Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಮೆಗಾ ಹರಾಜು 2025: ಆರ್‌ಸಿಬಿ ಆನ್‌ಕ್ಯಾಪ್ಡ್ ಪ್ಲೇಯರ್ಸ್ ಮೇಲೆ ಸಿಎಸ್‌ಕೆ ಕಣ್ಣು

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮೆಗಾ ಹರಾಜು ಪ್ರಕ್ರಿಯೆ ಸಮೀಪಿಸುತ್ತಿದೆ. ಇದಕ್ಕಾಗಿ ಎಲ್ಲಾ ಐಪಿಎಲ್ ಫ್ರಾಂಚೈಸಿ ತಂಡಗಳು ತಯಾರು ನಡೆಸುತ್ತಿವೆ. ಈಗಾಗಲೇ ಮೆಗಾ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ನಿಮಯಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜಾರಿ ಮಾಡಿದೆ.

ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಗೂ ಮೊದಲು ಫ್ರಾಂಚೈಸಿಗಳು ತಮ್ಮ ನೆಚ್ಚಿನ ಹಾಗು ತಂಡಕ್ಕೆ ಉಪಯುಕ್ತವಾಗುವ ಆಟಗಾರರನ್ನು ಉಳಿಸಿಕೊಳ್ಳುವತ್ತ ಗಮನಹರಿಸಿವೆ. ಏಕೆಂದರೆ ಅಕ್ಟೋಬರ್ 31ರ ಒಳಗೆ ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ಗಡುವು ನೀಡಲಾಗಿದೆ. ಇದರ ಮಧ್ಯೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಇಬ್ಬರು ಆನ್‌ಕ್ಯಾಪ್ಡ್ ಆಟಗಾರರ ಮೇಲೆ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಕಣ್ಣಿಟ್ಟಿದೆ. ಈ ಕುರಿತು ಕಂಪ್ಲೇಟ್ ಸ್ಟೋರಿ ಇಲ್ಲಿದೆ.

CSK ready to bid for RCB uncapped players in IPL Mega Auction 2025

ಕಳೆದ ಬಾರಿಗಿಂತ 2025ರ ಐಪಿಎಲ್ ಟೂರ್ನಿಯ ಬಹಳ ಕುತೂಹಲ ಮೂಡಿಸಿದೆ. ಕೆಲವು ತಂಡಗಳು ಹರಾಜಿನಲ್ಲಿ ದೇಶೀಯ ಸ್ಟಾರ್ ಆನ್‌ಕ್ಯಾಪ್ಡ್ ಆಟಗಾರರ ಮೇಲೆ ಕಣ್ಣಿಟ್ಟಿವೆ. ಸಿಎಸ್‌ಕೆ ಕೂಡ ಮುಂದಿನ ಆವೃತ್ತಿಯಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಚಿಂತನೆ ನಡೆಸುತ್ತಿವೆ. ಮಾಜಿ ನಾಯಕ ಎಂಎಸ್ ಧೋನಿ ಐಪಿಎಲ್ 2025ರಲ್ಲಿ ಆಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಜೊತೆಗೆ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದು ಸಿಎಸ್‌ಕೆ ಫ್ರಾಂಚೈಸಿಗೆ ದೊಡ್ಡ ಪ್ರಶ್ನೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿಯ ಇಬ್ಬರು ಭರವಸೆ ಆನ್‌ಕ್ಯಾಪ್ಡ್ ಆಟಗಾರರ ಮೇಲೆ ಸಿಎಸ್‌ಕೆ ಕಣ್ಣಿಟ್ಟಿದೆ.

ಆರ್‌ಸಿಬಿ ಆನ್‌ಕ್ಯಾಪ್ಡ್ ಪ್ಲೇಯರ್ಸ್

ಮುಂಬರುವ ಐಪಿಎಲ್ 2025ರ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿ ವಿಕೆಟ್‌ಕೀಪರ್-ಬ್ಯಾಟರ್ ಅನುಜ್ ರಾವತ್ ಮತ್ತು ಬ್ಯಾಟಿಂಗ್ ಆಲ್‌ರೌಂಡರ್ ಮಹಿಪಾಲ್ ಲೊಮ್ರೋರ್ ಅವರನ್ನು ಬಿಡ್ ಮಾಡಲು ಸಿಎಸ್‌ಕೆ ಭರ್ಜರಿ ತಯಾರಿ ನಡೆಸುತ್ತಿರುವ ಬಗ್ಗೆ ವರದಿಗಳು ತಿಳಿಸಿವೆ. ಅನುಜ್ ರಾವತ್ ಮತ್ತು ಮಹಿಪಾಲ್ ಲೊಮ್ರೋರ್ ಆರ್‌ಸಿಬಿ ಪರ ಹಲವು ಪ್ರಮಖ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಈ ಇಬ್ಬರು ಪ್ರತಿಭೆಗಳನ್ನು ಉಳಿಸಿಕೊಳ್ಳಲು ಆರ್‌ಸಿಬಿ ಕೂಡ ಪ್ಲಾನ್ ಮಾಡಿಕೊಂಡಿದೆ.

Anuj Rawat Mahipal Lomror

ಯುವ ಪ್ರತಿಭೆಗಳತ್ತ ಒಲವು

ರಾವತ್ ಮತ್ತು ಲೊಮ್ರೊರ್ ಅವರನ್ನು ಬಿಡ್ ಮಾಡಲು ಸಿಎಸ್‌ಕೆ ತಯಾರಿ ನಡೆಸುತ್ತಿರುವುದಕ್ಕೆ ಮುಖ್ಯ ಕಾರಣ ಕೂಡ ಇದೆ. ಈ ಇಬ್ಬರನ್ನು ಸಿಎಸ್‌ಕೆ ತಂಡದ ದೀರ್ಘಾವಧಿಯ ಕಾರ್ಯತಂತ್ರದ ಭಾಗವಾಗಿಸಲು ಬಯಸಿದೆ. ಸಿಎಸ್‌ಕೆ ಇಲ್ಲಿವರೆಗೂ ಅನುಭವಿ ಆಟಗಾರರ ಬಲದ ಮೇಲೆ ತಂಡವನ್ನು ಕಟ್ಟಿದ್ದು, ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಆದರೆ ಮುಂಬರುವ ಆವೃತ್ತಿಯಲ್ಲಿ ಸಿಎಸ್‌ಕೆ ಯುವ ಪ್ರತಿಭೆಗಳೊಂದಿಗೆ ತಂಡವನ್ನು ಮುನ್ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಒಂದು ವೇಳೆ ರಾವತ್ ಸಿಎಸ್‌ಕೆ ಸೇರಿದರೆ ಅವರಿಂದ ತಂಡ ಸಂಪೂರ್ಣ ಲಾಭ ಪಡೆಯಲಿದೆ. ಅವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಚ್ಚು ಹೆಸರುವಾಸಿಯಾಗಿದ್ದು, ನಾಯಕ ಋತುರಾಜ್ ಗಾಯಕ್ವಾಡ್ ಅಥವಾ ಡೆವೊನ್ ಕಾನ್ವೆ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಬಹುದಾಗಿದೆ. ಇದು ಸಿಎಸ್‌ಕೆ ಬ್ಯಾಟಿಂಗ್ ಲೈನ್‌ಆಪ್‌ಗೆ ಮತ್ತಷ್ಟು ಬಲಬಂತಾಗುತ್ತದೆ. ಇದಲ್ಲದೆ, ಧೋನಿ ಮುಂದಿನ ಆವೃತ್ತಿಯಲ್ಲಿ ಆಡದಿದ್ದರೆ, ಅವರ ಬದಲಿಗೆ ರಾವತ್ ವಿಕೆಟ್‌ಕೀಪಿಂಗ್ ಜವಾಬ್ದಾರಿಯನ್ನು ಹೊತ್ತಿಕೊಳ್ಳಬಹುದು. ಈ ಎಲ್ಲವನ್ನು ಯೋಚಿಸಿರುವ ಸಿಎಸ್‌ಕೆ ರಾವತ್ ಕರೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಲೊಮ್ರೋರ್ ತನ್ನ ಬೌಲಿಂಗ್ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್‌ನೊಂದಿಗೆ ಸಿಎಸ್‌ಕೆ ತಂಡಕ್ಕೆ ನೆರವಾಗಬಹುದು. ಕಳೆದ ಬಾರಿ ಆರ್‌ಸಿಬಿ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೀಳಿರುವ ಲೊಮ್ರೋರ್ ಗೆಲುವಿನ ಕಾಣಿಕೆಗೆ ನೀಡಿದ್ದಾರೆ. ವಿಶೇಷವಾಗಿ ಅವರು ಹೆಚ್ಚುವರಿ ಸ್ಪಿನ್ನರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಇಂತಹ ಸ್ಟಾರ್ ಯುವ ಆಟಗಾರರನ್ನು ಆರ್‌ಸಿಬಿ ಉಳಿಸಿಕೊಳ್ಳುವುದೇ ಕಾದು ನೋಡಬೇಕಾಗಿದೆ.

Story first published: Friday, October 11, 2024, 7:45 [IST]
Other articles published on Oct 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+