Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shivam Dubey: ಎಲ್ಲೂ ಸಲ್ಲದವರೂ ಸಿಎಸ್‌ಕೆ ಪರ ಆರ್ಭಟಿಸುತ್ತಿರುವುದು ಹೇಗೆ?

ಹಳದಿ ಜೆರ್ಸಿ ತೊಟ್ಟರೆ ಆ ಪ್ಲೇಯರ್‌ ಮೈಯಲ್ಲಿ ಏನ್‌ ಆವರಿಸಿಕೊಳ್ಳುತ್ತದೋ ಏನೋ ತಿಳಿಯದು.. ಫಾರ್ಮ್‌ನಲ್ಲಿ ಇಲ್ಲದ ಆಟಗಾರ ಸಹ ಈ ಜೆರ್ಸಿ ತೊಟ್ಟ ಮೇಲೆ ಭರ್ಜರಿ ಫಾರ್ಮ್‌ಗೆ ಮರಳುತ್ತಾನೆ. ಈ ಜೆರ್ಸಿಯ ಅಂತಹ ಕಮಾಲ್‌ ಮಾಡಿದೆ. ಅಲ್ಲದೆ ಈ ತಂಡದಲ್ಲಿರುವ ಕೂಲ್‌ ಕ್ಯಾಪ್ಟನ್‌ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಸಹ ಕಮಾಲ್‌ ಮಾಡುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪರ ಮಿಂಚುತ್ತಿರುವ ಇನ್ನೋರ್ವ ಸ್ಟಾರ್ ಆಟಗಾರನ ಪರಿಚಯ ಇಲ್ಲಿದೆ.

ರಾಜಸ್ಥಾನ ರಾಯಲ್ಸ್‌, ರಾಯಲ್‌ ಚಾಲೆಂಜರ್ಸ್ ಬೆಂಗಳುರು ತಂಡದ ಪರ ಐಪಿಎಲ್‌ನಲ್ಲಿ ಆಡಿದಾಗ ಸಿಗದ ಯಶಸ್ಸು ಈ ಪ್ಲೇಯರ್‌ಗೆ ಹಳದಿ ಜೆರ್ಸಿ ತೊಡುತ್ತಿದ್ದಂತೆ ಸಿಕ್ಕಿದೆ. ಈ ಪ್ಲೇಯರ್‌ ಸದ್ಯ ಸಿಎಸ್‌ಕೆ ತಂಡದ ಸ್ಟಾರ್ ಆಲ್‌ರೌಂಡರ್‌ ಸಿಕ್ಕ ಅವಕಾಶವನ್ನು ಬಳಸಿಕೊಂಡ ಈ ಮಿಡ್ಲ್‌ ಆರ್ಡರ್ ಬ್ಯಾಟರ್‌ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುತ್ತಿದ್ದಾರೆ. ಇವರ ಅಂಕಿ ಅಂಗಳು ಸಹ ಇವುಗಳಿಗೆ ಪುಷ್ಠಿ ನೀಡುತ್ತದೆ. ಗುಜರಾತ್ ಟೈಟನ್ಸ್ ತಂಡದ ಪರ ಸ್ಥಿರ ಪ್ರದರ್ಶನ ನೀಡಿ ಸಿಎಸ್‌ಕೆ ಗೆಲುವಿನಲ್ಲಿ ಮಿಂಚಿರುವ ಆಟಗಾರ ಶಿವಂ ದುಬೆ.

CSK Turns Shivam Dube s Fortunes Around Jaw-Dropping Figures Show Remarkable Transformation

ಬಿರುಸಿನ ಬ್ಯಾಟಿಂಗ್

ಗುರಜಾತ್ ಟೈಟನ್ಸ್ ತಂಡದ ಪರ ಕಣಕ್ಕೆ ಇಳಿದ ಶಿವಂ ದುಬೈ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು. ಶಿವಂ ದುಬೆ ಚೆನ್ನೈನ ಅಂಗಳದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು 23 ಎಸೆತಗಳಲ್ಲಿ 51 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ ಸೇರಿವೆ. ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶಿವಂ ದುಬೆ 28 ಎಸೆತಗಳಲ್ಲಿ 34 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ್ದರು. ಪ್ರಸಕ್ತ ಸಾಲಿನಲ್ಲಿ ಶಿವಂ ದುಬೆ ಅವರು ಚೆನ್ನೈ ಸೂಪರ್ ಕಿಂಗ್ಸ್‌ಗೆ ಎಕ್ಸ್ ಫ್ಯಾಕ್ಟರ್. ಈ ಆಲ್ ರೌಂಡರ್ ತನ್ನ ಬ್ಯಾಟಿಂಗ್ ಕ್ಷಮತೆಯ ಮೂಲಕ ರುತುರಾಜ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ.

ಹೇಗಿದೆ ಸಿಎಸ್‌ಕೆ ಪರ ಶಿವಂ ಅಂಕಿ ಅಂಶ

ಚೆನ್ನೈ ಸೂಪರ್ ಕಿಂಗ್ಸ್‌ ಶಿವಂ ದುಬೆ ಅವರ ಲೈಫ್‌ ಚೆಂಜ್‌ ಮಾಡಿತು. ಅಸಲಿಗೆ ಶಿವಂ ದುಬೆ ಬೇರೆ ಯಾರಿಗೂ ಬೇಡವಾದ ಪ್ಲೇಯರ್‌ ಇದ್ದಂತೆ ಇದ್ದರು. ಧೋನಿ ಕ್ಯಾಂಪ್‌ ಪ್ರವೇಶಿಸುತ್ತಿದ್ದಂತೆ ಹೊಸ ಅವತಾರದಲ್ಲಿ ಕಾಣಿಸಿಕೊಂಡರು. ಸಿಎಸ್‌ಕೆ ಪರ ಶಿವಂ ದುಬೆ 27 ಪಂದ್ಯಗಳನ್ನು ಆಡಿದ್ದು, 158.4 ಸ್ಟ್ರೈಕ್ ರೇಟ್‌ನಲ್ಲಿ 792 ರನ್ ಸಿಡಿಸಿದ್ದಾರೆ. 36ರ ಸರಾಸರಿಯಲ್ಲಿ ಬ್ಯಾಟ್ ಮಾಡುವ ಈ ಪ್ಲೇಯರ್‌ ಐದು ಅರ್ಧಶತಕದ ಸಾಧನೆ ಮಾಡಿದ್ದಾರೆ. ಅಲ್ಲದೆ 40 ಬೌಂಡರಿ, 57 ಸಿಕ್ಸರ್‌ ಸಿಡಿಸಿದ್ದಾರೆ.

CSK Turns Shivam Dube s Fortunes Around Jaw-Dropping Figures Show Remarkable Transformation

ಚೆನ್ನೈ ಸೂಪರ್ ಕಿಂಗ್ಸ್‌ ಗುಜರಾತ್‌ ವಿರುದ್ಧ ಬೃಹತ್ ಮೊತ್ತವನ್ನು ಕಲೆ ಹಾಕಿದ ಹಿಂದೆ ಶಿವಂ ದುಬೆ ಅವರ ಪಾತ್ರ ಬಹಳ ಮುಖ್ಯ. ಇವರ ಬಿರುಸಿನ ಆಟದ ಬಲದಿಂದ ಸಿಎಸ್‌ಕೆ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 206 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ ಟೈಟಾನ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 143 ರನ್ ಗಳಿಸಲಷ್ಟೇ ಶಕ್ತವಾಯಿತು.

Story first published: Wednesday, March 27, 2024, 13:00 [IST]
Other articles published on Mar 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+