ಐಪಿಎಲ್ 2023ನೇ ಆವೃತ್ತಿಗೆ ಧೋನಿ ಸಿದ್ಧತೆ ಆರಂಭ: ಜೆಎಸ್‌ಸಿಎಯಲ್ಲಿ ಮಾಹಿ ತಾಲೀಮು ಶುರು

ಒಂದೆಡೆ ಟೀಮ್ ಇಂಡಿಯಾ ಸೇರಿದಂತೆ ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ದೇಶಗಳ ತಂಡಗಳ ಆಟಗಾರರು ಆಸ್ಟ್ರೇಲಿಯಾಗೆ ತೆರಳಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ನಾವೇ ಗೆಲ್ಲಬೇಕು ಎಂದು ಪ್ರತಿ ತಂಡವು ಕೂಡ ಸರ್ವ ಪ್ರಯತ್ನ ನಡೆಸುತ್ತಿದೆ. ಇತ್ತ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಕೂಡ ಮತ್ತೆ ಮೈದಾನಕ್ಕೆ ಇಳಿದಿದ್ದು ತಾಲೀಮು ಆರಂಭಿಸಿದ್ದಾರೆ. ಅಂದ ಹಾಗೆ ಧೋನಿ ತಯಾರಿ ಆರಂಭಿಸಿರುವುದು ಮುಂದಿನ ವರ್ಷದ ಐಪಿಎಲ್ ಆವೃತ್ತಿಗೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಾಗೂ ದೇಶೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿರುವ ಧೋನಿ ಸದ್ಯ ಭಾಗಿಯಾಗುತ್ತಿರುವುದು ಐಪಿಎಲ್ ಟೂರ್ನಿಯಲ್ಲಿ ಮಾತ್ರ. ಹೀಗಾಗಿ ಬ್ಯಾಟಿಂಗ್ ಲಯವನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಹೀಗಾಗಿ ಮಾಹಿ ಈಗಿನಿಂದಲೇ ತರನೇತಿ ಆರಂಭಿಸಿದ್ದಾರೆ. ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೊಸೊಯೇಶನ್ ಕ್ರೀಡಾಂಗಣದಲ್ಲಿ ಮಾಹಿ ತಮ್ಮ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ.
ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನೆಟ್ ಅಭ್ಯಾಸ ನಡೆಸಿದ ಧೋನಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಬೆವರಿಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನ ಅಭ್ಯಾಸದ ತೀವ್ರತೆಯನ್ನು ನೋಡಿದರೆ ಮಾಹಿ 16ನೇ ಆವೃತ್ತಿಯ ಐಪಿಎಲ್‌ಗೆ ಬಹಳಷ್ಟು ಗಂಭೀರವಾಗಿದ್ದಾರೆ ಎಂಬುದು ಅರಿವಾಗುತ್ತದೆ.
ಈ ಬಾರಿ ಚೆನ್ನೈನಲ್ಲಿ ಆಡುವುದು ನಿಜಕ್ಕೂ ವಿಶೇಷ ಎಂದು ಧೋನಿ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. 3 ಸೀಸನ್‌ಗಳ ಸುದೀರ್ಘ ಅಂತರದ ನಂತರ ಧೋನಿ ಮತ್ತು ಸಿಎಸ್‌ಕೆ ಚೆನ್ನೈನಲ್ಲಿ ಆಡಲಿದ್ದಾರೆ. ಮತ್ತು ಭಾರತದ ಮಾಜಿ ನಾಯಕ ತನಗೆ ಮತ್ತು ತನ್ನ ತಂಡಕ್ಕೆ ಮುಂಬರುವ ಐಪಿಎಲ್ ಆವೃತ್ತಿಯನ್ನು ವಿಶೇಷವಾಗಿಸಲು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.
ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ತಮ್ಮ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಸಹಭಾಗಿತ್ವದಲ್ಲಿ ತಮ್ಮ ತರಬೇತಿ ಅಕಾಡೆಮಿಯನ್ನು ಪ್ರಾರಂಭಿಸಿದ್ದಾರೆ. ಚೆನ್ನೈನಲ್ಲಿ ಕೆಲ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗಿದ್ದ ಎಂಎಸ್ ಧೋನಿ ಇದೀಗ ತವರಿಗೆ ಮರಳಿದ್ದು ಕ್ರಿಕೆಟ್ ಚಟುವಟಿಕೆಯನ್ನು ಆರಂಭಿಸಿದ್ದಾರೆ. ಹೀಗಾಗಿ ಎಂಎಸ್ ಧೋನಿ ಅಭಿಮಾನಿಗಳ ಉತ್ಸಾವೂ ಈಗ ಹೆಚ್ಚಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications