದ ಆಟಗಾರರ ಶಾರ್ಟ್‌ ಲಿಸ್ಟ್ ಮಾಡಿಕೊಳ್ಳುತ್ತಿವೆ. ಈ ವೇಳೆ ತಂಡಗಳು ಸ್ಟಾರ್ ಆಲ್‌ರೌಂಡರ್‌ಗಳಿಗೆ ರೆಡ್ ಕಾರ್ಪೆಟ್‌ ಹಾಕಲು ಬಿಗ್ ಪ್ಲ್ಯಾನ್ ಮಾಡಿಕೊಂಡಿವೆ.

ಐಪಿಎಲ್‌ನಲ್ಲಿ ದಾಖಲೆಯ ಪ್ರಶಸ್ತಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ (CSK) ಸಹ ಈ ಹರಾಜಿಗೆ ಭರ್ಜರಿ ತಯಾರಿ ನಡೆಸಿದೆ. ಈ ಬಾರಿ ಹರಾಜಿಗೆ ಚೆನ್ನೈ 43.4 ಕೋಟಿ ರೂ.ಗಳೊಂದಿಗೆ ಅಂಗಳ ಪ್ರವೇಶಿಸಲಿದೆ. ಈ ವೇಳೆ 9 ಆಟಗಾರರನ್ನು ಖರೀದಿಸಬಹುದಾಗಿದೆ. ಇದರಲ್ಲಿ 4 ವಿದೇಶಿ ಆಟಗಾರರನ್ನು ಖರೀದಿಸುವ ಅವಕಾಶ ಚೆನ್ನೈ ತಂಡಕ್ಕೆ ಇದೆ. ಈ ಬಾರಿ ಸ್ಟಾರ್ ಡೆವೊನ್ ಕಾನ್ವೆ, ರಾಹುಲ್ ತ್ರಿಪಾಠಿ, ರವೀಂದ್ರ ಜಡೇಜಾ (ವ್ಯಾಪಾರ), ರಚಿನ್ ರವೀಂದ್ರ, ಸ್ಯಾಮ್ ಕರ್ರಾನ್ (ವ್ಯಾಪಾರ), ರವಿಚಂದ್ರನ್ ಅಶ್ವಿನ್ (ನಿವೃತ್ತಿ) ತಂಡದಿಂದ ಹೊರ ನಡೆದಿದ್ದು, ತಂಡವನ್ನು ಬಲ ಗೊಳಿಸಲು ಚೆನ್ನೈ ಈ ಮೂವರು ಆಟಗಾರರಿಗೆ ಗಾಳ ಹಾಕುವ ಸಾಧ್ಯತೆ ಇದೆ.

CSK Eyes All-Rounders Liam Livingstone Venkatesh Iyer and Bishnoi for IPL 2026 Mini-Auction

ಲಿಯಾಮ್‌ ಲಿವಿಂಗ್‌ಸ್ಟೋನ್‌

ಆರ್‌ಸಿಬಿ ಕೈ ಬಿಟ್ಟ ಲಿಯಾಮ್‌ ಲಿವಿಂಗ್‌ಸ್ಟೋನ್‌ (Liam Livingstone) ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಸೇರಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಈ ವೇಳೆ ಚೆನ್ನೈ ಹರಾಜಿನಲ್ಲಿ ಇವರಿಗೆ ಹಣದ ಹೊಳೆಯನ್ನು ಹರಿಸಲು ಯೋಜನೆ ರೂಪಿಸಿಕೊಂಡಿದೆ. ಇವರು ಮಿಡ್ಲ್‌ ಆರ್ಡರ್‌ನಲ್ಲಿ ಬ್ಯಾಟಿಂಗ್‌ಗೆ ಬಲ ತುಂಬವ ಆಟಗಾರ. ಅಲ್ಲದೆ ಸ್ಪಿನ್ ಬೌಲಿಂಗ್ ಮೂಲಕವೂ ತಂಡಕ್ಕೆ ನೆರವಾಗಬಲ್ಲರು. ಇಂಗ್ಲೆಂಡ್ ಆಲ್‌ರೌಂಡರ್ ಐಪಿಎಲ್‌ನಲ್ಲಿ ಆಡಿದ 49 ಪಂದ್ಯಗಳಲ್ಲಿ 158ರ ಸ್ಟ್ರೈಕ್‌ ರೇಟ್‌ನಲ್ಲಿ 1051 ರನ್‌ ಕಲೆ ಹಾಕಿದ್ದಾರೆ.

ವೆಂಕಟೇಶ್ ಅಯ್ಯರ್

ಕೋಲ್ಕತ್ತಾ ತಂಡದಿಂದ ರಿಲೀಸ್ ಆಗಿರುವ ವೆಂಕಟೇಶ್ ಅಯ್ಯರ್ (Venkatesh Iyer) ಚೆನ್ನೈ ತಂಡದಲ್ಲಿರುವ ಮತ್ತೊಬ್ಬ ಆಟಗಾರ. ಇವರಿಗೆ ಕೆಕೆಆರ್‌ ಕಳೆದ ಬಾರಿಯ ಹರಾಜಿನಲ್ಲಿ 23.75 ಕೋಟಿ ನೀಡಿ ತಮ್ಮ ತಂಡಕ್ಕೆ ಖರೀದಿಸಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ಇವರು ಆಡಿದ 7 ಪಂದ್ಯಗಳಲ್ಲಿ 142 ರನ್‌ ಮಾತ್ರ ಸಿಡಿಸಿದ್ದಾರೆ. ಇವರು ಮಿಡ್ಲ್ ಆರ್ಡರ್‌ನಲ್ಲಿ ತಂಡಕ್ಕೆ ಬಲ ತುಂಬ ಬಲ್ಲ ಪ್ಲೇಯರ್. ಅಲ್ಲದೆ ಇವರು ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲ ಕ್ಷಮತೆ ಹೊಂದಿದ್ದಾರೆ. ಇವರು ಐಪಿಎಲ್‌ನಲ್ಲಿ 3094 ರನ್‌ ಕಲೆ ಹಾಕಿದ್ದು, ಇದರಲ್ಲಿ 17 ಅರ್ಧಶತಕಗಳು ಸೇರಿವೆ.

ರವಿ ಬಿಷ್ಣೋಯಿ

ಚೆನ್ನೈ ಸೂಪರ್ ಕಿಂಗ್ಸ್ ತನ್ನ ಸ್ಪಿನ್ ವಿಭಾಗವನ್ನು ಬಲ ಪಡಿಸಿಕೊಳ್ಳಲು ರವಿ ಬಿಷ್ಣೋಯಿ (Ravi Bishnoi) ಅವರನ್ನು ಟಾರ್ಗೆಟ್ ಮಾಡಲಿದೆ. ಸ್ಪಿನ್ ಖ್ಯಾತ ನಾಮರಾದ ರವೀಂದ್ರ ಜಡೇಜಾ ಹಾಗೂ ಆರ್‌ ಅಶ್ವಿನ್‌ ತಂಡವನ್ನು ತೊರೆದಿದ್ದರಿಂದ ಇವರ ಸ್ಥಾನವನ್ನು ತುಂಬ ಬಲ್ಲ ಆಟಗಾರನ ಹುಡುಕಾಟವನ್ನು ಚೆನ್ನೈ ನಡೆಸಲಿದೆ. ರವಿ ಬಿಷ್ಣೋಯಿ ಅವರನ್ನು ಎಲ್‌ಎಸ್‌ಜಿ ಕೈ ಬಿಟ್ಟಿದೆ. ಇವರು ಕಳೆದ ಆವೃತ್ತಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 9 ವಿಕೆಟ್‌ ಪಡೆದಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ 25 ವರ್ಷ ಯುವ ಬೌಲರ್ ರವಿ ಬಿಷ್ಣೋಯಿ 61 ವಿಕೆಟ್‌ ಕಬಳಿಸಿದ್ದಾರೆ.

Story first published: Wednesday, December 10, 2025, 14:52 [IST]
Other articles published on Dec 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+