ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಈ ಆವೃತ್ತಿಯ ಐಪಿಎಲ್‌ನಲ್ಲಿ ಮತ್ತೊಂದು ಸೋಲು ಕಂಡಿದೆ. ಈ ಮೂಲಕ 5 ಬಾರಿ ಚಾಂಪಿಯನ್ ಸಿಎಸ್‌ಕೆ 19ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿದೆ. ಕಳೆದ ಕೆಲವು ವರ್ಷಗಳಲ್ಲಿ ಸಿಎಸ್‌ಕೆ ನೀಡುತ್ತಿರುವ ಪ್ರದರ್ಶನ ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಈ ಬಾರಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ಗೆಲುವಿನ ಖಾತೆ ಓಪನ್ ಮಾಡದೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆರ್‌ಸಿಬಿ ವಿರುದ್ಧ ಪಂದ್ಯವನ್ನು ಸೋತರೂ ಸಹ ಚೆನ್ನೈ ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಈ ಸುದ್ದಿ ನಿಜಕ್ಕೂ ಸಿಎಸ್‌ಕೆ ಅಭಿಮಾನಿಗಳಿಗೆ ಕೊಂಚ ಸಮಾಧಾನ ತರಿಸಲಿದೆ. ಹಾಗಿದ್ದರೆ ಆ ಸುದ್ದಿ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಆರ್‌ಸಿಬಿ ವಿರುದ್ಧ ಹೈವೋಲ್ಟೇಜ್ ಪಂದ್ಯದಲ್ಲಿ ಸಿಎಸ್‌ಕೆ 43 ರನ್‌ಗಳ ಸೋಲು ಕಂಡಿದೆ. ಈ ಮೂಲಕ ನಿರಾಸೆಯನ್ನು ಅನುಭವಿಸಿದೆ. ರುತುರಾಜ್ ಗಾಯಕ್ವಾಡ್ ಅವರ ಮುಂದಾಳತ್ವದಲ್ಲಿ ಚೆನ್ನೈ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದೆ. ಸಿಎಸ್‌ಕೆ ಈ ಋತುವಿನಲ್ಲಿ ತನ್ನ ಮುಂದಿನ ಪಂದ್ಯವನ್ನು ಆರು ದಿನಗಳ ಬಳಿಕ ಆಡಲಿದೆ.

ಚೆನ್ನೈ ಆಟಗಾರರಿಗೆ ವಿಶ್ರಾಂತಿ ಹಾಗೂ ತಯಾರಿ ಸಾಕಷ್ಟು ಸಮಯ ಸಿಗಲಿದೆ. ಈ ನಡುವೆ ಈಗ ಬರುತ್ತಿರುವ ಒಳ್ಳೆಯ ಸುದ್ದಿ ಎಂದರೆ ಗಾಯದಿಂದ ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಮುಂದಿನ ಪಂದ್ಯದಲ್ಲಿ ತಂಡವನ್ನು ಸೇರಬಹುದು. ಇವರು ತಂಡದ ಜೊತೆಗೆ ಇದ್ದಾರೆ ಆದರೆ ಗಾಯದ ಸಮಸ್ಯೆಯಿಂದಾಗಿ ಆಡುತ್ತಿಲ್ಲ. ಸಿಎಸ್‌ಕೆ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್, ಬ್ರೆವಿಸ್ ಮುಂದಿನ ಪಂದ್ಯದಲ್ಲಿ ಆಡುವುದನ್ನು ಕಾಣಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಚೆನ್ನೈ ತಂಡ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತವರಿನಲ್ಲಿ ಆಡಲಿದೆ. ಈ ಪಂದ್ಯ ಏಪ್ರಿಲ್ 11 ರಂದು ನಡೆಯಲಿದೆ. ಈ ಪಂದ್ಯಕ್ಕಾಗಿ ಸಾಕಷ್ಟು ಸಮಯವಿದೆ. ಬ್ರೆವಿಸ್ ಫಿಟ್ ಆಗಿ ತಂಡಕ್ಕೆ ಮರಳುವ ಆಸೆ ನಮ್ಮದಾಗಿದೆ ಎಂದು ಕೋಚ್ ಫ್ಲೆಮಿಂಗ್ ತಿಳಿಸಿದ್ದಾರೆ.

ಬ್ರೆವಿಸ್ ಬಿಡುವಿನ ಸಮಯದಲ್ಲಿ ಥ್ರೋ ಡೌನ್ ಅಭ್ಯಾಸವನ್ನು ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಯಾವುದೇ ತೊಂದರೆ ಕಂಡು ಬಂದಿಲ್ಲ ಎಂದು ತಿಳಿದಿದೆ. ಇವರು ಕಳೆದ ಬಾರಿಯ ಐಪಿಎಲ್ ಮಧ್ಯದಲ್ಲಿ ತಂಡವನ್ನು ಸೇರಿದ್ದರು. ಇವರು ಕಳೆದ ಆವೃತ್ತಿಯಲ್ಲಿ ಧಮಾಕೆದಾರ್ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಇವರ ಬ್ಯಾಟಿಂಗ್ ಸಾಮರ್ಥ್ಯವನ್ನು ಕಂಡು ತಂಡ ಇವರನ್ನು ಉಳಿಸಿಕೊಂಡಿತ್ತು. ಈ ಬಾರಿಯ ಐಪಿಎಲ್‌ನಲ್ಲಿ ಇವರು ಮೂರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದು, ಮುಂದಿನ ಪಂದ್ಯ ಸೇರಲು ತಯಾರಿ ನಡೆಸಿದ್ದಾರೆ.