For Quick Alerts
ALLOW NOTIFICATIONS  
For Daily Alerts
 

RCB ತಂಡದ ಮೂವರು ಆಟಗಾರರನ್ನು ಟಾರ್ಗೆಟ್ ಮಾಡಲಿದೆ ಸಿಎಸ್‌ಕೆ

ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2025) 18ನೇ ಆವೃತ್ತಿಯನ್ನು ಮಗಿಸಿದೆ. ಈ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (RCB) ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ವೇಳೆ ಆರ್‌ಸಿಬಿ ಸ್ಥಿರ ಪ್ರದರ್ಶನವನ್ನು ನೀಡಿದೆ. ಆರ್‌ಸಿಬಿ ತಂಡದ ಆಟಗಾರರು ತಮ್ಮ ಸ್ಥಿರ ಪ್ರದರ್ಶನದ ಫಲದಿಂದ ತಂಡದ ಯಶಸ್ಸಿನಲ್ಲಿ ಶ್ರಮಿಸಿದ್ದಾರೆ. ಈ ತಂಡದಲ್ಲಿರುವ ಸ್ಟಾರ್ ಆಟಗಾರರ ಮೇಲೆ ಐಪಿಎಲ್‌ನ ಬೇರೆ ಬೇರೆ ಫ್ರಾಂಚೈಸಿಗಳು ಕಣ್ಣು ನೆಟ್ಟಿವೆ. ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಸಹ ಆರ್‌ಸಿಬಿ ತಂಡದ ಮೂವರು ಆಟಗಾರರನ್ನು ಟಾರ್ಗೆಟ್‌ ಮಾಡುವ ಸಾಧ್ಯತೆ ಇದೆ.

ಸಿಎಸ್‌ಕೆ ಹಾಗೂ ಆರ್‌ಸಿಬಿ ನಡುವಿನ ಜಿದ್ದು ಎಂತಹದ್ದು ಎಂದು ಹೇಳುವ ಅವಶ್ಯಕತೆ ಇಲ್ಲ. ಹೇಗಾದ್ರೂ ಮಾಡಿ ಪಂದ್ಯ ಗೆಲ್ಲಲೇ ಬೇಕು ಎಂದು ಎರಡೂ ತಂಡಗಳು ಭರ್ಜರಿ ರಣ ತಂತ್ರವನ್ನು ಮಾಡಿಕೊಂಡಿರುತ್ತವೆ. ಇದರ ಭಾಗವಾಗಿ ಮುಂದಿನ ಐಪಿಎಲ್‌ಗಾಗಿ ಸಿಎಸ್‌ಕೆ, ಆರ್‌ಸಿಬಿ ತಂಡದ ಮೂರು ಆಟಗಾರರಿಗೆ ಟಾರ್ಗೆಟ್ ಮಾಡಲಿದೆ.

CSK Targets Three RCB Players to Bolster Squad for IPL 2025 After RCB s Championship Win

ಲಿಯಾಮ್‌ ಲಿವಿಂಗ್‌ಸ್ಟೋನ್

ಸೌದಿಯಲ್ಲಿ ನಡೆದಿದ್ದ ಐಪಿಎಲ್‌ ಹರಾಜಿನಲ್ಲಿ 8.75 ಕೋಟಿ ರೂಗೆ ಖರೀದಿಸಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ (Liam Livingstone) ಅವರನ್ನು ಖರೀದಿಸಿತ್ತು. ಇವರು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ 10 ಪಂದ್ಯಗಳಲ್ಲಿ ಕೇವಲ 112 ರನ್‌ ಸಿಡಿಸಿದ್ದರು. ಇವರು ತಮ್ಮ ಕ್ಷಮತೆಗೆ ತಕ್ಕ ಪ್ರದರ್ಶನ ನೀಡಲು ವಿಫಲರಾಗಿದ್ದರು. ಇವರನ್ನು ಆರ್‌ಸಿಬಿ ಕೈ ಬಿಡುವ ಸಾಧ್ಯತೆ ಇದೆ.

ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರನ್ನು ಸಿಎಸ್‌ಕೆ ಗಾಳ ಹಾಕುವ ಸಾಧ್ಯತೆ ಇದೆ. ಇವರ ಆಗಮನದಿಂದ ಸಿಎಸ್‌ಕೆ ಮಿಡ್ಲ್‌ ಆರ್ಡರ್‌ ಬಲಾಢ್ಯವಾಗುತ್ತದೆ. ಇವರು ಮಿಡ್ಲ್ ಆರ್ಡರ್‌ನಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ರನ್‌ ವೇಗಕ್ಕೆ ಚುರುಕು ಮುಟ್ಟಿಸಬಲ್ಲರು. ಹೀಗಾಗಿ ಸಿಎಸ್‌ಕೆ ಇವರನ್ನು ಟಾರ್ಗೆಟ್ ಮಾಡಲಿದೆ.

CSK Targets Three RCB Players to Bolster Squad for IPL 2025 After RCB s Championship Win

ಸುಯೇಶ್‌ ಶರ್ಮಾ

ಆರ್‌ಸಿಬಿ ತಂಡ ಈ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವಲ್ಲಿ ಸುಯೇಶ್ ಶರ್ಮಾ (Suyash Sharma) ಪಾತ್ರ ದೊಡ್ಡದು. ಇವರು ಆರ್‌ಸಿಬಿ ಸ್ಪಿನ್ ವಿಭಾಗಕ್ಕೆ ಬಲ ತುಂಬಿದ ಆಟಗಾರ. ಇವರು 2025ರ ಐಪಿಎಲ್‌ನಲ್ಲಿ 8.84ರ ಎಕನಾಮಿಯಲ್ಲಿ ರನ್‌ ನೀಡಿದ್ದಾರೆ. ಇವರನ್ನು ಚೆನ್ನೈ ಟಾರ್ಗೆಟ್‌ ಮಾಡಲಿದೆ. ಸಿಎಸ್‌ಕೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಸ್ಪಿನ್ ಬೌಲರ್‌ ಹುಡುಕುತ್ತಿದೆ. ಇವರಿಗಾಗಿ ಚೆನ್ನೈ 1.5 ಕೋಟಿಯಿಂದ 2 ಕೋಟಿ ರೂ ವರೆಗೆ ಹಣ ವೆಚ್ಚಮಾಡುವ ಪ್ಲ್ಯಾನ್‌ ಚೆನ್ನೈ ತಂಡದ್ದಾಗಿದೆ.

ರಸಿಕ್ ಸಲಾಂ ದಾರ್

18ನೇ ಆವೃತ್ತಿಗಾಗಿ ನಡೆದ ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ 6 ಕೋಟಿ ರೂ ನೀಡಿ ರಸಿಕ್ ಸಲಾಂ ದಾರ್ (Rasikh Salam Dar) ಅವರನ್ನು ಖರೀದಿಸಿತ್ತು.ಇವರನ್ನು ಆರ್‌ಸಿಬಿ ತೆಕ್ಕೆಯಿಂದ ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ಸಿಎಸ್‌ಕೆ ಪ್ಲ್ಯಾನ್ ಮಾಡಿಕೊಂಡಿದೆ. ಇದರಿಂದ ಚೆನ್ನೈ ತಂಡದ ಬೌಲಿಂಗ್‌ ವಿಭಾಗವನ್ನು ಬಲ ಪಡಿಸುವುದು ಯೋಜನೆ ಆಗಿದೆ.

Story first published: Wednesday, July 9, 2025, 13:44 [IST]
Other articles published on Jul 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+