For Quick Alerts
ALLOW NOTIFICATIONS  
For Daily Alerts
 

ಧೋನಿ ಐಕಾನಿಕ್ ಜೆರ್ಸಿ ನಂಬರ್ 7 ಬದಲಾಗಲು ಸಂಖ್ಯಾ ಶಾಸ್ತ್ರ ಕಾರಣವೇ

ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡದ ಲೆಜೆಂಡ್‌ ಆಟಗಾರ ಎಂಎಸ್‌ ಧೋನಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲವು ಆವೃತ್ತಿಗಳಲ್ಲಿ ಧೋನಿ ಉದ್ದ ಕೂದಲು ಬಿಟ್ಟು, ಚಿಕ್ಕ ಕೂದಲು ಬಿಟ್ಟು ಅಭಿಮಾನಿಗಳ ಗಮನ ಸೆಳೆದಿದ್ದರು. ಆದರೆ ಈ ಬಾರಿ ಧೋನಿ ತಮ್ಮ ಐಕಾನಿಕ್ ಜೆರ್ಸಿ ನಂಬರ್‌ ಬದಲಿಸಲು ಮುಂದಾಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಜೆರ್ಸಿ ನಂಬರ್‌ 7 ತೊಟ್ಟು ಕಣಕ್ಕೆ ಇಳಿಯುತ್ತಿಲ್ಲ. ಬದಲಿಗೆ ಬೇರೆ ನಂಬರ್‌ ಮೊರೆ ಹೋಗಲಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್‌ ಇಲ್ಲಿದೆ.

ಧೋನಿ 2004 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಂದಿನಿಂದ ಅವರು ಜೆರ್ಸಿ ನಂಬರ್ 7 ಬಳಸುತ್ತಿದ್ದಾರೆ. ಇವರು ಜುಲೈ 7, 1981ರಲ್ಲಿ ಜನಿಸಿದ್ದರಿಂದ ಇದನ್ನೇ ಜೆರ್ಸಿ ನಂಬರ್ ಆಗಿ ಆಯ್ಕೆ ಮಾಡಿಕೊಂಡಿದ್ದರು. ಇದೇ ಜೆರ್ಸಿಯನ್ನು ಇವರು ಐಪಿಎಲ್‌ನಲ್ಲೂ ಬಳಸುತ್ತಿದ್ದರು. ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ಹಾಗೂ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ಪರ ಆಡುವಾಗ ಜೆರ್ಸಿ ನಂಬರ್ 7ನ್ನೇ ಬಳಸಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ಇವರು ತಮ್ಮ ಜೆರ್ಸಿ ನಂಬರ್‌ ಬದಲಿಸಲಿದ್ದಾರೆ.

CSK Star MS Dhoni

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟಾರ್ ಆಟಗಾರ ಧೋನಿ ಅವರು ಮುಂಬರುವ ಐಪಿಎಲ್‌ ಆವೃತ್ತಿಯಲ್ಲಿ 8ನೇ ನಂಬರ್‌ ಜೆರ್ಸಿಯನ್ನು ತೊಟ್ಟು ಆಡಲಿದ್ದಾರೆ ಎಂದು ತಿಳಿದು ಬರುತ್ತಿದೆ. ಇದಕ್ಕೆ ನೆಟ್ಟಿಗರು ತಮ್ಮದೇ ಆಧ ಧಾಟಿಯಲ್ಲಿ ಉತ್ತರವನ್ನು ನೀಡಿದ್ದಾರೆ. "ಕೆಲವು ಸಂಖ್ಯೆಗಳು ನಿಮ್ಮೊಂದಿಗೆ ಇರುತ್ತವೆ, ಮತ್ತು ಸಂಖ್ಯೆ 7 ನನಗೆ ಅವುಗಳಲ್ಲಿ ಒಂದಾಗಿದೆ. ಆದರೆ ಇಂದು, ನಾನು ಅದನ್ನು 8 ಕ್ಕೆ ಬದಲಾಯಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಜೆರ್ಸಿ ನಂಬರ್ ಬದಲಿಸಿದ್ದು ಏಕೆ?

ಇದೇ ವೇಳೆ ಧೋನಿ ಅವರು ಐಪಿಎಲ್‌ 2026ರ ಎಲ್ಲ ಪಂದ್ಯಗಳಿಗೆ ಲಭ್ಯರಿರಲಿದ್ದಾರೆ ಎಂದು ಫ್ರಾಂಚೈಸಿ ಮಾಲೀಕ ಕಾಶಿ ವಿಶ್ವನಾಥನ್ ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ. 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಧೋನಿ ನಾಯಕತ್ವದಿಂದ ಕೆಳಗಿಳಿದು ರುತುರಾಜ್ ಗಾಯಕ್ವಾಡ್ ಅವರಿಗೆ ನೀಡಿದ್ದರು. ಆದರೆ ಕಳೆ ಆವೃತ್ತಿಯಲ್ಲಿ ಇವರು ಗಾಯಕ್ಕೆ ತುತ್ತಾಗಿದ್ದರಿಂದ ಮತ್ತೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಇವರ ಹೆಗಲೇರಿತು.

ಎಂಎಸ್ ಧೋನಿ ತಮ್ಮ ಐಪಿಎಲ್ ವೃತ್ತಿಜೀವನದ ಅಂತಿಮ ಹಂತದಲ್ಲಿ ಜೆರ್ಸಿ ಸಂಖ್ಯೆಯನ್ನು ಏಕೆ ಬದಲಾಯಿಸುತ್ತಿದ್ದಾರೆ? ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಆದರೆ ಜೆರ್ಸಿ ನಂಬರ್ ಬದಲಿಸಲು ಕಾರಣವನ್ನು ಸರಿಯಾದ ಸಮಯದಲ್ಲಿ ತಿಳಿಸುವುದಾಗಿ ಧೋನಿ ಬರೆದುಕೊಂಡಿದ್ದಾರೆ.

ಧೋನಿ ಸಾಧನೆ

44 ವರ್ಷದ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್‌ನಲ್ಲಿ ಒಟ್ಟು 278 ಪಂದ್ಯಗಳನ್ನು ಆಡಿದ್ದು, 38ರ ಸರಾಸರಿಯಲ್ಲಿ 5439 ರನ್‌ ಸಿಡಿಸಿದ್ದಾರೆ. ಇದರಲ್ಲಿ 24 ಅರ್ಧಶತಗಳು ಸೇರಿವೆ. ಧೋನಿ ವಿಕೆಟ್‌ ಹಿಂದೆ 158 ಕ್ಯಾಚ್ ಪಡೆದಿದ್ದಾರೆ.

Story first published: Wednesday, March 18, 2026, 15:34 [IST]
Other articles published on Mar 18, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+