ಗೆಲ್ಲುವ ಪಂದ್ಯ ಕೈಚೆಲ್ಲಿದ ಚೆನ್ನೈ ತಂಡಕ್ಕೆ ವಿಲನ್ ಆದ ನಾಯಕ ಧೋನಿ, ಕೇದಾರ್ ಜಾಧವ್

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ಭರ್ಜರಿ ಜಯ ದಾಖಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಮತ್ತದೇ ಫಾರಂನಲ್ಲಿ ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಬೌಲಿಂಗ್ ಮಾಡಿತ್ತು. ಕೆಕೆಆರ್ ತಂಡವನ್ನು 167ರನ್ನಿಗೆ ನಿಯಂತ್ರಿಸುವಲ್ಲಿ ಚೆನ್ನೈ ಬೌಲರ್ ಗಳು ಯಶಸ್ವಿಯಾಗಿದ್ದರು.
ಆದರೆ, ಸಿಎಸ್ಕೆ ಬ್ಯಾಟ್ಸ್ ಮ್ಯಾನ್ ಗಳು ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು. ಆ ಮೂಲಕ, ಆಡಿದ ಆರು ಪಂದ್ಯದಲ್ಲಿ ನಾಲ್ಕರಲ್ಲಿ ಸೋತು ಚೆನ್ನೈ ತಂಡ, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಅಬುಧಾಬಿಯ ಶೇಖ್ ಝೂಯೇದ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಚೆನ್ನೈ ತಂಡದ ವಿರುದ್ದ ಹತ್ತು ರನ್ ನಿಂದ ಜಯ ಸಾಧಿಸಿದೆ. ಕೋಲ್ಕತ್ತಾ ತಂಡ, ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಸಿಎಸ್ಕೆ ತಂಡದ ಮುಂದಿನ ಮುಖಾಮುಖಿ, ಶನಿವಾರ (ಅ 10) ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ. ಕೆಕೆಆರ್ ವಿರುದ್ದ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಸಿಎಸ್ಕೆ ಸೋಲಲು ಕಾರಣ ಏನು?

ವಾಟ್ಸನ್ ಮತ್ತು ಅಂಬಟಿ ರಾಯಡು ನಡುವೆ 69ರನ್ ಗಳ ಜೊತೆಯಾಟ
167ರನ್ ಟಾರ್ಗೆಟ್ ಅನ್ನು ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಮೊದಲ ವಿಕೆಟ್ ಜೊತೆಯಾಟದಲ್ಲಿ ಮೂವತ್ತು ರನ್ ಜೊತೆಯಾಟ ಬಂತು. ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಡು-ಪ್ಲೆಸಿಸ್ ಹದಿನೇಳು ರನ್ ಗಳಿಸಿ ಔಟಾದರು. ಇದಾದ ನಂತರ ವಾಟ್ಸನ್ ಮತ್ತು ಅಂಬಟಿ ರಾಯಡು ನಡುವೆ 69ರನ್ ಗಳ ಜೊತೆಯಾಟ ಬಂತು. (ಚಿತ್ರ:ಪಿಟಿಐ)

ರನ್ ರೇಟ್ ಕೆಳಕ್ಕಿಳಿಯಲು ಆರಂಭವಾಯಿತು
ಅಲ್ಲಿಯವರೆಗೂ ಜಯದ ದಾರಿಯಲ್ಲೇ ಸಾಗುತ್ತಿದ್ದ ಚೆನ್ನೈ ತಂಡ, ಅಂಬಟಿ ರಾಯಡು ಔಟ್ ಆದಾಗ 12.1 ಓವರ್ ನಲ್ಲಿ 100ರನ್ ದಾಟಿತ್ತು. ಅಲ್ಲಿಂದ ಗೆಲ್ಲಲು 52 ಬಾಲ್ ನಲ್ಲಿ ಕೇವಲ 68ರನ್ ಅಷ್ಟೇ ಬೇಕಾಗಿತ್ತು. ಹದಿಮೂರನೇ ಓವರ್ ನಲ್ಲಿ ವಾಟ್ಸನ್ ಔಟ್ ಆದ ನಂತರ, ರನ್ ರೇಟ್ ಕೆಳಕ್ಕಿಳಿಯಲು ಆರಂಭವಾಯಿತು. (ಚಿತ್ರ:ಪಿಟಿಐ)

ಜಾಧವ್ ಜಯದ ಫಿನಿಷಿಂಗ್ ನೀಡುವಲ್ಲಿ ವಿಫಲ
ಕ್ರೀಸಿಗೆ ಆಗಮಿಸಿದ ಸ್ಯಾಮ್ ಕರ್ರನ್ ಹನ್ನೊಂದು ಬಾಲ್ ನಲ್ಲಿ ಹದಿನೇಳು ರನ್ ಹೊಡೆದು ಔಟಾದರು. ಅದಾದ ನಂತರ, ಕೇದಾರ್ ಜಾಧವ್ ಕ್ರೀಸಿಗೆ ಆಗಮಿಸಿದರು. ದೊಡ್ದ ಹೊಡೆತಕ್ಕೆ ಹೆಸರಾಗಿರುವ ಜಾಧವ್ ಜಯದ ಫಿನಿಷಿಂಗ್ ನೀಡುವಲ್ಲಿ ವಿಫಲರಾದರು. (ಚಿತ್ರ:ಪಿಟಿಐ)

ಸುಲಭವಾಗಿ ಗೆಲ್ಲುವ ಪಂದ್ಯವನ್ನು ಚೆನ್ನೈ ತಂಡ ಕೈಚೆಲ್ಲಿತು
ಧೋನಿ ಮತ್ತು ಕೇದಾರ್ ಜಾಧವ್ ರನ್ ರೇಟ್ ಏರಿಸುವಲ್ಲಿ ವಿಫಲರಾದರು. ಧೋನಿ ಹನ್ನೆರಡು ಬಾಲ್ ನಲ್ಲಿ ಹನ್ನೊಂದು ಮತ್ತು ಜಾಧವ್ ಎರಡು ಓವರ್ ನಲ್ಲಿ ಕೇವಲ ಏಳು ರನ್ ಗಳಿಸಲಷ್ಟೇ ಶಕ್ತರಾದರು. ಆ ವೇಳೆ, ಸಿಎಸ್ಕೆ ಗೆಲುವಿಗೆ ರನ್ ರೇಟ್ ಸರಾಸರಿ ಹದಿನಾರರ ಆಸುಪಾಸಿನಲ್ಲಿತ್ತು. ಒಟ್ಟಿನಲ್ಲಿ, ಸುಲಭವಾಗಿ ಗೆಲ್ಲುವ ಪಂದ್ಯವನ್ನು ಚೆನ್ನೈ ತಂಡ ಕೈಚೆಲ್ಲಿತು. (ಚಿತ್ರ:ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications