Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆವತ್ತು ನನ್ನ ಹೃದಯಕ್ಕೆ ಚೂರಿಯಿಂದ ತಿವಿದಂತೆ ಅನ್ನಿಸಿತ್ತು: ದಿನೇಶ್ ಕಾರ್ತಿಕ್

CSK picked MS Dhoni over me says Dinesh Karthik

ಚೆನ್ನೈ, ಏಪ್ರಿಲ್ 23: ತಮಿಳುನಾಡು ಕ್ರಿಕೆಟ್‌ ತಂಡದ ಆಕರ್ಣೀಯ ಬ್ಯಾಟ್ಸ್‌ಮನ್, ನಿದಹಾಸ್ ಟ್ರೋಫಿಯಲ್ಲಿ ಭಾರತ ಗೆಲ್ಲಿಸಿದ್ದ ಹೀರೋ ದಿನೇಶ್ ಕಾರ್ತಿಕ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಒಮ್ಮೆಯೂ ಆರಿಸಿಲ್ಲವಂತೆ. ಈಗ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕರಾಗಿರುವ ಡಿಕೆಗೆ ಹಿಂದೆ ಸಿಎಸ್‌ಕೆ ಬಗ್ಗೆ ಬೇಸರಾವಗಿತ್ತಂತೆ. ಹೀಗೆಂದು ಅವರೇ ಹೇಳಿಕೊಂಡಿದ್ದಾರೆ.

ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ನಡೆಯುವಾಗ ಸಿಎಸ್‌ಕೆ ಫ್ರಾಂಚೈಸಿ, ದಿನೇಶ್ ಕಾರ್ತಿಕ್ ಅವರನ್ನು ಆರಿಸದಿದ್ದುದು ನೋಡಿ ಡಿಕೆಗೆ ಆಘಾತವಾಗಿತ್ತಂತೆ. ಸಿಎಸ್‌ಕೆ ತನ್ನನ್ನು ಆರಿಸಿಯೇ ಆರಿಸುತ್ತದೆ ಎಂದು ಎದುರುನೋಡುತ್ತಿದ್ದ ದಿನೇಶ್‌ಗೆ ಅಂದು ತುಂಬಾ ಬೇಸರವಾಗಿತ್ತಂತೆ.

ಕ್ರಿಕ್‌ಬಝ್‌ನಲ್ಲಿ ಹರ್ಷ ಭೋಗ್ಲೆ ಜೊತೆ ಮಾತನಾಡುತ್ತ ದಿನೇಶ್ ಕಾರ್ತಿಕ್ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. 'ಆವತ್ತು ಸಿಎಸ್‌ಕೆ ನನ್ನನ್ನು ಆರಿಸದಿದ್ದದ್ದು ನೋಡಿ ಎದೆಗೆ ಚೂರಿ ಚುಚ್ಚಿದ ಹಾಗನ್ನಿಸಿತ್ತು,' ಎಂದಿದ್ದಾರೆ. ಡಿಕೆ ಒಟ್ಟಿಗೆ ಆರು ಐಪಿಎಲ್ ಫ್ರಾಂಚೈಸಿಗಳ ಪರ ಆಡಿದ್ದಾರೆ. ಆದರೆ ಒಮ್ಮೆಯೂ ಮೂರು ಬಾರಿಯ ಚಾಂಪಿಯನ್ ಪಟ್ಟ ಗೆದ್ದಿದ್ದ ಸಿಎಸ್‌ಕೆಗಾಗಿ ಆರಿಸಲ್ಪಟ್ಟಿಲ್ಲ.

'2008ರಲ್ಲಿ ಹರಾಜು ಆರಂಭವಾಗುವಾಗ ನಾನು ಆಸ್ಟ್ರೇಲಿಯಾದಲ್ಲಿದ್ದೆ. ತಮಿಳುನಾಡು ತಂಡದಲ್ಲಿ ದೊಡ್ಡ ಹೆಸರಿದ್ದರಿಂದ, ಟೀಮ್ ಇಂಡಿಯಾ ಪರ ಆಡುತ್ತಲೂ ಇದ್ದಿದ್ದರಿಂದ ನಾನು ಸಿಎಸ್‌ಕೆ ತಂಡದಿಂದ ಆರಿಸಿಯೇ ಆರಿಸಲ್ಪಡುತ್ತೇನೆ ಎಂದು ನಂಬಿದ್ದೆ. ನನ್ನನ್ನು ತಂಡದ ನಾಯಕ ಮಾಡಬಹುದೇ ಎಂದೆಲ್ಲ ಆಯೋಚನೆ ಇತ್ತು. ಆದರೆ ತಂಡಕ್ಕೆ ಆರಿಸಲ್ಪಡದಿದ್ದದ್ದು ನೋಡಿ ನೋವಾಗಿತ್ತು,' ಎಂದು ಡಿಕೆ ವಿವರಿಸಿದರು.

'ಎಂಎಸ್ ಧೋನಿಯನ್ನು ಸಿಎಸ್‌ಕೆ 1.5 ಮಿಲಿಯನ್‌ಗೆ ಆರಿಸಿದ್ದನ್ನು ನೋಡಿದೆ. ಆ ಹೊತ್ತು ಧೋನಿ ನನ್ನ ಹತ್ತಿರದಲ್ಲೇ ಕುಳಿತಿದ್ದರು. ಆದರೆ ಸಿಎಸ್‌ಕೆ ನನ್ನನ್ನು ಆರಿಸಿತು ಎಂದು ಒಂದು ಮಾತನ್ನೂ ಧೋನಿ ಹೇಳಲಿಲ್ಲ. ಬಹುಶಃ ಧೋನಿಗೆ ಆ ವಿಚಾರ ಗೊತ್ತಿರಲಿಲ್ಲವೋ ಏನೋ. ಆದರೆ ಆ ಹೊತ್ತು ಮಾತ್ರ ನನ್ನ ಹೃದಯಕ್ಕೆ ಚೂರಿಯಿಂದ ಚುಚ್ಚಿದಾಗೆ ಅನ್ನಿಸಿತ್ತು,' ಎಂದು ಕಾರ್ತಿಕ್ ಹೇಳಿದರು.

Story first published: Thursday, April 23, 2020, 16:23 [IST]
Other articles published on Apr 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+